ನವದುರ್ಗೆಯರನ್ನು ಕಣ್ತುಂಬಿಗೊಳ್ಳುವ ಶುಭ ದಿನವೇ ಈ ನವರಾತ್ರಿ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ದೇಶದಾದ್ಯಂತ ಈ ಹಬ್ಬ ನಡೆಯುತ್ತದೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಬಲು ವೈಭವದಿಂದ ನಡೆಯುತ್ತದೆ. ಆಲಂಕಾರದಿಂದ ಕಂಗೊಳಿಸುವ ನವದುರ್ಗೆಯರನ್ನು ನಾವು ಎಲ್ಲಾ ದೇವಸ್ಥಾನದಲ್ಲಿ ನೋಡಬಹುದು.
ನವರಾತ್ರಿ ಎನ್ನುವಾಗ ಮೊದಲು ನೆನಪಾಗುವುದೇ ವಿಶ್ವವಿಖ್ಯಾತ ಪಡೆದ ಮೈಸೂರು ದಸರಾ. ನೂರಾರು ವರುಷಗಳಿಂದ ವಿಜೃಂಭಣೆಯಿಂದ ನಡೆಯುವ ನಾಡಹಬ್ಬವನ್ನು ನೋಡಲು ಎಲ್ಲೆಡೆಯಿಂದ ಜನರು ಬರುತ್ತಾರೆ, ಅದರಲ್ಲೂ ಬೆಟ್ಟದ ಮೇಲಿನ ದುರ್ಗೆಯನ್ನು ಕಣ್ತುಂಬಿಗೊಳ್ಳುವುದೇ ಆನಂದ...
ನವರಾತ್ರಿಯ ದಿನ ಎಲ್ಲೆಡೆ ತಾಯಿಯನ್ನು ವಿವಿಧ ಆಭರಣ ಸೀರೆಗಳ ಮೂಲಕ ವಿಶೇಷ ಆಲಂಕಾರ ಮಾಡಿ ಪೂಜೆಸುತ್ತಾರೆ. ಸರ್ವಭೂಷಿತೆಯನ್ನು ನೋಡುವಾಗ ಆಗುವ ಸಂತೋಷ ಮತ್ತೆಲ್ಲೂ ಸಿಗದು. ಈ ಹಬ್ಬದ ಪ್ರಯುಕ್ತ ಎಲ್ಲೆಡೆ ನಾನಾ ರೀತಿಯ ಪೂಜಾ ಕಾರ್ಯಗಳು ನಡೆಯುತ್ತವೆ.
ಅದರಂತೆ ಆ ದಿನ ವಾಹನ, ಕಬ್ಬಿಣದ ಸಲಕರಣೆ ಮುಂತಾದವುಗಳಿಗೆ "ಆಯುಧ" ಪೂಜೆಯನ್ನು ಮಾಡುತ್ತಾರೆ. ಅಂದರೆ ವರುಷವಿಡೀ ನಮ್ಮನ್ನು ಸುರಕ್ಷತೆಯಿಂದ ಕಾಪಾಡಿದ ನಮ್ಮ ಪ್ರಿಯ ವಾಹನ, ಕಬ್ಬಿದಂತಹ ವಸ್ತುವನ್ನು ಶುಭ್ರವಾಗಿರಿಸಿ ಮಾಡುವ ಪೂಜೆಯಾಗಿದೆ. ಹೀಗೆ ಆ ದಿನ ಅಂಗಡಿ ಪೂಜೆಯು ನಡೆಯುತ್ತದೆ.
ನವರಾತ್ರಿಯಂದು ನವದೇವಿಯಾರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಾಮಾತಾ, ಕಾತ್ಯಾಯನಿ, ಕಾಳಾರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿಯರನ್ನು ಪೂಜೆ ಮಾಡುತ್ತಾರೆ.
ಮೊದಲನೇ ದಿನ ಶೈಲಪುತ್ರಿ ದೇವಿಯು ಬಿಳಿ ಬಣ್ಣದ ವಸ್ತ್ರವನ್ನು ಧರಿಸಿದ್ದಾಳೆ. ಇದು ಶಕ್ತಿ ಹಾಗೂ ಉತ್ಸಾಹದ ಸಂಕೇತವಾಗಿದೆ. ಕೆಂಪು ಬಣ್ಣದ ವಸ್ತ್ರದಿಂದ ಬ್ರಹ್ಮಚಾರಿಣಿ ದೇವಿಯು ಎರಡನೇ ದಿನ ಶುದ್ಧತೆ ಮತ್ತು ಶಾಂತಿಯನ್ನು ಸಂಕೇತಿಸುತ್ತಾಳೆ. ಮೂರನೇ ದಿನ ದೇವತೆ ಚಂದ್ರಘಂಟಾ ನೀಲಿ ಬಣ್ಣದ ಸೀರೆಯ ಮೂಲಕ ಶೌರ್ಯದ ಕುರಿತು ತಿಳಿಸುತ್ತಾಳೆ. ನಾಲ್ಕನೆಯ ದಿನ ಶಕ್ತಿ ಮತ್ತು ಸಂತೋಷದಿಂದ ಕೂಷ್ಮಾಂಡಾ ದೇವಿಯು ಹಳದಿ ವಸ್ತ್ರವನ್ನು ತೊಡುತ್ತಾಳೆ, ಸ್ಕಂದಮಾತೆಯು ಐದನೇ ದಿನ ಹಸಿರು ಬಣ್ಣದ ಸೀರೆಯ ಮೂಲಕ ಬೆಳವಣಿಗೆಯನ್ನು ಸಂಕೇತಿಸುತ್ತಾಳೆ. ಆರನೇ ದಿನ ದೇವಿ ಕಾತ್ಯಾಯನಿ ರೂಪಾಂತರ ಶಕ್ತಿಯ ಕುರಿತು ಬೂದು ವಸ್ತ್ರದಿಂದ ತಿಳಿಸುತ್ತಾಳೆ, ಹಾಗೆಯೇ ಕಾಳಾರಾತ್ರಿ ತಾಯಿಯು ಧೈರ್ಯದ ಕುರಿತು ಕಿತ್ತಳೆ ಬಣ್ಣದ ಸೀರೆಯ ಮೂಲಕ ಕಂಗೊಳಿಸುತ್ತಾಳೆ. ಎಂಟನೇ ದಿನ ಮಹಾಗೌರಿಯು ಹಸಿರು ಬಣ್ಣದಿಂದ ಭರವಸೆಯನ್ನು ನೀಡುತ್ತಾಳೆ. ಕೊನೆಯ ದಿನ ತಾಯಿ ಸಿದ್ಧಿದಾತ್ರಿ ದೇವಿಯು ಗುಲಾಬಿ ಬಣ್ಣವನ್ನುಟ್ಟು ಕಂಗೊಳಿಸುತ್ತಾಳೆ.
ಹೀಗೆ ಆ ದಿನದಂದು ಹೆಣ್ಣು ಮಕ್ಕಳು ಆ ಬಣ್ಣದ ಸೀರೆಯನ್ನುಟ್ಟು ದೇವಿಯನ್ನು ನೋಡಲು ಬರುತ್ತಾರೆ.
-ಧನ್ಯ ದಾಮೋದರ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ