ಕರ್ನಾಟಕ ರತ್ನ ಪ್ರಶಸ್ತಿಗೆ ಮಾನದಂಡಗಳೇನು? ಸರ್ಕಾರ ಸ್ಪಷ್ಟಪಡಿಬೇಕು

Upayuktha
0


 

ರ್ನಾಟಕ ಸರ್ಕಾರ ಇಬ್ಬರಿಗೆ ಮರಣೋತ್ತರ ಕರ್ನಾಟಕ ರತ್ನ‌ಪ್ರಶಸ್ತಿ ಘೋಷಿಸಿದೆ. ಬಹಳ ಹಿಂದಿನಿಂದಲೂ ಈ ಬಗ್ಗೆ ಜಿಜ್ಞಾಸೆಗಳಿತ್ತು. ಆದರೆ ಈಗ ಸಂದರ್ಭ ಬಂದಿರೋದ್ರಿಂದ ಕೇಳೋದು ಸಾಂದರ್ಭಿಕವೆನಿಸೀತು.


ಸರ್ಕಾರ ಈ ಪ್ರಶಸ್ತಿಗಳ ಮಾನದಂಡವನ್ನು ಜನರಿಗೆ ಮೊದಲಾಗಿ ತಿಳಿಸಬೇಕು. ಯಾಕೆಂದರೆ ಈ ತನಕ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯನ್ನು ನೋಡುವಾಗ ಅನೇಕ ಪ್ರಶ್ನೆಗಳು ಹುಟ್ಟುತ್ತವೆ.


ಈ ತನಕ ಈ ಪ್ರಶಸ್ತಿಗೆ ಕೃಷಿ ಕ್ಷೇತ್ರದಲ್ಲಿ ಬಹಳ ಪ್ರಾಕೃತಿಕ ವೈಪರೀತ್ಯಗಳ ನಡುವೆಯೂ ಶ್ರಮವಹಿಸಿ ದುಡಿದು ಅಸಂಖ್ಯ ಜನರಿಗೆ ಅನ್ನದಾತರೆನಿಸಿದವರು, ಉದ್ಯಮ ಸ್ಥಾಪಿಸಿ ಬಹಳ ಕಠಿಣಾತಿಕಠಿಣ ಸಂದರ್ಭಗಳನ್ನು ಎದುರಿಸುತ್ತಲೇ ಲಕ್ಷಾಂತರ ಕುಟುಂಬಗಳಿಗೆ ಜೀವನಕ್ಕೆ ಆಶ್ರಯದಾತರೆನಿಸಿದವರು, ಕ್ರಿಕೆಟ್ ಮೊದಲಾದ ಕ್ರೀಡಾ ಕ್ಷೇತ್ರಗಳಲ್ಲಿ ವೈಶ್ವಿಕ ಸಾಧನೆ ಮೆರೆದವರು, ಕನ್ನಡದ ನೆಲದಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳನ್ಜು ಸ್ಥಾಪಿಸಿ ದೇಶದ ಆರ್ಥಿಕತೆಗೆ ಮಹೋನ್ನತ ಕೊಡುಗೆ ನೀಡಿದವರು, ಬಹಳಷ್ಟು ಕಲಾ ಪ್ರಕಾರಗಳ ಉನ್ನತ ಸಾಧಕರು, ಪ್ರಕೃತಿಯ ರಕ್ಷಣೆಗೆ ಟೊಂಕಕಟ್ಟಿ ದುಡಿದವರು, ಭಾರತೀಯ ಸೇನೆಯಲ್ಲಿ ಮುನ್ನೆಲೆಯಲ್ಲಿ ನಿಂತು ಕೆಚ್ಚೆದೆಯಿಂದ ದೇಶಸೇವೆ ಸಲ್ಲಿಸಿದ ಕದನ ಕಲಿಗಳು, ನೀರಾವರಿ ಕ್ಷೇತ್ರದ ಮಹಾನ್ ಸಂಶೋಧನೆ ಹಾಗೂ ಚಿಂತಕರು, ನ್ಯಾಯಾಂಗ ಕ್ಷೇತ್ರದ ಸಾಧಕರು, ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಲಕ್ಷಾಂತರ ಜನರಿಗೆ ಉತ್ತಮ ಶಿಕ್ಷಣ ಉದ್ಯೋಗ ನೀಡಿದ ಮಹನೀಯರು, ತಂತ್ರಜ್ಞಾನ ಕ್ಷೇತ್ರದಲ್ಲಿ ತೆರೆಮರೆಯ ಸಂಶೋಧನೆಯ ಮೂಲಕ ಕಂಪ್ಯೂಟರ್, ಕೋಟ್ಯಂತರ ಕನ್ನಡಿಗರ ನುಡಿ ಬಳಕೆಗೆ ನೆರವಾದವರು ಹೀಗೆ ಹೇಳ್ತಾ ಹೋದ್ರೆ ಬಹಳಷ್ಟು ಕ್ಷೇತ್ರಗಳನ್ಜು ಪರಿಗಣಿಸದೇ ಇರುವುದು ಬಹಳ ಬಹಳ ದುಃಖದ ಸಂಗತಿ.


ಮರಣೋತ್ತರ ಪ್ರಶಸ್ತಿಗೆ ಸಾಧಕರು ಎಷ್ಟು ವರ್ಷಗಳ ಹಿಂದೆ ಮರಣಿಸಿರಬೇಕು? ಎಂಬುದೂ ಗೊತ್ತಾಗಬೇಕು. ಮಹನೀಯರ ಕೊಡುಗೆಗಳನ್ನು ಯಾವ ರೀತಿ ಅಂದಾಜಿಸಲಾಗಿದೆ? ಇದೆಲ್ಲ ಗೊತ್ತಾದ್ರೆ ಒಳ್ಳೆಯದು ಅನ್ಸುತ್ತೆ. ಇಲ್ಲಾಂದ್ರೆ ಈ ಪ್ರಶಸ್ತಿಗೆ ಯಾವ ಘನತೆಯೂ ಇರಲಾರದು.‌ ಪ್ರಶಸ್ತಿಯೊಂದಿಗೆ ಸಿಗುವ ಪ್ರಯೋಜನಗಳೇನು? ಕೇವಲ ಶಾಲು ಸ್ಮರಣಿಕೆ ಒಂದಷ್ಟು ಮೊತ್ತವೇ? ಅಥವಾ ಬೆಂಗಳೂರಲ್ಲಿ ಒಂದು ಸೈಟು, ಸರ್ಕಾರಿ ಕಾರ್ಯಕ್ರಮಗಳಿಗೆ ಖಾಯಂ ಆಹ್ವಾನ, ಸಾರಿಗೆ, ಆರೋಗ್ಯ ವ್ಯವಸ್ಥೆಗಳಲ್ಲಿ ಉಚಿತ ಸೌಲಭ್ಯಗಳು ಇತ್ಯಾದಿಗಳೇನಾದ್ರೂ ಇವೆಯೋ? ಎಂಬಿತ್ಯಾದಿಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ರಿಂದ ಒಂದೋ ಸರ್ಕಾರ ಅಥವಾ ಪತ್ರಿಕೆ ಮಾಧ್ಯಮಗಳು ಅಥವಾ ಸಾರ್ವಜನಿಕರು ಈ ಬಗ್ಗೆ ತಿಳಿದಿದ್ದರೆ ತಿಳಿಸಿ ಉಪಕರಿಸಬೇಕು. 


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top