ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ 3ನೇ ಸಂಸ್ಥಾಪನಾ ದಿನಾಚರಣೆ
ಉಡುಪಿ: ಎಂ.ಜಿ.ಎಂ ಸಂಧ್ಯಾ ಕಾಲೇಜಿನ 3ನೇ ಸಂಸ್ಥಾಪನಾ ದಿನಾಚರಣೆ ಸೆಪ್ಟೆಂಬರ್ 6ರಂದು ನೂತನ ರವೀಂದ್ರ ಮಂಟಪದಲ್ಲಿ ಭವ್ಯವಾಗಿ ಜರುಗಿತು. ಕಾರ್ಯಕ್ರಮವು ಭೂಮಿಕಾ ಹಾಗೂ ತಂಡದ ಪ್ರಾರ್ಥನೆಯೊಂದಿಗೆಆರಂಭವಾಯಿತು. ನಂತರ ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ. ದೇವಿದಾಸ್ ಎಸ್. ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಕಾಲೇಜಿನ ವಾರ್ಷಿಕ ಪತ್ರಿಕೆ “Horizon” ಬಿಡುಗಡೆಗೊಂಡಿತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಡಾ. ಪ್ರಭಾಕರ್ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಅವರ ಪರಿಚಯವನ್ನು ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಉಪಪ್ರಾಚಾರ್ಯ ಹಾಗೂ ಬಿಸಿಎ ಸಂಯೋಜಕ ಡಾ. ಎಂ. ವಿಶ್ವನಾಥ ಪೈ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭಾಕರ್ ಶಾಸ್ತ್ರಿಯವರು, “ಗುರು-ಶಿಷ್ಯ ಸಂಬಂಧವೇ ಶಿಕ್ಷಣದ ನಿಜವಾದ ಬಲ” ಎಂದರು.
ಕಾರ್ಯಕ್ರಮದ ಪ್ರಮುಖ ಅಂಶವಾಗಿ ಒಟ್ಟು ರೂ. 9,10,000 ಮೌಲ್ಯದ ವಿದ್ಯಾರ್ಥಿವೇತನವನ್ನು ಎಂ.ಜಿ.ಎಂ ಕಾಲೇಜಿನ ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ವಿತರಿಸಿದರು. ಅತಿಥಿಗಳಾಗಿ ಮಾಲತಿ ದೇವಿ ಪ್ರಾಚಾರ್ಯೆ, ಎಂ.ಜಿ.ಎಂ. ಪಿಯುಕಾಲೇಜು ಇವರು ತಮ್ಮ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಮಾರೋಪ ಭಾಷಣವನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯೆ ಪ್ರೊ. ವನಿತಾ ಮಯ್ಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಕುಬ ಕ್ರಿಯೇಷನ್ ರವರ ಸಹಯೋಗದ, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿರುವ “ಟ್ರಾಕ್ “ಎಂಬ ಸಾಮಾಜಿಕ ಕೆಡುಕುಗಳನ್ನು ಪ್ರತಿಬಿಂಬಿಸುವ ಕಿರುಚಿತ್ರ ಬಿಡುಗಡೆಗೊಳಿಸಲಾಯಿತು.
ಬಿಕಾಂ ಮತ್ತು ಬಿಬಿಎ ಸಂಯೋಜಕಿ ಡಾ.ಮಲ್ಲಿಕಾ ಎ. ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ವರ್ಷಿಣಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿವೇತನ ಪಟ್ಟಿ ವಾಚನವನ್ನು ಉಪನ್ಯಾಸಕಿ ಅಕ್ಷತಾ ನಾಯಕ್ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಉಪನ್ಯಾಸಕ ಸನತ್ ಕೋಟ್ಯಾನ್ ವಾಣಿಜ್ಯ ವಿಭಾಗ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ