ಉಡುಪಿ: ಅಬ್ಬಕ್ಕ ರಥಕ್ಕೆ ಭವ್ಯ ಶೋಭಾಯಾತ್ರೆಯ ಸ್ವಾಗತ

Upayuktha
0



ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ವೀರ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ಜಯಂತ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ರಥಯಾತ್ರೆ ಸಲುವಾಗಿ ಉಡುಪಿ ನಗರದಲ್ಲಿ ಭವ್ಯ ಶೋಭಾಯಾತ್ರೆಯ ಮೂಲಕ ರಥವನ್ನು ಸ್ವಾಗತಿಸಲಾಯಿತು.


ಪೂರ್ಣಪ್ರಜ್ಞ ಕಾಲೇಜಿನಿಂದ ಹೊರಟ ರಥವು ಕವಿ ಮುದ್ದಣ ಮಾರ್ಗವಾಗಿ ರಥಬೀದಿಯನ್ನು ಸೇರಿತು. ಅಲ್ಲಿ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ವೀರ ರಾಣಿ ಅಬ್ಬಕ್ಕ, ಇವರು ಭಾರತದ ಭವ್ಯ ಇತಿಹಾಸದಲ್ಲಿ ನೀಡಿರುವಂತಹ ಕೊಡುಗೆಗಳನ್ನು ಸ್ಮರಿಸುವುದರೊಂದಿಗೆ, ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಪುನರುಚ್ಚರಿಸಿದರು.


ಈ ಸಂದರ್ಭದಲ್ಲಿ ನಗರದ ವಿಶೇಷ ಅತಿಥಿಯಾಗಿ ಭರತನಾಟ್ಯ ಕಲಾವಿದೆ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 216 ಗಂಟೆಗಳ ಕಾಲ ನಿರಂತರ  ಭರತನಾಟ್ಯ ಪ್ರದರ್ಶನ ಮಾಡುವುದರ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ವಿದುಷಿ ದೀಕ್ಷಾ ವಿ ಇವರನ್ನು ಸನ್ಮಾನಿಸಲಾಯಿತು.

 

ಹಾಗೂ ಈ ಕಾರ್ಯಕ್ರಮದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರ, ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ಉಡುಪಿ ತಾಲೂಕು ಸಂಚಾಲಕ್ ಮಾಣಿಕ್ಯ ಭಟ್, ಉಡುಪಿ ನಗರ ಸಂಘಟನಾ ಕಾರ್ಯದರ್ಶಿ ರೋಹಿತ್ ಮತ್ತು ಪ್ರಮುಖರಾದ ಶಿವನ್,  ಮನೀಶ್, ವಂಶಿತ್, ಭಾರ್ಗವ್, ಅನುಷಾ, ಸಂಜನಾ, ಪುಷ್ಪ, ವಿನೀತ್, ಧನುಷ್ ಸೇರಿದಂತೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top