ಗಿಳಿವಿಂಡು ಬಳಗದ ಸಮಾಲೋಚನಾ ಸಭೆ

Chandrashekhara Kulamarva
0



ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ ಸಂಘಟನೆ  ಗಿಳಿವಿಂಡು ಇದರ ಉಡುಪಿ ಜಿಲ್ಲೆಯ ಸಮಾಲೋಚನಾ ಸಭೆಯು ಇತ್ತೀಚೆಗೆ ಉಡುಪಿಯ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ನಡೆಯಿತು. 


ಸಭೆಯ ಅಧ್ಯಕ್ಷತೆಯನ್ನು ಗಿಳಿವಿಂಡು ಅಧ್ಯಕ್ಷರಾದ ಡಾ. ಶಿವರಾಮ ಶೆಟ್ಟಿ ವಹಿಸಿದ್ದರು. ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ಹಿರಿಯ ಲೇಖಕಿ ಡಾ.ಚಂದ್ರಕಲಾ ನಂದಾವರ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಎಲ್ಲರನ್ನೂ ಸ್ವಾಗತಿಸಿದರು. 


ನವೆಂಬರ್ ತಿಂಗಳಿನಲ್ಲಿ ಮಂಗಳ ಗಂಗೋತ್ರಿಯಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಚರ್ಚಿಸಲಾಯಿತು. ವಿವಿಧ ಕಾಲೇಜುಗಳಲ್ಲಿ ಸದಸ್ಯರ ನೆರವಿನಿಂದ ಸಾಹಿತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದಾಗಿ ನಿರ್ಧರಿಸಲಾಯಿತು. 


ವಿವಿಧ ಕಾಲೇಜುಗಳಲ್ಲಿನ  ಕನ್ನಡ ಸ್ನಾತಕೋತ್ತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗಿಳಿವಿಂಡು ಬಳಗಕ್ಕೆ ಸೇರಿಸಲು ಬೈಲಾದಲ್ಲಿ ತಿದ್ದುಪಡಿ ತರುವ ಬೇಡಿಕೆಯನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಅಭಿಪ್ರಾಯ ಪಡಲಾಯಿತು. ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ಸಂಸ್ಥೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.



إرسال تعليق

0 تعليقات
إرسال تعليق (0)
To Top