ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸೆಪ್ಟಂಬರ್ ತಿಂಗಳ ಸಭೆಯು 3 ರಂದು ಸಂಜೆ 4.00 ಗಂಟೆಗೆ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು. ಧ್ವಜಾರೋಹಣ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಆರಂಭವಾಯಿತು.
ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. ಮಂಡಲದಿಂದ ಬಂದ ವಿವಿಧ ಸೂಚನೆಗಳನ್ನು ಕಾರ್ಯದರ್ಶಿ ವಾಚಿಸಿದರು.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯವು 10/07/2025 ರಿಂದ 07/09/2025 ರವರೆಗೆ ನಡೆಯುತ್ತಿದ್ದು, 04-09-2025 ರಂದು ನಡೆಯುವ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮಕ್ಕೆಅಗತ್ಯವಾದ ಸುವಸ್ತುಗಳ ಸಂಗ್ರಹವನ್ನು ಸಂಗ್ರಹಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ವಿವರವನ್ನು ತಿಳಿಸಲಾಯಿತು.
ಸೆಪ್ಟಂಬರ್ 22 ರಿಂದ ಅಕ್ಟೋಬರ್ 4 ರವರೆಗೆ ಸಾಗರದ ರಾಘವೇಶ್ವರ ಭವನದಲ್ಲಿ ಜರಗುವ ನವರಾತ್ರ ನಮಸ್ಯ ಕಾರ್ಯಕ್ರಮದ ವಿವರವನ್ನು ಸಭೆಯಲ್ಲಿ ನೀಡಲಾಯಿತು ಮತ್ತು ಆಮಂತ್ರಣ ಪತ್ರಿಕೆಯನ್ನು ವಿತರಿಸಲಾಯಿತು.
ಮುಳ್ಳೇರಿಯ ಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ್ ಕೃಷ್ಣ ತೇಜಸ್ವಿ ಅವರು ಸಭೆಯಲ್ಲಿ ಭಾಗವಹಿಸಿ ಮಾಹಿತಿಗಳನ್ನು ನೀಡಿದರು. ನೂತನ ಪದಾಧಿಕಾರಿಗಳಿಗೆ ಶ್ರೀ ಗುರುಗಳು ಅನುಗ್ರಹಿಸಿದ ನಿಯುಕ್ತಿ ಪತ್ರ ಹಾಗೂ ಮಂತ್ರಾಕ್ಷತೆಯನ್ನು ನೀಡಲಾಯಿತು.
ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನ ಸಭಾಭವನ ನಿರ್ಮಾಣ ಕಾರ್ಯಕ್ಕೆ ಶ್ಯಾಮ ಪ್ರಕಾಶ ಪುಣಿಯೂರು ಇವರು ಸಮರ್ಪಣೆ ಮಾಡಿದರು. ಶ್ರೀ ಸಂಸ್ಥಾನದವರ ಸುವರ್ಣ ವರ್ಧಂತಿಯ ಭಾಗವಾಗಿ ನೆಟ್ಟು ಬೆಳೆಸಲು ಸಾಂಕೇತಿಕವಾಗಿ ಶ್ರೀರಾಮ ಬಳ್ಳಿಗಳನ್ನು ವಿತರಿಸಲಾಯಿತು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


