ಮಂಗಳೂರು: ಭಾರತದ ಅತಿದೊಡ್ಡ ರೀಟೈಲ್ ಆರೋಗ್ಯ ವಿಮಾ ಕಂಪನಿಯಾದ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರೆನ್ಸ್, ಕಳೆದ 5 ಹಣಕಾಸು ವರ್ಷಗಳಲ್ಲಿ (2021-2025), ರಾಜ್ಯದಲ್ಲಿ 4.8 ಲಕ್ಷಕ್ಕೂ ಹೆಚ್ಚು ಕ್ಲೇಮ್‍ಗಳನ್ನು ಇತ್ಯರ್ಥಪಡಿಸಿದೆ. ರಾಜ್ಯಾದ್ಯಂತ ಗ್ರಾಹಕರಿಗೆ 2,800 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಪಾವತಿಸಿದೆ.
ರಾಷ್ಟ್ರ ಮಟ್ಟದಲ್ಲಿ, ಸ್ಟಾರ್ ಹೆಲ್ತ್, ಅತಿದೊಡ್ಡ ರೀಟೈಲ್ ಆರೋಗ್ಯ ವಿಮಾ ಕಂಪನಿಯಾಗಿದ್ದು, ಪ್ರಾರಂಭದಿಂದ 1 ಕೋಟಿಗೂ ಹೆಚ್ಚು ಕ್ಲೇಮ್‍ಗಳನ್ನು ಇತ್ಯರ್ಥಪಡಿಸಿದ್ದು, 52,000 ಕೋಟಿ ರೂ.ಗಿಂತ ಹೆಚ್ಚಿನ ಕ್ಲೈಮ್ ಮೊತ್ತ ಪಾವತಿಸಿದೆ, 2025 ಅಂತ್ಯದವರೆಗೆ ರೀಟೈಲ್ ಆರೋಗ್ಯ ವಿಮೆಯಲ್ಲಿ ಸುಮಾರು 33% ಮಾರುಕಟ್ಟೆ ಪಾಲು ಹೊಂದಿದೆ ಎಂದು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ನ ಸಿಎಂಒ ಹಿಮಾಂಶು ವಾಲಿಯಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಂಪನಿಯ ಮೊಬೈಲ್ ಅಪ್ಲಿಕೇಶನ್ 11 ದಶಲಕ್ಷ ಡೌನ್‍ಲೋಡ್‍ಗಳನ್ನು ಮೀರಿದೆ. ಆದಾಗ್ಯೂ ಅದರ ಭೌತಿಕ ಉಪಸ್ಥಿತಿಯು ಕರ್ನಾಟಕದಲ್ಲಿ 71 ಶಾಖೆಗಳೊಂದಿಗೆ ವಿಸ್ತರಿಸುತ್ತಲೇ ಇದೆ. 55,000ಕ್ಕಿಂತ ಹೆಚ್ಚಿನ ಏಜೆಂಟ್‍ಗಳು ಮತ್ತು 1,100 ಆಸ್ಪತ್ರೆ ಜಾಲಗಳು 93% ನಗದುರಹಿತ ಕ್ಲೈಮ್‍ಗಳನ್ನು ಸರಾಗವಾಗಿ ಪ್ರಕ್ರಿಯೆಗೊಳಿಸುತ್ತವೆ. ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಕರ್ನಾಟಕದಲ್ಲಿ ರೀಟೈಲ್ ಆರೋಗ್ಯ ವಿಮೆಯ ಸಂಸ್ಥೆಗಳಲ್ಲಿ ಮಾರುಕಟ್ಟೆಯ ನಾಯಕತ್ವ ಸ್ಥಾನ ಹೊಂದಿದೆ, ಆರೋಗ್ಯ ವಿಮೆಯಲ್ಲಿ ಶೇಕಡ 31% ಮಾರುಕಟ್ಟೆ ಪಾಲು ಹೊಂದಿದೆ. ಕರ್ನಾಟಕದಲ್ಲಿ ಆರೋಗ್ಯ ವಿಮೆಗಳ ಜೀವ ಸಂಖ್ಯೆ 2025ರಲ್ಲಿ 19 ಲಕ್ಷಕ್ಕೂ ಹೆಚ್ಚಿದೆ ಎಂದು ವಿವರಿಸಿದ್ದಾರೆ.
2025ನೇ ಹಣಕಾಸು ವರ್ಷದಲ್ಲಿ, ಸ್ಟಾರ್ ಹೆಲ್ತ್ 1.13 ಲಕ್ಷಕ್ಕೂ ಹೆಚ್ಚು ಕ್ಲೇಮ್‍ಗಳನ್ನು ಇತ್ಯರ್ಥಪಡಿಸಿದ್ದು, ಗ್ರಾಹಕರಿಗೆ 650 ಕೋಟಿ ರೂಪಾಯಿಗಿಂತ ಹೆಚ್ಚಿನ ಕ್ಲೇಮ್ ವಿತರಿಸಿದೆ. ಬೆಂಗಳೂರು 440 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಕ್ಲೇಮ್ ಗಳೊಂದಿಗೆ ಅತಿದೊಡ್ಡ ಪಾಲು ಹೊಂದಿದ್ದು, ನಂತರ ಮೈಸೂರು (ರೂ. 40 ಕೋಟಿ) ಮಂಗಳೂರು (ರೂ. 30 ಕೋಟಿ), ಶಿವಮೊಗ್ಗ (21 ಕೋಟಿ) ಮತ್ತು ಹಾಸನ (21 ಕೋಟಿ) ನಂತರದ ಸ್ಥಾನಗಳಲ್ಲಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


