ಮಂಗಳೂರು: ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು, ಇವರ ಸಹಯೋಗದೊಂದಿಗೆ ವಿಶ್ವ ಔಷಧ ತಜ್ಞರ ದಿನ-2025ನ್ನು ಇತ್ತೀಚಿಗೆ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಡಾ. ನಾಸಿರುದ್ದಿನ್ ಇನಾಮ್‍ದಾರ್, ಪ್ರಾಂಶುಪಾಲರು, ಈಸ್ಟ್ ವೆಸ್ಟ್ ಕಾಲೇಜ್ ಆಫ್ ಫಾರ್ಮಸಿ, ಬೆಂಗಳೂರು, ಇವರು ಸಮಾರಂಭವನ್ನುದ ದೀಪ ಬೆಳಗಿಸಿ ಉದ್ಘಾಟಿಸಿ ತರ್ಕ ಬದ್ಧ ಔಷಧ ಬಳಕೆಯನ್ನು ಉತ್ತೇಜಿಸುವಲ್ಲಿ ಔಷಧ ಮಾಹಿತಿ ಕೇಂದ್ರಗಳಲ್ಲಿ ಔಷಧಿಕಾರರ ಪಾತ್ರ ಮತ್ತು ಔಷಧಾಲಯ ಅಭ್ಯಾಸದ ಕುರಿತು ಮಾತನಾಡಿದರು.
ಅವರ ಜೀವನದ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡರು ಮತ್ತು ಸಾಮಾನ್ಯ ವ್ಯಕ್ತಿ ಔಷಧೀಯ ತಂತ್ರಜ್ಞಾನದಲ್ಲಿ ಹೇಗೆ ಮಹತ್ವದ ಪ್ರಭಾವ ಬೀರಬಹುದು ಎಂಬುದನ್ನು ವಿವರಿಸಿದರು.
ಡಾ.ಎ.ಆರ್ ಶಬರಾಯ, ಪ್ರಾಂಶುಪಾಲರು ಹಾಗೂ ನಿರ್ದೇಶಕರು ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಔಷಧ ವಲಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದ ಅನುಕೂಲಗಳು ಮತ್ತು ಸವಾಲುಗಳ ಕುರಿತು ಚರ್ಚಿಸಿದರು.
ಡಾ.ಕೃಷ್ಣಾನಂದ ಕಾಮತ್ ಕೆ., ಪ್ರೊಪೆಸರ್, ಫಾರ್ಮಸ್ಯುಟಿಕ್ಸ್ ವಿಭಾಗ ಇವರು ಅತಿಥಿಗಳನ್ನು ಸ್ವಾಗತಿಸಿ ಆರೋಗ್ಯ ರಕ್ಷಣೆಯಲ್ಲಿ ಔಷಧಿಕಾರರ ಪಾತ್ರವನ್ನು ವಿವರಿಸಿದರು. ಡಾ. ಪದ್ಮಾವತಿ ಪಿ ಪ್ರಭು, ಪ್ರೊಪೆಸರ್, ಕ್ವಾಲಿಟಿ ಅಶುರೆನ್ಸ್ ವಿಭಾಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ “ಮಾದಕ ವಸ್ತುಗಳ ದುರುಪಯೋಗ ಮತ್ತು ಏಡ್ಸ್” ಕುರಿತು ಕೊಲಾಜ್ ಸ್ಪರ್ಧೆ ಮತ್ತು “ಆರೋಗ್ಯ ರಕ್ಷಣೆಯಲ್ಲಿ ಔಷಧಿಕಾರರ ಪಾತ್ರ” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕುಮಾರಿ ಸ್ಮಿತಾ ಸಿ ಎಸ್ ರೈ, ಅಸಿಸ್ಟೆಂಟ್ ಪ್ರೊಫೆಸರ್ ಇವರು ಕಾರ್ಯಕ್ರಮನ್ನು ನಿರೂಪಿಸಿದರು. ಡಾ. ಕುಮಾರ ಪ್ರಸಾದ್ ಎಸ್ ಎ, ಪ್ರೊಪೆಸರ್, ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇವರು ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


