ಮಂಗಳೂರು: ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಚೇತನಾ ಬಾಲವಿಕಾಸ ಕೇಂದ್ರ ವಿಶೇಷ ಮಕ್ಕಳ ಶಾಲೆ ಇವರ ಜಂಟಿ ಆಶ್ರಯದಲ್ಲಿ “ಶಿಕ್ಷಕರ ದಿನಾಚರಣೆ” ಯು ದಿನಾಂಕ 13 ಸೆಪ್ಟೆಂಬರ್ 2025ರಂದು ಸೇವಾ ಭಾರತಿ (ರಿ) ಇದರ ಅಂಗ ಸಂಸ್ಥೆ ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ರಾಷ್ಟçಪತಿಗಳೂ, ಶಿಕ್ಷಕರೂ ಆದ ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತದನಂತರ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಸಾವಿತ್ರಿ ಎಸ್ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಅವರು ವಿಶೇಷ ಶಿಕ್ಷಕರು ಮಾಡುತ್ತಿರುವ ಕೆಲಸವು ದೇವರ ಕೆಲಸವಾಗಿದೆ ಮತ್ತು ವಿಶೇಷ ಮಕ್ಕಳನ್ನು ತಮ್ಮ ಮಕ್ಕಳಿಗಿಂತಲೂ ಅಧಿಕವಾಗಿ ಪ್ರೀತಿಸುವ ಅವರ ಕಾಳಜಿ ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತಕುಮಾರ್ ಶೆಟ್ಟಿ ಅವರು ವಿಶೇಷ ಶಿಕ್ಷಕರ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿ ಸರಕಾರವು ಇವರ ಬೇಡಿಕೆಗಳನ್ನು ಕೂಡಲೇ ಪರಿಹರಿಸಬೇಕೆಂದು ಆಗ್ರಹಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ರೋಮನ್ ಮತ್ತು ಕ್ಯಾಥರಿನ್ ದೃಷ್ಟಿಮಾಂದ್ಯ ಮಕ್ಕಳ ಶಾಲೆಯ ಸಂಯೋಜಕ ಕ್ಯಾಲಿಸ್ಟಸ್ ಡೆಸಾ ಅವರು ಇಂತಹ ಮಕ್ಕಳ ಶಾಲೆಗೆ ಸರಕಾರವು ಮಕ್ಕಳ ಸಂಖ್ಯೆಗನುಗುಣವಾಗಿ ಅನುದಾನ ನೀಡಬೇಕೆಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾಗಿದ್ದ ಸೇವಾ ಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ನಾಗರಾಜ ಭಟ್ ಅವರು ಸಂಸ್ಥೆಯ ಕೆಲಸ ಕಾರ್ಯಗಳು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷೆಯವರಾದ ಶ್ರಿಮತಿ ರೇಷ್ಮಾ ಮರಿಯ ಮಾರ್ಟಿಸ್ ಅವರು ವಹಿಸಿದ್ದು, ವಿಶೇಷ ಶಿಕ್ಷಕರ ಎಲ್ಲಾ ಬೇಡಿಕೆಗಳ ಬಗ್ಗೆ ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತಗೆದುಕೊಳ್ಳುವ ಬಗ್ಗೆ ಮಾತನಾಡಿದರು. ಸೇವಾ ಭಾರತಿ ಸಂಸ್ಥೆಯ ವಿಶ್ವಸ್ಥರು ಹಾಗೂ ಕೋಶಾಧಿಕಾರಿ ಪಿ. ವಿನೋದ್ ಶೆಣೈ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಮಾ ಡಿ ಸಿಲ್ವಾ, ಕಾರ್ಯದರ್ಶಿ ಶ್ರೀಮತಿ ಸುಪ್ರೀತಾ, ಕೋಶಾಧಿಕಾರಿ ಧನಂಜಯ ವರ್ಮಾ, ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಕಚೇರಿ ಸಿಬ್ಬಂದಿ ಕುಮಾರಿ ನಿರ್ಮಲ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಪಂದ್ಯಾಟಕ್ಕೆ ಕೋಚ್ ಆಗಿ ತೆರಳಿದ್ದ ಲಯನ್ಸ್ ವಿಶೇಷ ಶಾಲೆ ಸುರತ್ಕಲ್‌ನ ಶಿಕ್ಷಕಿ ಕುಮಾರಿ ಸೌಮ್ಯ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ 13 ವಿಶೇಷ ಶಾಲೆಗಳ 250 ಮಂದಿ ಭಾಗವಹಿಸಿದ್ದು ಪ್ರತಿಯೊಂದು ಶಾಲೆಯ ಹಿರಿಯ ವಿಶೇಷ ಶಿಕ್ಷಕರನ್ನು ಸನ್ಮಾನಿಸಲಾಯಿತು. ಚೇತನಾ ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಸ್ವಾಗತಿಸಿ, ಶ್ರೀಮತಿ ದೀಪಾ ಮೋಹನ್ ಅವರು ವಂದಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಅನಂತರ ಎಲ್ಲಾ ಶಾಲೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಂದ ನೃತ್ಯ, ಪ್ರಹಸನಗಳು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಪ್ರದರ್ಶನ ಜರಗಿದುವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ