ತೆಂಕನಿಡಿಯೂರು ಕಾಲೇಜಿನಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ‎‎

Upayuktha
0

ತೆಂಕನಿಡಿಯೂರು: ‎ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು  ಇಲ್ಲಿನ ಐಕ್ಯೂಎಸಿ ಹಾಗೂ ರಾಜಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು. 


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇದರ ರಾಜಕೀಯ ಶಾಸ್ತ್ರ ಸಹಪ್ರಾಧ್ಯಾಪಕರಾದ ಡಾ. ಶಕೀಲಾ ಹೆಗ್ಡೆ ಭಾರತದ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವಲ್ಲಿ ಯುವಜನತೆಯ ಪಾತ್ರದ ಕುರಿತು ಮಾತನಾಡುತ್ತ " ಪ್ರಜಾಪ್ರಭುತ್ವದ ಮೌಲ್ಯಗಳು ಮಾನವೀಯ ಮೌಲ್ಯಗಳು ಮತ್ತು ಅವೆಲ್ಲ ನಮ್ಮ ಸಂವಿಧಾನದ ಮೌಲ್ಯಗಳೂ ಹೌದು, ಆದ್ದರಿಂದ ಸಂವಿಧಾನ ಮೌಲ್ಯಗಳನ್ನು ಸಾಕಾರಗೊಳಿಸುವ ಉತ್ತಮ ಪ್ರಶಾಸನ ರೂಪಿಸುವ ರಾಜಕಾರಣದಿಂದ ಇಂದಿನ ಯುವಜನತೆ ವಿಮುಖವಾಗುತ್ತಿರುವುದು ಕಳವಳಕಾರಿಯುವಜನತೆ ನೈತಿಕ ರಾಜಕಾರಣದಲ್ಲಿ ಕ್ರಿಯಾಶೀಲರಾದಷ್ಟು  ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ " ಎಂದರು. 


ಪ್ರಜಾಪ್ರಭುತ್ವದ ಪ್ರತಿಜ್ಞಾವಿಧಿ ಬೋಧಿಸಿದ ಪ್ರಾಂಶುಪಾಲರು "ಪ್ರಜಾಪ್ರಭುತ್ವ ಕೇವಲ ಸರಕಾರಿ ಮಾದರಿಯಲ್ಲ, ಅದು ಜನರ ಜೀವನ ಕ್ರಮವಾಗಿದೆ" ಎಂದರು. ಇದೇ ಸಂಧರ್ಭದಲ್ಲಿ ರಾಜ್ಯಶಿಕ್ಷಣ ನೀತಿಯಡಿ ಮಂಗಳೂರು ವಿ.ವಿ.ಯ ಎಲ್ಲಾ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಇರುವ ಕಡ್ಡಾಯ ಪತ್ರಿಕೆ ಸಾಂವಿಧಾನಿಕ ಮೌಲ್ಯಗಳ ಕುರಿತಾಗಿ ಡಾ. ಶಕೀಲಾ ಹೆಗ್ಡೆ ಮತ್ತು ಪ್ರಶಾಂತ್ ನೀಲಾವರ ಬರೆದ ಪುಸ್ತಕವನ್ನು ಪ್ರಾಂಶುಪಾಲರು ಬಿಡುಗಡೆಗೊಳಿಸಿದರು. 


ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಶ್ರೀಧರ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಜಕುಮಾರ್, ಸಂದೇಶ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಹಾಗೂ ಬೋಧಕ - ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ರಾಜಕೀಯ ಶಾಸ್ತ್ರ ಸಹಪ್ರಾಧ್ಯಾಪಕರಾದ ಪ್ರಶಾಂತ ನೀಲಾವರ ಕಾರ್ಯಕ್ರಮ ನಿರ್ವಹಿಸಿದರು.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top