ಮನುಕುಲದ ಚಾರಿತ್ರ್ಯ ಶ್ರೀಮಂತಗೊಳಿಸಿದ ವಚನ ಸಾಹಿತ್ಯ

Upayuktha
0


ದಾವಣಗೆರೆ: ಜಗತ್ತಿನ ಇತಿಹಾಸದಲ್ಲಿ ಮನುಕುಲದ ವ್ಯಕ್ತಿತ್ವಕ್ಕೆ ಮಹತ್ವ ನೀಡಿ ಮನುಕುಲದ ಚ್ಯಾರಿತ್ರವನ್ನು ಶ್ರೀಮಂತಗೊಳಿಸಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಏಕೈಕ ಸಾಹಿತ್ಯ ವಚನ ಸಾಹಿತ್ಯವೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭರಮಪ್ಪ ಮೈಸೂರು ಅಭಿಪ್ರಾಯ ಪಟ್ಟರು.


ನಗರದ ಜೆ.ಹೆಚ್. ಪಟೇಲ್ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ. ಶರಣೆ ಬಸಮ್ಮ ಮತ್ತು ಬುಳ್ಳಾಪುರದ ಸಿದ್ದಪ್ಪ ದತ್ತಿ ಮತ್ತು ಶರಣ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.


12ನೇ ಶತಮಾನದಲ್ಲಿ ಜನಸಾಮಾನ್ಯರು ಕರ್ಮಸಿದ್ದಾಂತದ ಫಲವಾಗಿ ಗುಲಾಮಿ ವ್ಯಕ್ತಿತ್ವವನ್ನು ರೂಡಿಸಿಕೊಂಡು ದಮನೀಯ ಬದುಕನ್ನು ಸಾಗಿಸುತ್ತಿದ್ದರು. ಬಸವಾದಿ ಶರಣರು ತಮ್ಮ ಅಮೂಲ್ಯವಾದ ವಚನಗಳ ಮೂಲಕ ಎಲ್ಲಾ ವರ್ಗದ ಜನರನ್ನು ಕರ್ಮಸಿದ್ದಾಂತದಿಂದ ಮುಕ್ತಗೊಳಿಸಿ ಕಾಯಕ ಸಿದ್ದಾಂತದ ಮೂಲಕ ಸ್ವಾವಲಂಬಿ ವ್ಯಕಿತ್ವವನ್ನು ರೂಪಿಸುವ ಮೂಲಕ ಶಾಂತಿಯುತ ಸಮ ಸಮಾಜವನ್ನು ನಿರ್ಮಿಸಿದರು ಎಂದು ಅಭಿಪ್ರಾಯ ಪಟ್ಟರು.


ಕಾಲೇಜಿನ ಪ್ರಾಂಶುಪಾಲೆ ಜೋತಿ.ಎ.  ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಕೆ.ಬಿ. ಪರಮೇಶ್ವರಪ್ಪ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 12 ನೇ ಶತಮಾನದ ಶರಣರ ಮೌಲ್ಯಗಳನ್ನು ಜನಮಾನಸದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಹರಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.


ಕಾರ್ಯಕ್ರಮದಲ್ಲಿ ಪರಮೇಶ್ವರಪ್ಪ. ಎಂ. ಸಿರಿಗೆರೆ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ಪುಷ್ಪ ಮಲ್ಲಿಕಾರ್ಜುನಸ್ವಾಮಿ, ನಿವರ್ಲ ಶಿವಕುಮಾರ್, ಆರ್. ಸಿದ್ದೇಶಪ್ಪ, ಜಿ.ಎಂ.ಕುಮಾರಪ್ಪ, ಬಿ.ಟಿ.ಪ್ರಕಾಶ್, ವಿನೋದ ಅಜಗಣ್ಣನವರ್, ಎನ್.ಟಿ. ಸಣ್ಣಮಂಜುನಾಥ, ಮುಸ್ತಾಫ್, ಕರಿಬಸಪ್ಪ ಮುಂತಾದವರು ಭಾಗವಹಿಸಿದ್ದರು. ಚೇತನ.ಹೆಚ್. ಸರ್ವರನ್ನು ಸ್ವಾಗಿಸಿದರು, ದೀಪಾ ಚಿನ್ನಿಕಟ್ಟೆ ವಂದಿಸಿದರು. ಶೈಲಾ.ಎನ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top