ರಾಜ್ಯಮಟ್ಟದ ಭಾವೈಕ್ಯತಾ ಚುಟುಕು ಕವಿಗೋಷ್ಠಿ

Upayuktha
0

ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ 




ಉಳ್ಳಾಲ: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಮತ್ತು ಭಾವೈಕ್ಯತಾ ಸಾಹಿತ್ಯ ರತ್ನ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ಗುರುವಾರ ನಡೆಯಿತು.


ಹಿರಿಯ ಕವಿಗಳಾದ ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ವೈದ್ಯ ಡಾ. ಸುರೇಶ ನೆಗಳಗುಳಿ, ಹಾ.ಮ. ಸತೀಶ, ವಿರಾಜ್ ಅಡೂರು, ಮಲ್ಲಿಕಾ ಜೆ. ರೈ, ಪ್ಲಾವಿಯ ಅಲ್ಬುಕರ್ಕ್, ಬಶೀರ್ ಅಹ್ಮದ್ ಬಂಟ್ವಾಳ, ಸಹನಾ ಕಾಂತಬೈಲು, ರತ್ನಾ ಕೆ. ತಲಂಜೇರಿ ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಮತ್ತು ಸಮಾಜ ಸೇವಕರಾದ ಡಾ. ರವಿ ಕಕ್ಯಪದವು, ಡಾ. ಹರ್ಷ ಕುಮಾರ್ ರೈ, ಕೆ.ಟಿ ರಾಜೇಂದ್ರ ಹೊಳ್ಳ ಕಲ್ಲಡ್ಕ, ಅಬ್ದುಲ್ ರಹಿಮಾನ್ ಸಂಕೇಶ್ ಇವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ. ಯು.ಟಿ. ಇಫ್ತಿಖಾರ್ ಅಲಿಯವರಿಗೆ ಶಿಕ್ಷಣ ರತ್ನ ಪ್ರಶಸ್ತಿ, ಭಾವೈಕ್ಯತಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭೀಮ ರಾವ್ ವಾಷ್ಠರ್ ಇವರನ್ನು ಸನ್ಮಾನಿಸಲಾಯಿತು.


ವಸಂತ ಜೋಗಿ ಕುಂದಾಪುರ ಉದ್ಘಾಟಿಸಿ, ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸೌಹಾರ್ದತೆ ಮತ್ತು ಮಾದಕತೆಯ ವಿರುದ್ಧ ಕವಿಗಳು ಚುಟುಕು ಕವನ ವಾಚಿಸಿದರು. ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿ, ಕೆ.ಎ. ಅಬ್ದುಲ್ ಅಝೀಜ್ ಪುಣಚ ವಂದಿಸಿದರು, ಸಂಘಟಕ ಇಕ್ಬಾಲ್ ಬಾಳಿಲ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top