ರಾಜಧಾನಿಯಲ್ಲಿ ಭಾರತೀಯ ಖಾದ್ಯ ಶೈಲಿಯ ಜೈ ಭವಾನಿ ಹೋಟೆಲ್ ಶುಭಾರಂಭ

Upayuktha
0

ಕಡೇಚೂರ್ ಗ್ರೂಪ್ ಉದ್ಯಮಕ್ಕೆ ಶರ್ಮಾ ಟ್ರಾವೆಲ್ಸ್‌ನ ಸುನಿಲ್ ಶರ್ಮಾ ಜ್ಯೋತಿ ಬೆಳಗಿಸಿ ಚಾಲನೆ

 



ಬೆಂಗಳೂರು: ಭಾರತೀಯ ಪ್ರಮುಖ ರಾಜ್ಯಗಳ ರುಚಿ ಸವಿಯುವ ನೂತನ ಜೈ ಭವಾನಿ ಹೋಟೆಲನ್ನು ಗಾಂಧಿ ನಗರದ ವಿಂಟೇಜ್ ಪಾರ್ಕ್ ಹೋಟೆಲಿನಲ್ಲಿ ಶರ್ಮಾ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಮಾಲಕರಾದ ಸುನಿಲ್ ಶರ್ಮಾ ಶುಭಾರಂಭಗೊಳಿಸಿದರು.


ವಿಂಟೇಜ್ ಪಾರ್ಕ್ ಹೋಟೆಲಿನಲ್ಲಿ ಸೆ.12 ರಂದು ಶುಕ್ರವಾರ ದೀಪ ಬೆಳಗಿಸಿ,ಪೂಜೆ ನೆರವೇರಿಸಿ ಹೋಟೆಲ್‌ಗೆ ಚಾಲನೆ ನೀಡಿ ಮಾತನಾಡಿ ರಾಜಸ್ಥಾನಿ, ಪಂಜಾಬಿ, ಗುಜರಾತಿ, ಉತ್ತರಭಾರತ, ದಕ್ಷಿಣ ಭಾರತ ಹಾಗೂ ಜೈನ್ ಶೈಲಿಯ ಖಾದ್ಯಗಳು ಒಂದೇ ಸೂರಿನಡಿ ಗ್ರಾಹಕರಿಗೆ ದೊರಕುವಂತಾದುದು ವಿಶೇಷ. ಹೋಟೆಲ್ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಜನಪ್ರಿಯವಾಗಲಿ. ಹೋಟೆಲ್ ಉದ್ಯಮದ ಅನುಭವಿ ಯೋಗೇಶ್ ರಾಥೋಡ್  ಸೇರಿದಂತೆ ಇಡೀ ತಂಡ ಯಶಸ್ಸು ಹೊಂದಲಿ ಎಂದು ಸುನಿಲ್ ಶರ್ಮಾ ಶುಭ ಹಾರೈಸಿದರು.


ಖ್ಯಾತ ಉದ್ಯಮಿಗಳಾದ ಸತೀಶ್ ವಿ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕಲಬುರಗಿಯ ಉದ್ಯಮಿಗಳು ರಾಜಧಾನಿಯಲ್ಲಿ ಹೋಟೆಲ್ ಪ್ರಾರಂಭ ಮಾಡುವುದರ ಮೂಲಕ ನೂತನ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.


ಕಡೇಚೂರ್ ಗ್ರೂಪ್ ಖ್ಯಾತ ಉದ್ಯಮಿ ಸಮೂಹವಾಗಿದ್ದು ಇನ್ನಷ್ಟು ಸಂಸ್ಥೆ ಆರಂಭಿಸುವಂತಾಗಲಿ ಎಂದು ಶುಭ ಕೋರಿದರು. ಮುಖ್ಯಮಂತ್ರಿಗಳ ಕಚೇರಿ ಅಧೀನ ಕಾರ್ಯದರ್ಶಿ ಅರುಣ್ ಪುರ್ಟಾಡೊ ಮಾತನಾಡಿ, ಸ್ಪರ್ಧಾತ್ಮಕ ಉದ್ಯಮ ರಂಗದಲ್ಲಿ ಗ್ರಾಹಕರ ಪ್ರೀತಿ ಗಳಿಸಲು ರುಚಿಕಟ್ಟಾದ ಆಹಾರವನ್ನು ಒದಗಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಉತ್ತಮವಾಗಿ ಸಂಸ್ಥೆ ಮುನ್ನಡೆಯಲಿ ಎಂದು ಆಶಿಸಿದರು. 


ಹೋಟೆಲ್ ಪಾಲುದಾರ ಡಾ. ರಾಜೇಶ್ ಕಡೇಚೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೋಟೆಲ್ ಮತ್ತು ವಸತಿಗೃಹ ಆರಂಭದಿಂದ ಉತ್ತಮ ಆಹಾರ ಗ್ರಾಹಕರಿಗೆ ಒದಗಿಸುವುದಲ್ಲದೆ ಸುಮಾರು ಅರುವತ್ತಕ್ಕಿಂತ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಲಭಿಸುವಂತಾಗಿದೆ ಎಂದರು. ಹೋಟೆಲ್ ಪಾಲುದಾರ ಯೋಗೇಶ್ ರಾಥೋಡ್ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು.


ಕಾರ್ಯಕ್ರಮದಲ್ಲಿ ಗೆಜ್ಜೆ ಗಿರಿ ಕ್ಷೇತ್ರದ ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ, ರಾಜೇಶ್ ಶರ್ಮಾ ಹೋಟೆಲ್ ಮಾಲಕ ಮಹೇಂದ್ರ ಬೋರಾ, ರಾಕೇಶ್ ಬೋರಾ, ಗೋಲ್ಡನ್ ರೆಸಿಡೆನ್ಸಿಯ ಮಾಲಕ ಮುರಳಿ ಬಲದೇವ್, ಜೈನ ಸಮಾಜದ ಮುಖಂಡರಾದ ಸಂದೀಪ್ ಕುಮಾರ್ ಬಾಗರೇಚ, ಶೈಲೇಶ್ ಬನ್ಸಾಲಿ, ಶೈಲೇಶ್ ತಾತೇಡ್, ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ, ಹೈಕೋರ್ಟ್ ನ್ಯಾಯವಾದಿ ಶಿಲ್ಪಾ ಭಾರ್ಗವ್ ಗೋಗಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುಜಾತಾ ಈಶ್ವರ್ ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ಪತ್ರಕರ್ತ ರಮೇಶ್ ಪೆರ್ಲ, ಕೃಷ್ಣಮ್ಮ ಸುಭಾಷ್ ಗೋಗಿ, ಅನ್ನಪೂರ್ಣ ತೇಲಂಗ್, ಸವಿತಾ ಗುತ್ತೇದಾರ್, ಹೈಕೋರ್ಟ್ ನ್ಯಾಯವಾದಿಗಳಾದ ಈಶ್ವರ್ ಭೀಮನೇರಿ, ಎನ್ ಭಾರ್ಗವ್, ನಿಶಾಂತ್ ತೆಲಂಗ್ ವಸಂತ ಕುಮಾರ್,ಇಂತೇಜಾಮ್ ಅಲಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top