ನೆಕ್ಸ್ಟ್‌ಜೆನ್ ಸ್ಕಿಲ್ ಕಾನ್ಕ್ಲೇವ್– 2025ರಲ್ಲಿ 8 ಪ್ರಶಸ್ತಿ ಪಡೆದ ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ

Upayuktha
0


ಮಂಗಳೂರು: ವಲಚ್ಚಿಲ್‌ನ ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಪ್ರತಿಷ್ಠಿತ ನೆಕ್ಸ್ಟ್‌ಜೆನ್ ಸ್ಕಿಲ್ ಕಾನ್ಕ್ಲೇವ್ – 2025ರಲ್ಲಿ ಅನೇಕ ಆಲ್-ಇಂಡಿಯಾ ಟಾಪ್ 5 ಪ್ರಶಸ್ತಿಗಳನ್ನು ಗಳಿಸಿದೆ. ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 17ರಿಂದ 19ರವರೆಗೆ ಶಿಮ್ಲಾದ ಈಸ್ಟ್ ಬೋರ್ನ್ ರೆಸಾರ್ಟ್‌ನಲ್ಲಿ ನಡೆಯಿತು. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಅಕಾಡೆಮಿಷಿಯನ್ನರು, ಉದ್ಯಮ ತಜ್ಞರು ಹಾಗೂ ನೀತಿ ರೂಪಕರು ಒಂದೇ ವೇದಿಕೆಯಲ್ಲಿ ಸೇರಿ ಕೌಶಲ್ಯಾಭಿವೃದ್ಧಿ, ಕೃತಕ ಬುದ್ಧಿಮತ್ತೆ ಹಾಗೂ ಕೈಗಾರಿಕಾ ಹೊಂದಾಣಿಕೆಯ ಶಿಕ್ಷಣದ ಇತ್ತೀಚಿನ ಪ್ರವೃತ್ತಿಗಳ ಕುರಿತು ಚರ್ಚೆ ನಡೆಸಿದರು.


ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ. ಅವರು ಸಂಸ್ಥೆಯನ್ನು ಪ್ರತಿನಿಧಿಸಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ಭವಿಷ್ಯದ ಸುಧಾರಿತ ಕೌಶಲ್ಯಾಭಿವೃದ್ಧಿ ಸಹಕಾರದ ಮಾರ್ಗಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಮಾನ್ಯ ರಾಜ್ಯಪಾಲರಾದ ಶ್ರೀ ಶಿವಪ್ರತಾಪ ಶುಕ್ಲಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ವಿವಿ ಮಾನ್ಯ ಕುಲಾಧಿಪತಿಗಳಾದ ಡಾ. ಸಿ.ಎ. ರಾಘವೇಂದ್ರ ರಾವ್ ಅವರು, ಎಸ್‌ಐಟಿ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಅಧ್ಯಾಪಕರ ಶ್ರಮವನ್ನು ಮೆಚ್ಚಿದರು. “ಈಗಿನ ದಿನಗಳಲ್ಲಿ ಮಾನ್ಯತೆ ದೊರಕುವುದು ನಿರಂತರ ಪರಿಶ್ರಮದಿಂದ ಮಾತ್ರ. ಎಸ್‌ಐಟಿ ವಿದ್ಯಾರ್ಥಿಗಳು ನವೀಕೃತ ಪಠ್ಯಕ್ರಮದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ, ಇದರಿಂದ ಅವರು ಕೈಗಾರಿಕೆಗೆ ಸಿದ್ಧರಾಗುತ್ತಿದ್ದಾರೆ” ಎಂದು ಹೇಳಿದರು.


ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ಅವರು ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಅವಕಾಶಗಳು ಮತ್ತು ಸರಿಯಾದ ತರಬೇತಿಯನ್ನು ಒದಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿದರು. ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಎಸ್‌ಐಟಿ ಗೆದ್ದಿರುವುದು ಐತಿಹಾಸಿಕ ಸಾಧನೆಯೆಂದು ಅವರು ಹೇಳಿದರು. “ತಂತ್ರಜ್ಞಾನ ಪ್ರತಿದಿನವೂ ಬದಲಾಗುತ್ತಿದೆ, ಪ್ರತಿಯೊಂದು ಬದಲಾವಣೆಯೂ ಪ್ರಗತಿಯನ್ನು ತರುತ್ತದೆ. ಕಲಿಕೆಗೆ ಅಂತ್ಯವಿಲ್ಲ – ಅದು ಸಾಗರದಷ್ಟು ವಿಶಾಲ,” ಎಂದು ಅವರು ಅಭಿಪ್ರಾಯ ಪಟ್ಟರು.



ಸಂಸ್ಥೆಯು ಈ ಎಂಟು ಪ್ರತಿಷ್ಠಿತ ಪ್ರಶಸ್ತಿ ಗಳನ್ನು ಪಡೆದು ಹಲವು ವಿಭಾಗಗಳಲ್ಲಿ ಆಲ್ ಇಂಡಿಯಾ ಟಾಪ್ 5 ಸ್ಥಾನ ಪಡೆದಿದೆ.

1. ಅತ್ಯುತ್ತಮ ಪ್ರದರ್ಶನ ನೀಡಿದ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ -2025

2. ಅತ್ಯುತ್ತಮ ಪ್ರದರ್ಶನ ನೀಡಿದ ಕೋರ್ಡಿನೇಟರ್ - 2025

3. ಅತ್ಯುತ್ತಮ ಪ್ರದರ್ಶನ ನೀಡಿದ ಸೆಂಟರ್ ಆಫ್ ಎಕ್ಸಲೆನ್ಸ್-2025

4. AI ಸ್ಕಿಲ್ಲಿಂಗ್ ಎಕ್ಸಲೆನ್ಸ್ ಪ್ರಶಸ್ತಿ-2025

5. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ-Celonis domain

6. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ -Microchip domain

7. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ - Zscalar domain

8. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ - Wadhwani domain


ಈ ಸಾಧನೆಗಳು ನಮ್ಮ ಸಂಸ್ಥೆಯು ಸದಾ ತಂತ್ರಜ್ಞಾನ ನವೀನತೆ ಹಾಗೂ ಕೈಗಾರಿಕಾ ಅಗತ್ಯಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧರನ್ನಾಗಿಸಲು ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಬಿಂಬಿಸುತ್ತವೆ ಇದು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಆಡಳಿತದ ಸಮರ್ಪಣೆಯ ಪ್ರತೀಕವಾಗಿದ್ದು ನಮ್ಮ ಸಂಸ್ಥೆಯನ್ನು ನೆಕ್ಸ್ಟ್ ಜೆನ್ ಸ್ಕಿಲ್ಸ್ ಪ್ರಮುಖ ಕೇಂದ್ರವನ್ನಾಗಿ ಸ್ಥಾಪಿಸಿದೆ.


ಶಿಮ್ಲಾದ ಸಮಾವೇಶದಲ್ಲಿ ಗೌರವಾನ್ವಿತ ಪ್ರಾಚಾರ್ಯ ಡಾ ಶ್ರೀನಿವಾಸ ಮಯ್ಯ ಡಿ. ಅವರು ಸಂಸ್ಥೆಯನ್ನು ಪ್ರತಿನಿಧಿಸಿ, ಗಣ್ಯರೊಂದಿಗೆ ಸಂವಾದ ನಡೆಸಿ, ಉನ್ನತ ಕೌಶಲ್ಯಾತ್ಮಕ ಉಪಕ್ರಮಗಳಲ್ಲಿ ಭವಿಷ್ಯದ ಸಹಕಾರದ ಮಾರ್ಗಗಳನ್ನು ಅನ್ವೇಷಿಸಿದರು. ನಮ್ಮ ಸಂಸ್ಥೆ ಆಲ್ ಇಂಡಿಯಾ ಟಾಪ್- 5 ಪ್ರಶಸ್ತಿಗಳನ್ನು ಅನೇಕ ವಿಭಾಗಗಳಲ್ಲಿ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಕೈಗಾರಿಕಾ ಸಿದ್ಧತೆಯಲ್ಲಿ ರಾಷ್ಟ್ರದ ಪ್ರಮುಖ ಸಂಸ್ಥೆಗಳಲ್ಲಿ ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸ್ಥಾನವನ್ನು ದೃಢಪಡಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ವಿವಿ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್‌, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್‌, SIT ಪ್ರಿನ್ಸಿಪಾಲ್ ಡಾ. ಶ್ರೀನಿವಾಸ ಮಯ್ಯ ಡಿ, ಶ್ರಿನಿವಾಸ ವಿವಿ- ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ. ಅಜಯ್‌ ಕುಮಾರ್‌, ಡಾ. ಧೀರಜ್ ಹೆಬ್ರಿ – ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್, ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top