ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ
ಉಜಿರೆ: ಉನ್ನತ ಶಿಕ್ಷಣ ಹಂತವು ಗುಣಮಟ್ಟದ ಕಲಿಕೆ, ಜ್ಞಾನಾರ್ಜನೆ, ಸಂಸ್ಕøತಿನಿಷ್ಠ ಸಂಸ್ಕಾರ ಮತ್ತು ಮೌಲಿಕ ವ್ಯಕ್ತಿತ್ವ ರೂಪಿಸಿಕೊಳ್ಳಲು ಪೂರಕವಾಗುವ ಮಹತ್ವದ ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿತವಾದ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶೈಕ್ಷಣಿಕ ಹಂತದ ಕಲಿಕೆ ಮತ್ತು ಕೌಶಲ್ಯದ ಮೂಲಕ ಔದ್ಯೋಗಿಕ ಅವಕಾಶಗಳನ್ನು ಪಡೆಯುವುದರ ಜೊತೆಗೆ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವುದರ ಕಡೆಗಿನ ಗುರಿಯ ಗಮ್ಯವು ವೃತ್ತಿಪರ ಮತ್ತು ವ್ಯಕ್ತಿಗತ ಸಾಮಥ್ರ್ಯಕ್ಕೆ ಹೊಸ ಆಯಾಮ ತಂದುಕೊಡುತ್ತದೆ. ಜ್ಞಾನಾರ್ಜನೆಯ ಹಂತ ದಾಟಿಕೊಂಡು ಜ್ಞಾನದ ಸೃಷ್ಟಿಯ ಕಡೆಗೆ ಕಾರ್ಯೋನ್ಮುಖವಾಗುವುದಕ್ಕೆ ಸ್ನಾತಕೋತ್ತರ ಶಿಕ್ಷಣವು ನೆರವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಜಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾನಿಲಯದ ಪರಿಕಲ್ಪನೆಯೇ ಭಿನ್ನವಾದುದು. ಸ್ನಾತಕೋತ್ತರ ಹಂತದ ಶಿಕ್ಷಣ ಪಡೆಯುವ ಜ್ಞಾನಶಿಸ್ತುಗಳ ವಲಯವನ್ನು ಸೂಚಿಸುವುದಕ್ಕೆ ವಿಶ್ವವಿದ್ಯಾನಿಲಯ ಎಂಬ ಪದ ಬಳಕೆಯಾಗುತ್ತದೆ. ಇದೀಗ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾದ ಕಾಲೇಜುಗಳಲ್ಲಿಯೇ ಸ್ನಾತಕೋತ್ತರ ಶಿಕ್ಷಣ ವಿಭಾಗಗಳು ಆರಂಭವಾಗಿವೆ. ವಿಶ್ವದ ಉತ್ಕøಷ್ಟಜ್ಞಾನದ ಮಾರ್ಗಗಗಳ ಶೋಧ ಮತ್ತು ಜ್ಞಾನಸೃಷ್ಟಿ ಈ ಉನ್ನತ ಶಿಕ್ಷಣ ಕೇಂದ್ರಗಳ ಮೌಲಿಕ ಉದ್ದೇಶ ಎಂದು ತಿಳಿಸಿದರು.
ಉನ್ನತ ಶಿಕ್ಷಣದ ಹಂತದಲ್ಲಿ ಕೇವಲ ಜ್ಞಾನಾರ್ಜನೆ ಮಾತ್ರವಲ್ಲ. ಎಲ್ಲಾಕಡೆಯಿಂದ ಲಭ್ಯವಾಗುವ ಚಿಂತನೆಗಳನ್ನು ಸ್ವೀಕರಿಸುವ ಮನಃಸ್ಥಿತಿ ರೂಪುಗೊಳ್ಳುತ್ತದೆ. ಆ ಮೂಲಕ ಪ್ರಶ್ನಿಸುವ, ಶೋಧಿಸುವ ಮತ್ತು ಹೊಸದನ್ನು ಗಳಿಸಿಕೊಳ್ಳುವ ಹಾದಿ ಕ್ರಮಿಸುವುದಕ್ಕೆ ಅವಕಾಶಗಳು ಲಭಿಸುತ್ತವೆ. ಜ್ಞಾನಾರ್ಜನೆ, ಕೌಶಲ್ಯ ರೂಢಿಸಿಕೊಳ್ಳುವಿಕೆಯ ಜೊತೆಗೆ ವೃತ್ತಿಪರ ಸಾಮಥ್ರ್ಯ ಸಾಧ್ಯವಾಗಿಸಿಕೊಂಡು ದೇಶ ಮುನ್ನಡೆ ಸಾಧಿಸುವಂತಹ ಸಾಮಾಜಿಕ ಕೊಡುಗೆಗಳನ್ನು ಕೊಡುವುದರ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ತಿಳಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿ, ಬೆಂಗಳೂರಿನ ಎಕೋ ಲೈಫ್ ಸಂಸ್ಥೆಯ ಸಂಸ್ಥಾಪಕಿ, ಎಚ್‍ಆರ್ ಸ್ಟ್ರಾಟಜಿಸ್ಟ್, ಲೈಫ್‍ಕೋಚ್ ಜೊವಿನಾ ಪ್ರಿಯಾಂಕಾ ಮಾಡ್ತ ಅವರು ಮಾತನಾಡಿದರು. ವೃತ್ತಿಪರ ಮತ್ತು ವ್ಯಕ್ತಿಗತ ಬದುಕಿನ ವಿವಿಧ ಕಠಿಣ ಹಂತಗಳನ್ನು ಸಮರ್ಥವಾಗಿ ಎದುರಿಸಿ ಸಾಧನೆ ಕಂಡುಕೊಳ್ಳುವ ಮಹಾಮಾರ್ಗವಾಗಿ ಸ್ನಾತಕೊತ್ತರ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ ಎಂದು ವ್ಯಾಖ್ಯಾನಿಸಿದರು.
ಎಲ್ಲರೂ ಸ್ಪರ್ಧಾತ್ಮಕ ಹಾದಿಯಲ್ಲಿ ಮುನ್ನಡೆ ಸಾಧಿಸುವ ಹುಮ್ಮಸ್ಸಿನೊಂದಿಗೇ ಇರುತ್ತಾರೆ. ಯಶಸ್ಸಿನ ನಿಖರಕೇಂದ್ರಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಂಡಾಗ ಮಾತ್ರ ಆತ್ಮವಿಶ್ವಾಸ ಜೊತೆಯಾಗುತ್ತದೆ. ಪ್ರತಿಸ್ಪರ್ಧಿಯ ಪ್ರಬಲ ಪೈಪೋಟಿಯನ್ನು ಈ ಬಗೆಯ ನಿಖರತೆ ಮತ್ತು ಆತ್ಮಶಕ್ತಿಯೊಂದಿಗೆ ಎದುರಿಸಿದಾಗ ಗೆಲುವು ನಿಚ್ಛಳವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಎಸ್.ಡಿ.ಎಂಕಾಲೇಜಿನ ಪ್ರಾಶುಂಪಾಲ ಡಾ. ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಯ ಜೊತೆ ಕೌಶಲ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳುವುದು ಮುಖ್ಯವಾಗಿದೆ. ಹೊಸ ರೀತಿಯಲ್ಲಿ ಆಲೋಚನೆ ಮಾಡುವುದು ಪ್ರಸ್ತುತ ದಿನಮಾನಗಳಲ್ಲಿ ಅವಶ್ಯ. ಶೈಕ್ಷಣಿಕ ಕಲಿಕೆಯ ಜೊತೆಜೀವನ ಶಿಕ್ಷಣ, ಒಳ್ಳೆಯ ನಡವಳಿಕೆ, ಉತ್ತಮ ಹವ್ಯಾಸ, ವಿಷಯ ಜ್ಞಾನಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದಜೊತೆಗೆ ಪಠ್ಯತೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಾಗಿದೆ. ಕಾಲೇಜಿನಲ್ಲಿ ನೀಡಲಾಗುವ ಮೌಲ್ಯಧಾರಿತ ಮತ್ತು ಸಂಸ್ಕøತಿಪರ ಶಿಕ್ಷಣವು ವ್ಯಕ್ತಿತ್ವರೂಪಣೆಗೆ ಅಗತ್ಯವಾಗುತ್ತದೆ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ನಂದಕುಮಾರಿ ಕೆ.ಪಿ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯಾ ಬಿ.ಪಿ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ನೆಫೀಸತ್, ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಚಿತ್ರ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
