ಎಲ್ಲರೂ ಒಗ್ಗಟ್ಟಾಗಿಆಚರಿಸುವ ಹಬ್ಬ ಓಣಂ: ಡಾ. ಶ್ರೀಧರ್ ನಾೈಕ್
ಪುತ್ತೂರು: “ಓಣಂ ಮುಖ್ಯವಾಗಿ ಕೃಷಿಕರ ಹಬ್ಬವಾಗಿದೆ. ಇತಿಹಾಸದಲ್ಲಿ ಈ ಹಬ್ಬಕ್ಕೆ ಪ್ರಮುಖ ಸ್ಥಾನವಿದೆ. ಭಕ್ತಿ, ದಯೆ ಹಾಗೂ ಶಕ್ತಿಶಾಲಿಯಾಗಿದ್ದ ರಾಜ ಮಹಾಬಲಿಯ ಸ್ವಾಗತಕ್ಕಾಗಿ ಆಚರಿಸಲಾಗುತ್ತಿದೆ. ಹತ್ತು ದಿನಗಳ ಕಾಲ ಅಚರಿಸುವ ಹಬ್ಬದಲ್ಲಿ ಪೂಕ್ಕಳಂ, ಓಣಂ ಸದ್ಯ, ಸಾಂಪ್ರದಾಯಿಕ ನೃತ್ಯ ಸೇರಿದಂತೆ ಅನೇಕ ಸಾಂಸ್ಕ್ರತಿಕ ವಿಶೇಷತೆಗಳಿವೆ. ಧಾರ್ಮಿಕ ಚೌಕಟ್ಟನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಭಾರತ. ಕೇರಳದ ಶ್ರೀಮಂತ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುವುದು ಮಾತ್ರವಲ್ಲದೇ ಇಂದು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುವ ಸಂಭ್ರಮದ ಹಬ್ಬವಾಗಿದೆ” ಎಂದು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀಧರ್ ನಾೈಕ್ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಓಣಂ ಆಚರಣೆಯನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಮಾತನಾಡಿ, “ಪಾರಂಪರಿಕ ಪ್ರಜ್ಞೆ ಮತ್ತು ಸಾಂಸ್ಕ್ರತಿಕ ಪ್ರಜ್ಞೆಅತೀ ಮುಖ್ಯ. ನಮ್ಮ ಪರಂಪರೆ, ಆಚರಣೆ ಹಾಗೂ ಸಂಸ್ಕೃತಿಯ ಕುರಿತು ತಿಳುವಳಿಕೆ ಪಡೆದು ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸುವುದು ನಮ್ಮೆಲರ ಜವಾಬ್ದಾರಿ. ಓಣಂ ಪೂಕ್ಕಳಂ ರೀತಿಯಲ್ಲಿ ಎಲ್ಲರ ಬದುಕು ಬಣ್ಣದಿಂದ ಕೂಡಿರಲಿ” ಎಂದು ಹಾರೈಸಿದರು.
ಅಂತಿಮ ಎಂ.ಕಾಂ. ವಿದ್ಯಾರ್ಥಿ ನವೀನ ಕೃಷ್ಣ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಎಂ.ಕಾಂ. ವಿದ್ಯಾರ್ಥಿನಿಯರು ಕೇರಳದ ಸಾಂಪ್ರಾದಾಯಿಕ ಓಣಂ ನೃತ್ಯ ಪ್ರದರ್ಶಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ