ಶ್ರೀ ಪ್ರಸನ್ನ ವೆಂಕಟದಾಸರು

Chandrashekhara Kulamarva
0



ಶ್ರೀ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯಲ್ಲಿ ಕ್ರಿ.ಶ. 1680 ರಲ್ಲಿ ಕಾಖಂಡಕಿ ಮನೆತನದಲ್ಲಿ ಶ್ರೀ ನರಸಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳ ಪುತ್ರರಾಗಿ ಜನಿಸಿದರು. ಇವರ ಹೆಸರು ವೆಂಕಣ್ಣ ಎಂದಿತ್ತು. ಚಿಕ್ಕಂದಿನಿಂದ ಮನೆಯಲ್ಲಿ ಹರಿ ಭಕ್ತಿಯ ವಾತಾವರಣ ನೋಡಿದ್ದರು. ಆದರೆ ಇವರ ತಂದೆ ತಾಯಿ ಇವರು ಚಿಕ್ಕ ವಯಸ್ಸಿನವರಿದ್ದಾಗಲೇ ತೀರಿದರು.


ಇದರಿಂದ ಇವರ ಮುಂದಿನ ಜೀವನ ಅಣ್ಣ ಅತ್ತಿಗೆಯರ ಆಸರೆಯಲ್ಲಿ ಕಳೆಯಬೇಕಾಯಿತು. ಅಣ್ಣ ಒಳ್ಳೆಯ ಮನಸ್ಸಿನವರಾದರೂ ಅತ್ತಿಗೆ ಬಹಳ ಕ್ರೂರಿಯಾಗಿದ್ದಳು. ಇವರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದಳು.


ಸು. 16 ವರ್ಷದದ ಯುವಕರು ಇದ್ದಿರಬಹುದು ಅವರು ಅತ್ತಿಗೆ ಕೊಟ್ಟ ಕಟಿ ರೊಟ್ಟಿ ತೆಗೆದುಕೊಂಡು ಹೋಗಿ ಘಟಪ್ರಭಾ ನದಿ ದಂಡೆಯ ಮೇಲೆ ಆಕಳುಗಳನ್ನು ಮೇಯಿಸಿಕೊಂಡು, ಅತ್ತಿಗೆ ಕೊಟ್ಟ ರೊಟ್ಟಿ ಪಲ್ಯ ತಿಂದು ದಿನ ದೂಡುತ್ತಿದ್ದರು. ಅವರಿಗೆ ತಮ್ಮ ಗೆಳೆಯರು ಕಲಿಯುತ್ತಿರುವಂತೆ ವೇದ ಮಂತ್ರಗಳನ್ನು ಕಲಿಯಬೇಕು ಎಂಬ ಇಚ್ಛೆ ಇತ್ತಾದರೂ, ಅಣ್ಣ ಬೇರೇ ಊರುಗಳಿಗೆ  ಹೋಗಿ ತಮ್ಮ ವೈದಿಕ ವೃತ್ತಿ ನಡೆಸಿ ಹಣ ಗಳಿಸುತ್ತಿದ್ದರು. ಅಣ್ಣ ಇಲ್ಲದಾಗ ಮನೆಯ ಜವಾಬ್ದಾರಿ ಇವರಿಗೇನೇ ಬೀಳುತ್ತಿತ್ತು. ಅಣ್ಣ ಅತ್ತಿಗೆಗೆ ನಾನು ಶಾಸ್ತ್ರ ಕಲಿಯಲು ಹೋಗುತ್ತೇನೆ ಎಂದಾಗ ಅಣ್ಣ ನಾನೇ ಹೇಳ್ತೀನಿ ನೀನ್ಯಾಕೆ ಬೇರೇ ಕಡೆ ಹೋಗಬೇಕು ಎಂದು ತಡೆಯುತ್ತಿದ್ದರು. ತನ್ನ ಅಮ್ಮ ಅಪ್ಪ ಇದ್ದಾಗ ಕಲಿಸಿದ ಒಂದೆರಡು ಸ್ತೋತ್ರ ಬಿಟ್ಟರೆ ಇವರಿಗೆ ವಿದ್ಯೆಯ ಗಂಧ ವೂ ಇರಲಿಲ್ಲ. ಆದರೆ ಮನದಲ್ಲಿ ದೇವರನ್ನು ಕಾಣುವ ಹಂಬಲ ಅವಿಚ್ಛಿನ್ನವಾಗಿತ್ತು. ಒಂದು ದಿನ ಅತ್ತಿಗೆ ತೋರಿದ ಅವಮಾನ ಇವರನ್ನು ಕಂಗೆಡಿಸಿತು. ದಿಂಡಿ ಜನರು ಶ್ರೀನಿವಾಸ ದೇವರ ಚಿಕ್ಕ ಫೋಟೋ ಇಟ್ಕೊಂಡು ಊರೂರು ಅಲೆಯುತ್ತ ಇವರೂರಿಗೆ ಬಂದಾಗ ಅವರೊಡನೆ ತಿರುಪತಿಗೆ ಮನೆ ಬಿಟ್ಟೇ ಹೋದರು.


ಉಳಿದವರು ನಮ್ಮಂತೆ ದೇವರ ಮೂರ್ತಿ ನೋಡಿ ದರ್ಶನ ಆಯ್ತು ಎಂದು ಮುಂದೆ ಹೋದರೆ ಇವರು ಶ್ರೀನಿವಾಸನ ಪದತಲಗಳಲ್ಲಿ  ಶಿರವಿಟ್ಟು ನಿನ್ನ ಪಾದಗಳನ್ನು ನನ್ನ ಉದ್ಧಾರ ಮಾಡುವವರೆಗೂ ಬಿಡೆ ಎನ್ನುತ್ತಾ ದೇವರ ಧ್ಯಾನ ಮಾಡುತ್ತ ಸಾಷ್ಟಾಂಗ ನಮಸ್ಕಾರ ಮಾಡಿದರು. ಎಷ್ಟೋ ಹೊತ್ತಿನವರೆಗೂ ಅವರು ತಮ್ಮ ಇರುವನ್ನೇ ಮರೆತು ಧ್ಯಾನ ಮಾಡಿದಾಗ ಸ್ವತ : ಶ್ರೀನಿವಾಸ ದೇವರೇ ಪ್ರತ್ಯಕ್ಷನಾಗಿ ಬಂದು ಇವರ ನಾಲಿಗೆ ಮೇಲೆ ಪ್ರಸನ್ನ ವೆಂಕಟ ಎಂದು ಬರೆದು ಅಂತರ್ಧಾನನಾದನು. ಇದು ವೆಂಕಟೇಶ ದೇವರು ಅವರಿಗೆ ಮಾಡಿದ ಪರಮೋಕಾರ. ಅಲ್ಲಿಯ ಅರ್ಚಕರು ಶ್ರೀನಿವಾಸ ನು ಕನಸಲ್ಲಿ ಬಂದು ಕೊಟ್ಟು ಹೋದ ಗೋಪಾಳ ಬುಟ್ಟಿ ತಂಬೂರಿ, ಶ್ರೀ ಶ್ರೀನಿವಾಸ ದೇವರ ಮೂರ್ತಿಗಳು, ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶದೇವರ ಮೂರ್ತಿಗಳನ್ನು ಕೊಟ್ಟರು. ನೀನಿನ್ನು ಪ್ರಸನ್ನ ವೆಂಕಟದಾಸ, ನೀನು ಎಲ್ಲ ಶಾಸ್ತ್ರ ಓದಿ ಪಂಡಿತನಾಗಿ ಪ್ರಸಿದ್ಧನಾಗುವೆ ಎಂದು ಹೇಳಿದ ದೇವರ ಆಶೀರ್ವಾದ ನಿಜವಾಯಿತು. ಅತ್ಯಂತ ಚಿಕ್ಕ ವಯಸ್ಸಲ್ಲೇ ಕೇವಲ 16 ವರ್ಷದವರಿದ್ದಾಗ ಯಾವ ಜಪ ತಪ ಮಾಡದೆಯೇ ಅವರಿಗೆ ದೇವರ ಅನುಗ್ರಹವಾಯಿತು. ಇದಕ್ಕಾಗಿಯೇ ಇವರಿಗೆ ದಾಸ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಇವರು ಬರೆದ ಬಿಡೇನೋ ನಿನ್ನoಘರಿ ಶ್ರೀನಿವಾಸ ಎಂಬುದು ಪ್ರಸಿದ್ದ ಹಾಡಾಗಿದೆ. ಭಜನಾ ಮಂಡಳಿಗಳ ಮುಖ್ಯ ಭಕ್ತಿ ಗೀತೆಯಾಗಿದೆ 


ಆಮೇಲೆ ಅವರು ಶಾಸ್ತ್ರ ಅಭ್ಯಸಿಸಿ ಇನ್ನೂ ಪಂಡಿತರಾಗಿ ಎಲ್ಲ ಕಡೆಗೂ ಧರ್ಮ ಪ್ರಚಾರ ಮಾಡಿ ಪ್ರಸಿದ್ದರಾಗಿ ಭಾದ್ರಪದ ಶುಕ್ಲ ಶುದ್ಧ ಏಕಾದಶಿ ದಿನ ವೈಕುಂಠ ಪಯಣಿಸಿದರು.ಇಂದು ಅವರ ಆರಾಧನೆ. ಬಾಗಲಕೋಟ ನವನಗರದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.


- ರೇಖಾ ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top