ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ

Upayuktha
0


ಪುತ್ತೂರು: ಹಲವಾರು ವಿಜ್ಞಾನ ಸಂಘಗಳು ವಿಜ್ಞಾನಕ್ಕೆ ಸಂಬಂಧ ಪಟ್ಟಿರುವ ಜ್ಞಾನವನ್ನು ಉತ್ತೇಜಿಸುತ್ತದೆ, ಮತ್ತು ಚಟುವಟಿಕೆಗಳಿಂದ ವಿಜ್ಞಾನದಲ್ಲಿನ ವಿಷಯಗಳ ಅಭಿವೃದ್ಧಿಯಾಗುತ್ತದೆ. ಹಲವು ವಿಜ್ಞಾನಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು, ಮೇರಿಕ್ಯೂರಿ, ಸಿ.ವಿ ರಾಮನ್ ಮುಂತಾದವರ ಸಾಧನೆಗಳನ್ನು ಓದುವುದರ ಮುಖಾಂತರ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಹಾಗೆಯೇ ವಿಜ್ಞಾನಿಗಳ ಬಗೆಗಿನ ಇತಿಹಾಸ, ಸಾಧನೆ, ಜೀವನ ಚರಿತ್ರೆ, ವಿಜ್ಞಾನ ಕ್ಷೇತ್ರದಲ್ಲಿನ ವಿಜ್ಞಾನಿಗಳ ಕೊಡುಗೆಗಳ ಬಗೆಗಿನ ಮಾಹಿತಿಯನ್ನು ವಿವೇಕಾನಂದ ಪಿಯು ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ್ ಶಾಸ್ತ್ರಿ ನೀಡಿದರು.

     

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವಿಜ್ಞಾನ ಸಂಘ ಮತ್ತು ಐಕ್ಯೂಎಸಿ ವಿಭಾಗ ಜಂಟಿಯಾಗಿ ಆಯೋಜಿಸಿದ ವಿಜ್ಞಾನ ಸಂಘದ  ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

         

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ ಮಾತನಾಡಿ, ಭಾರತದ ವಿಜ್ಞಾನಿಗಳ ಜೀವನ ಮತ್ತು  ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕು. ಹಾಗೆಯೇ ಭಾರತದ ವಿಜ್ಞಾನಿಗಳ ಸಾಧನೆಯು ಮಹತ್ತರವಾದದ್ದು. ಅನೇಕ ಭಾರತದ ವಿಜ್ಞಾನಿಗಳು ಬೇರೆ ಬೇರೆ  ಕ್ಷೇತ್ರದಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ ಎಂದರು.


ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್.ಎಸ್, ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಯದೇವ ಮತ್ತು ಜೊತೆ ಕಾರ್ಯದರ್ಶಿ ದೇವಿಕಾಶಿವಾನಿ ಉಪಸ್ಥಿತರಿದ್ದರು.


ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಗಗನ ಜೆ.ರೈ ವಂದಿಸಿ, ವಿಜ್ಞಾನ ಸಂಘದ ಸಂಯೋಜಕಿ ಮತ್ತು ಗಣಿತ ವಿಭಾಗದ ಮುಖ್ಯಸ್ಥೆ ಸೌಮ್ಯ ಸ್ವಾಗತಿಸಿ, ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಅಶ್ವತಿ ನಿರೂಪಿಸಿದರು.


Post a Comment

0 Comments
Post a Comment (0)
To Top