'ಸಾಫ್ಟ್‌ ಸ್ಕಿಲ್ಸ್‌' ಪಠ್ಯ ಪುಸ್ತಕ ಅನಾವರಣ

Chandrashekhara Kulamarva
0


ಮಂಗಳೂರು: ಕೆನರಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾರ್ದಿಕ್ ಪಿ ಚೌಹಾಣ್ ಅವರು ಬರೆದ ವಿವಿ ಪಠ್ಯಕ್ಕೆ ಸಂಬಂಧಿಸಿದ 4 ನೇ ಪುಸ್ತಕ 'ಎಕ್ಸಿಕ್ಯೂಟಿವ್ ಡೆವಲಪ್ಮೆಂಟ್ ಅಂಡ್ ಸಾಫ್ಟ್ ಸ್ಕಿಲ್ಸ್' ಎಂಬ ಕಡ್ಡಾಯ ವಿಷಯದ ಪಠ್ಯ ಪುಸ್ತಕವನ್ನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.


ಮಂಗಳೂರು ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಮೂರನೇ ಸೆಮಿಸ್ಟರ್ ಬಿ.ಬಿ.ಎ (ಎಸ್ ಇ ಪಿ) ಪಠ್ಯ ಕ್ರಮಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ. ಮೃದು ಕೌಶಲ್ಯವು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಔದ್ಯೋಗಿಕ ರಂಗಕ್ಕೆ ಪ್ರವೇಶಿಸಿ ಪ್ರಗತಿಹೊಂದಲು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಸ್ತುತತೆ ಹೊಂದಿರುವ ಇಂತಹ  ಪುಸ್ತಕಗಳು ಇನ್ನಷ್ಟು ಪ್ರಕಟವಾಗಲಿ ಎಂದು ಕಾಲೇಜಿನ ಸಂಚಾಲಕರಾದ ಸಿಎ ಎಂ. ಜಗನ್ನಾಥ ಕಾಮತ್ ಶ್ಲಾಘಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಲತಾ ವಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದೇಜಮ್ಮ ಎ, ಮುಂತಾದವರು ಉಪಸ್ಥಿತರಿದ್ದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀಮಾ ಪ್ರಭು ಶುಭ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top