ಮಡಿಕೇರಿ: ಮಡಿಕೇರಿಯ ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಪ್ರಾಯೋಜಕತ್ವದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ಸೆ. 28 ರ ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ ಮಡಿಕೇರಿಯ ಶೋಭಾ ಸುಬ್ಬಯ್ಯನವರ ಮನೆಯಲ್ಲಿ ಕಾವ್ಯ ಕಮ್ಮಟ ಏರ್ಪಡಿಸಲಾಗಿದೆ. ಖ್ಯಾತ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಇವರು ನಡೆಸಿಕೊಡಲಿದ್ದಾರೆ.
ಭಾಗವಹಿಸಲು ಇಚ್ಚೆ ಉಳ್ಳವರು 8861405738 ವೈಲೇಶ.ಪಿ.ಎಸ್.ಕೊಡಗು ಹಾಗೂ 94483 66715 ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಬಳಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಯಪಡಿಸುತ್ತೇವೆ.
ಪ್ರವೇಶ ಶುಲ್ಕ (100 ₹) ನೂರು ರೂಪಾಯಿಗಳನ್ನು ಶೋಭಾ ಸುಬ್ಬಯ್ಯನವರಿಗೆ ತಲುಪಿಸಬೇಕಾಗಿ ಕೋರಲಾಗಿದೆ.
ಇಪ್ಪತ್ತು ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹಿರಿಯ ಕವಿಗಳಾದ ಗಿರೀಶ್ ಎಸ್. ಕಿಗ್ಗಾಲು ಮತ್ತು ನಿಕಟಪೂರ್ವ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಈ ಕಾರ್ಯಕ್ರಮದಲ್ಲಿ ಜತೆಗಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


