ಉಡುಪಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನೀಡುವ ಅತ್ಯುನ್ನತ ಗೌರವ "ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ (PMRBP)"ಗೆ ನಾಮನಿರ್ದೇಶನಗೊಂಡಿರುವ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಅವರನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯಲ್ಲಿ ನಡೆದ ಭವ್ಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಗೌರವಿಸಲಾಯಿತು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಸನ್ಮಾನ ನೆರವೇರಿಸಿದರು. ಉಡುಪಿ ವಲಯದ ರಾಜಯೋಗಿನಿ ಬಿ.ಕೆ. ಸುಮಾ, ಬಿ.ಕೆ. ರಘುರಾಮ, ದೀಪಕ್ ಹಾಗೂ ಇತರ ಹಿರಿಯ ಸದಸ್ಯರ ಸಾನ್ನಿಧ್ಯದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಿಲಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಅನ್ನಪೂರ್ಣಾ ರಾವ್, ಎನ್.ಎಸ್.ಜಿ. ಕಮಾಂಡೋ ವಿಜಯ್ ಎಸ್. ಪುತ್ರನ್ ಹಾಗೂ ನಿವೃತ್ತ ಸೈನಿಕ ಕೋತಂಡ ರಾಮನ್ ಉಪಸ್ಥಿತರಿದ್ದರು.
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯವು ಅಂತರಾಷ್ಟ್ರೀಯ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದ್ದು, ರಾಜಸ್ಥಾನದ ಮೌಂಟ್ ಆಬುವಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಸ್ತುತ ರಾಜಯೋಗಿನಿ ಬಿ.ಕೆ. ಮೋಹಿನಿ ದೀದಿ ಅವರ ಆಡಳಿತದಲ್ಲಿರುವ ಈ ಸಂಸ್ಥೆ ಮಹಿಳಾ ನೇತೃತ್ವದ ಮಾದರಿಯಾಗಿ ವಿಶ್ವದ 110ಕ್ಕೂ ಹೆಚ್ಚು ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿ, ಉಡುಪಿ ವಲಯವನ್ನು ರಾಜಯೋಗಿನಿ ಬಿ ಕೆ ಸುಮಾ ದೀದಿಯವರ ಉಸ್ತುವಾರಿಯಲ್ಲಿದೆ.
ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಈಗ ತನ್ನ ಸುವರ್ಣೋತ್ಸವದ ಹಂತವನ್ನು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹೆಮ್ಮೆಯ ಸನ್ಮಾನ ಪಡೆದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಗೆ, ಮುಖ್ಯಶಿಕ್ಷಕಿ ವಿನೋದ ಶೆಟ್ಟಿ ( 94816 13116 ), ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತಾಧಿಕಾರಿ ಡಾ. ಶ್ರೀಧರ ರಂಗನಾಥ ಪೈ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘ ಮತ್ತು ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಜೊತೆಗೆ ಶಾಲಾ ಸಮುದಾಯವು ದೀಪೇಶ್ ಅವರನ್ನು ಹಾರ್ದಿಕವಾಗಿ ಅಭಿನಂದಿಸಿ, ಅವರ ಭವಿಷ್ಯದ ಪ್ರಯತ್ನಗಳಿಗೆ ಉಜ್ವಲ ಯಶಸ್ಸು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
