ಆಳ್ವಾಸ್‌ನಲ್ಲಿ ಶಾರದಾ ಪೂಜೆ

Upayuktha
0


ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವತಿಯಿಂದ 5ನೇ ವರ್ಷದ ಶ್ರೀ ಶಾರದಾ ಪೂಜೆಯು  ಕಾಲೇಜಿನ ಜಸ್ಟಿಸ್ ಕೆ. ಎಸ್. ಹೆಗ್ಡೆ ಕೇಂದ್ರ ಗ್ರಂಥಾಲಯದಲ್ಲಿ ನೆರವೇರಿತು.


ಕಾರ್ಯಕ್ರಮದ ಅಂಗವಾಗಿ ಗ್ರಂಥಾಲಯವನ್ನು ಮೈಸೂರು ದಸರಾ ಶೈಲಿಯ ಗೊಂಬೆಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ದೀಪಗಳು, ಆಯುರ್ವೇದ ಗ್ರಂಥಗಳು, ಫಲಪುಷ್ಪ ಹಾಗೂ ರಂಗೋಲಿಗಳಿಂದ ಇಡೀ ವಾತವರಣವನ್ನು ಹಬ್ಬದ ಆಚರಣೆಗಾಗಿ ಸಜ್ಜುಗೊಳಿಸಲಾಗಿತ್ತು.   ಮುದ್ದು ಮಕ್ಕಳ ಕಲರವ ಮತ್ತು ವಿದ್ಯಾರ್ಥಿಗಳ ಸಾಂಪ್ರದಾಯಿಕ ವೇಷಭೂಷಣವು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು.


ಪೂಜಾ ವಿಧಿಯಲ್ಲಿ ದೇವಿ ಸ್ತೋತ್ರ ಪಾರಾಯಣ, ಭಜನೆ, ಕುಂಕುಮಾರ್ಚನೆ, ಶಾರದಾ ಪೂಜೆ, ವಾಚನ-ಪ್ರವಚನ, ರಸಪ್ರಶ್ನೆ,  ಸಂಖ್ಯಾ ಬಂಧ(ಸುಡೋಕು), ಅಷ್ಟಾವಧಾನ ಸೇವೆ ಹಾಗೂ ಪ್ರಸಾದ ವಿತರಣೆ, ವಂದೇ ಮಾತರಂ ನಡೆಯಿತು.


ಆಳ್ವಾಸ್ ಪದವಿ ಕಾಲೇಜು

ಅಂತೆಯೇ ಆಳ್ವಾಸ್ ಪದವಿ ಕಾಲೇಜಿನ ಗ್ರಂಥಾಲಯದಲ್ಲಿ ನೂತನ ಶಾರದಾ ಬಿಂಬದ ಪ್ರತಿಷ್ಠಾಪನೆ ಯೊಂದಿಗೆ ಶಾರದಾ ಪೂಜೆ ನಡೆಯಿತು. ಅನಂತ ಪದ್ಮನಾಭ ಅಸ್ರಣ್ಣರು ಪೂಜಾ ವಿಧಿ ವಿಧಾನ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಹನಾ ಶೆಟ್ಟಿ,  ಮುಖ್ಯ ಗ್ರಂಥಾಪಾಲಕಿ ಶ್ಯಾಮಲತಾ,  ಪ್ರಾಚಾರ್ಯರು,  ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಹಿರಿಯ ವಿದ್ಯಾರ್ಥಿಗಳು  ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top