ಸುರತ್ಕಲ್: ರಾಷ್ಟ್ರೀಯ ಸೇವಾ ಯೋಜನೆ, ಗೋವಿಂದ ದಾಸ ಕಾಲೇಜು ಸುರತ್ಕಲ್‌ನಲ್ಲಿ ಎನ್.ಎಸ್.ಎಸ್. ದಿನಾಚರಣೆ ಹಾಗೂ 2025-26ರ ಚಟುವಟಿಕೆಗಳ ಉದ್ಘಾಟನೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಪದಾಧಿಕಾರಿ ಮೃದುಲಾ ಬಿನು ನೆರವೇರಿಸಿದರು.
ಮುಖ್ಯ ಅತಿಥಿಗಳಾದ ಮೃದುಲಾ ಬಿನು ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ದೀಪ ಬೆಳಗುವ ಮೂಲಕ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಹೆಜ್ಜೆಯಾಗಿ ಸಚಿತ್ರ ಮಣ್ಣಿನ ಲೋಟಗಳನ್ನು ಹಾಗೂ ಮಣ್ಣಿನ ಹೂಜಿಯನ್ನು ಅತಿಥಿಗಳ ಮೂಲಕ ವೇದಿಕೆಗೆ ಹಸ್ತಾಂತರಿಸಲಾಯಿತು.
“ಸ್ವಾರ್ಥ ರಹಿತವಾಗಿ ಸಮಾಜದ ಏಳಿಗೆಗೆ ದುಡಿಯುವವನೇ ನಿಜವಾದ ಸ್ವಯಂಸೇವಕ. ರಾಷ್ಟ್ರೀಯ ಸೇವಾ ಯೋಜನೆ ನಮಗರಿವಿಲ್ಲದೇ ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತುಂಬುತ್ತದೆ” ಎಂದು ಮೃದುಲಾ ಬಿನು ಹೇಳಿದರು.
ಸಾಧಾರಣ ವ್ಯಕ್ತಿಗಳನ್ನು ಅಸಾಧಾರಣ ವ್ಯಕ್ತಿಗಳಾಗಿ ರೂಪಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಗಿದೆ. ಹೊಸ ತಂಡ ಹಿಂದಿನ ತಂಡದಿಂದ ಸ್ಪೂರ್ತಿ ಪಡೆದು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್.ಜಿ. ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಅವರು “ರಾ.ಸೇ.ಯೋ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಮಾನವೀಯತೆಗಳನ್ನು ಬೆಳೆಸುವ ಅತ್ಯುತ್ತಮ ಸಂಸ್ಥೆಯಾಗಿದೆ. ಇದರ ಹಿರಿಮೆಯನ್ನು ನೂತನ ತಂಡ ಮತ್ತಷ್ಟು ಎತ್ತರಕ್ಕೇರಿಸಬೇಕು ಎಂದು ಹೇಳಿದರು.
ಸ್ವಯಂಸೇವಕರಾದ ಸುಪ್ರೀತ್, ಅನನ್ಯ, ರಿತೇಶ್, ಪಲ್ಲವಿ ನೂತನ ಕಾರ್ಯದರ್ಶಿಗಳಾಗಿ ಕರ್ತವ್ಯ ಸ್ವೀಕರಿಸಿದರು. ಈ ವೇಳೆ ರಾ.ಸೇ.ಯೋಜನಾಧಿಕಾರಿ ಅಕ್ಷತಾ ವಿ. ಸ್ವಯಂ ಸೇವಕರಿಗೆ ಪ್ರಮಾಣವಚನ ಬೋಧಿಸಿದರು.
ಸ್ವಯಂಸೇವಕಿ ಅಶ್ವಿನಿ ಸ್ವಾಗತಿಸಿ ರಾ.ಸೇ.ಯೋಜನಾಧಿಕಾರಿ ಡಾ. ಭಾಗ್ಯಲಕ್ಷ್ಮಿ ಎಂ. ವಂದಿಸಿದರು. ಸ್ವಯಂಸೇವಕಿ ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅಪೇಕ್ಷಾ ಭಂಡಾರಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ