ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ರಕ್ಷಣೆ ವಿಚಾರಸಂಕಿರಣ

Upayuktha
0

ಅಲೋಶಿಯಸ್ ವಿವಿಯಲ್ಲಿ ಕೊಂಕಣಿ ರಾಷ್ಟ್ರೀಯ ವಿಚಾರ ಸಂಕಿರಣ




ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗವು AICTE ಪ್ರಾಯೋಜಿತ ಆಯೋಜಿಸಿದ್ದ ‘ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ರಕ್ಷಣೆ’ ಎಂಬ 2 ದಿನಗಳ ಕೊಂಕಣಿ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಯನ್ನು ಸೆಪ್ಟೆಂಬರ್ 11, 2025 ರಂದು ಎಲ್‌ಸಿಆರ್‌ಐ ಸಭಾಂಗಣದಲ್ಲಿ ನಡೆಸಲಾಯಿತು.


ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಎಡ್ವರ್ಡ್ ನಜರೆತ್ ಮುಖ್ಯ ಅತಿಥಿಯಾಗಿದ್ದರು. ಅವರು ತಮ್ಮ ಮುಖ್ಯ ಭಾಷಣದಲ್ಲಿ, ರೋಬೋಟಿಕ್ ಸರ್ಜರಿ, ಐಒಟಿ, ಟೆಲಿ ಮೆಡಿಸಿನ್‌ನಂತಹ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಮುಂಬರುವ ವರ್ಷಗಳಲ್ಲಿ ವೈದ್ಯಕೀಯ ವಲಯದಲ್ಲಿ ಕೃತಕ ಬುದ್ಧಿಮತ್ತೆಯು ವೈದ್ಯರ ಪಾತ್ರವನ್ನು ಹೇಗೆ ನಿರ್ವಹಿಸಬಲ್ಲದು ಎಂಬುದರ ಕುರಿತು ವಿವರಿಸಿದರು.


ವಿಶ್ವವಿದ್ಯಾನಿಲಯದ ಪ್ರೊ ವಿಸಿ ರೆ. ಡಾ. ಮೆಲ್ವಿನ್ ಡಿಕುನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ನಮ್ಮ ಪ್ರಾಚೀನ ಜ್ಞಾನವನ್ನು ಸಂರಕ್ಷಿಸಲು ನಾವು ಕೆಲಸ ಮಾಡಬೇಕು ಮತ್ತು ನಮ್ಮ ಮಾತೃಭಾಷೆಯಲ್ಲಿ ವೈಜ್ಞಾನಿಕ ಜ್ಞಾನವನ್ನು ಹರಡಲು ಇಂತಹ ವಿಚಾರ ಸಂಕಿರಣಗಳು ಉಪಯುಕ್ತವಾಗಿವೆ ಎಂದು ಹೇಳಿದರು. ಇಂತಹ ವಿಚಾರ ಸಂಕಿರಣವನ್ನು ಮೊದಲ ಬಾರಿಗೆ ಆಯೋಜಿಸಿದ್ದಕ್ಕಾಗಿ ಅವರು ಭೌತಶಾಸ್ತ್ರ ವಿಭಾಗವನ್ನು ಅಭಿನಂದಿಸಿದರು.


ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ, ವಿವಿಯ ರಿಜಿಸ್ಟ್ರಾರ್ ಡಾ.ರೊನಾಲ್ಡ್ ನಜರೆತ್, ಎಲ್‌ಸಿಆರ್‌ಐ ಬ್ಲಾಕ್‌ನ ನಿರ್ದೇಶಕಿ ಡಾ. ಆಶಾ ಅಬ್ರಹಾಂ, ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕ ಡಾ. ಈಶ್ವರ ಭಟ್, ಫಿಸಿಕಲ್ ಸೈನ್ಸ್ ಡೀನ್ ಡಾ. ಅರುಣಾ ಕಲ್ಕೂರ, ವಿಭಾಗ ಮುಖ್ಯಸ್ಥ, ಡಾ. ನೀಲಕಂಠನ್ ವಿ.ಕೆ., ಕಾರ್ಯಕ್ರಮ ಸಂಯೋಜಕಿ, ಡಾ. ರೀಟಾ ಕ್ರಾಸ್ತಾ, ಸಹ ಸಂಯೋಜಕಿ ಫ್ಲೋರಾ ಕಾಸ್ತೆಲಿನೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಡಾ. ರೀಟಾ ಕ್ರಾಸ್ತಾ ಸ್ವಾಗತಿಸಿದರು. ಫ್ಲೋರಾ ಕ್ಯಾಸ್ತಲಿನೋ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top