ಸಾವಿರ ಕಂಬದ ಬಸದಿಗೆ ಬಂದ ಐರಾವತ

Chandrashekhara Kulamarva
0


ಮೂಡುಬಿದಿರೆ: ಪ್ರಾಣಿ ಪ್ರಿಯರ ಸಂಘಟನೆ "ಪೇಟಾ"ದ ಮುತುವರ್ಜಿಯಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ನೀಡಿದ " ಐರಾವತ" ಜೈನಕಾಶಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಯ ಆವರಣಕ್ಕೆ ಶುಕ್ರವಾರ ಸೇರಿಕೊಂಡಿದೆ.


ಧಾರ್ಮಿಕ ಕೇಂದ್ರಗಳು ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಪಳಗಿಸಿದ ಆನೆಗಳನ್ನು ಬಳಸಿ ಅವುಗಳಿಗೆ ತನ್ನ ಕುಟುಂಬದೊಂದಿಗೆ ಕಾಡಿನ ಸಹಜ ಬದುಕನ್ನು ಕಸಿದುಕೊಂಡು ಹಿಂಸೆ ನೀಡಿದಂತಾಗುತ್ತದೆ ಎಂದು ಅದರ ವಿರುದ್ಧ ನೈಜ್ಯ ಆನೆಗಳನ್ನೇ ಹೋಲುವ ಮೆಕ್ಯಾನಿಕಲ್ ಆನೆಗಳನ್ನು ಪ್ರೋತ್ಸಾಹಿಸಿ ಎನ್ನುತ್ತಿರುವ ಪೇಟಾ ಇಂಡಿಯಾದ ಮುಂಬೈ ಮೂಲದ ಪ್ರೇರಣೆಯಿಂದ ಬಾಲಿವುಡ್ ತಾರಾ ಕುಟುಂಬದ ಕೊಡುಗೆಯಾಗಿ ಈ ಐರಾವತ ಒದಗಿ ಬಂದಿದೆ.


ಜೈನಕಾಶಿಯಲ್ಲಿ ಚಾತುರ್ಮಾಸ ನಿರತ 108 ಗುಲಾಬ್ ಭೂಷಣ ಮುನಿ ಮಹಾರಾಜರು ನೂತನ ಐರಾವತವನ್ನು ಅನಾವರಣಗೊಳಿಸಿದರು. ಪಟ್ಟಾಭಿಷೇಕ ರಜತ ಮಹೋತ್ಸವ ಸಂಭ್ರಮದಲ್ಲಿರುವ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ , ಪಟ್ನಶೆಟ್ಟಿ ಸುಧೇಶ್ ಕುಮಾರ್, ಎಂ ಬಾಹುಬಲಿ ಪ್ರಸಾದ್  ಪೇಟಾ ಮುಂಬೈ ಘಟಕದ ಪದಾಧಿಕಾರಿಗಳಾದ ಅನುಷ್ಕಾ ಯಾದವ್, ಸುಧಾಕರ್ ರಾವ್ ಕರ್ನಾಲ್, ಶುಭಂ ಅಗರ್ವಾಲ್, ರೋಹನ್ ಸರ್ವಪ್ರಿಯ, ಮಹೆಕ್ ಜುನೇಜಾ ಸಹಿತ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.


ದೇಶದಲ್ಲೇ ಮೊದಲ ಬಸದಿಗೆ ಐರಾವತ!

ಐತಿಹಾಸಿಕ ಸಾವಿರ ಕಂಬದ ಬಸದಿಯಲ್ಲಿ ನೆಲೆ ಕಂಡಿರುವ ಮೆಕ್ಯಾನಿಕಲ್ ಆನೆ ಐರಾವತ ದೇಶದಲ್ಲೇ ಮೊದಲ ಬಾರಿಗೆ ಜೈನ ಬಸದಿಗೆ ಬಂದಂತಾಗಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಬಸದಿ ಎನ್ನುವ ಹಿರಿಮೆ ಸಾವಿರ ಕಂಬದ ಬಸದಿಗೆ ಲಭಿಸಿದೆ.


ಪೇಟಾ ಧಾರ್ಮಿಕ ಸಂಸ್ಥೆಗಳಿಗೆ ಒದಗಿಸುತ್ತಿರುವ 12 ನೆಯ ಹಾಗೂ ಮಂಗಳೂರು ವಲಯಕ್ಕೆ ದೊರೆತ ಮೊದಲ ಐರಾವತ ಇದಾಗಿದೆ.


ಮೂರು ಮೀಟರ್ ಎತ್ತರ 800 ಕೆಜಿ ಭಾರ ಈ ಮೆಕ್ಯಾನಿಕಲ್ ಐರಾವತವನ್ನು ರಬ್ಬರ್, ಫೈಬರ್, ಮೆಟಲ್, ಮೆಶ್, ಫೋಮ್, ಕಬ್ಬಿಣ ಹಾಗೂ ಐದು ಮೋಟಾರುಗಳ ನೆರವಿನಿಂದ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿ ಅದನ್ನು ನೈಜ್ಯ ಆನೆಯಂತೆ ಬಳಸಿಕೊಳ್ಳಲು ಸಾಧ್ಯವಿದೆ. ಚಕ್ರಗಳ ನೆರವಿನಿಂದ ರಸ್ತೆಯಲ್ಲೂ ಒಡಾಡಿಬಹುದಾಗಿದೆ. 2023ರಲ್ಲಿ ಇಂತಹ ಸಾಹಸಕ್ಕೆ ಮುಂದಾದ ಪೇಟಾ ದಕ್ಷಿಣ ಭಾರತದ ಹಲವೆಡೆ ಮೆಕ್ಯಾನಿಕಲ್ ಆನೆಗಳನ್ನು ಹಸ್ತಾಂತರಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top