ಮಂಗಳೂರು: ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯು ಲೋಕಕಲ್ಯಾಣರ್ಥಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಶ್ರೀ ದುರ್ಗಾ ನಮಸ್ಕಾರ ಪೂಜೆಯನ್ನು ನಗರದ ಪಾಂಡೇಶ್ವರದಲ್ಲಿರುವ ಗುರುನರಸಿಂಹ ಸಭಾ ಭವನದಲ್ಲಿ ಆಯೋಜಿಸಿತ್ತು. ಇದೇ ವೇಳೆ ಸಮುದಾಯದ ಹಿರಿಯ ನಾಲ್ವರು ಶಿಕ್ಷಕರಿಗೆ ನಮ್ಮವರು ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಶ್ರೇಷ್ಠ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ದುರ್ಗಾ ನಮಸ್ಕಾರ ಪೂಜೆಯು ಅತ್ಯಂತ ಪವಿತ್ರವಾದ ಹಾಗೂ ಶಕ್ತಿದಾಯಕವಾದ ಒಂದು ಪೂಜೆಯಾಗಿದೆ. ಆಕೆಯು ದುರ್ಗತಿ ನಿವಾರಕಿಯಾಗಿ, ಅಜ್ಞಾನವನ್ನು ದೂರ ಮಾಡುವ ತಾಯಿ ಶಕ್ತಿಯಾಗಿ, ಭಕ್ತರಿಗೆ ಬಲ, ಧೈರ್ಯ ಮತ್ತು ಯಶಸ್ಸನ್ನು ನೀಡುವ ತಾಯಿ. ದುರ್ಗಾ ನಮಸ್ಕಾರ ಪೂಜೆಯ ವೇಳೆ ಪಠಿಸಲ್ಪಡುವ ಮಂತ್ರಗಳು, ಸ್ತುತಿಗಳು ಹಾಗೂ ಆರಾಧನೆ ಮನಸ್ಸಿಗೆ ಶಾಂತಿ, ದೇಹಕ್ಕೆ ಶಕ್ತಿ, ಆತ್ಮಕ್ಕೆ ನೆಮ್ಮದಿಯನ್ನು ನೀಡುತ್ತವೆ. ಆದುದರಿಂದ ಎಲ್ಲರೂ ಭಕ್ತಿಯಿಂದ ಪೂಜಿಸುವ ಅವಶ್ಯಕತೆ ಇದೆ ಎಂದು ಪೂಜೆಯ ನೇತೃತ್ವ ವಹಿಸಿದ್ದ ಮಾಣಿ ಶಿವರಾಮ ಕಾರಂತರು ಹೇಳಿದರು.
ಈ ಪೂಜೆ ಮಹಿಳಾ ಶಕ್ತಿಯ ಪ್ರತೀಕವಾದ ದೇವಿಯನ್ನು ಸ್ಮರಿಸುವುದರಿಂದ ಸಮಾಜದಲ್ಲಿ ಸ್ತ್ರೀಯರ ಮಹತ್ವವನ್ನು ಒತ್ತಿಹೇಳುತ್ತದೆ. ದುರ್ಗಾ ನಮಸ್ಕಾರದಿಂದ ಭಕ್ತರಿಗೆ ಆರೋಗ್ಯ, ಐಶ್ವರ್ಯ ಹಾಗೂ ಜೀವನದಲ್ಲಿ ಪ್ರಗತಿ ದೊರಕುತ್ತದೆ ಎಂದು ನಂಬಿಕೆ. ಭಕ್ತನು ತನ್ನ ಅಹಂಕಾರವನ್ನು ತೊರೆದು ದೇವಿಗೆ ಸಂಪೂರ್ಣ ಶರಣಾಗುವ ಮೂಲಕ ಆತ್ಮೋನ್ನತಿ ಹೊಂದುತ್ತಾನೆ ಎಂದು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.
ಪೂಜೆಯ ಪೂರ್ವದಲ್ಲಿ ಸಾಮೂಹಿಕ ಲಲಿತ ಸಹಸ್ತನಾಮ ಪಠಣ, ದುರ್ಗಾ ಶ್ಲೋಕ, ದುರ್ಗಾ ಮೂಲ ಮಂತ್ರದಲ್ಲಿ ಸಾಮೂಹಿಕ ಜಪ ಹಾಗೂ ತರ್ಪಣೆ, ದುರ್ಗಾಸಪ್ತಸತಿ ಪಾರಾಯಣ, ದುಗಾ ರಕ್ಷಾ ಸ್ತೋತ್ರ ನಡೆಯಿತು.
ಪೂಜೆಯ ಬಳಿಕ ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಸಮುದಾಯದ ಹಿರಿಯ ಶಿಕ್ಷಕರಾದ ಮನೋರಮಾ, ಪ್ರಭಾವತಿ ಪಿ., ಜಿ.ಟಿ. ಕಲಾಕುಮಾರಿ, ಕೆ.ಕೃಷ್ಣ ರಾವ್, ಲಕ್ಷ್ಮೀ ಬಾಯಿ ಅವರಿಗೆ ಶಿಕ್ಷಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ದುರ್ಗಾಶ್ಲೋಕ, ಮಂತ್ರ ಪಠಣ ಹಾಗೂ ಭಜನೆಯನ್ನು ಸುಬ್ರಹ್ಮಣ್ಯ ಕಾರಂತ್ ನಿರ್ವಹಿಸಿದರು. ಶ್ರೀರಂಗ ಐತಾಳ್ ಕದ್ರಿ, ಚಂದ್ರಶೇಖರ ಐತಾಳ್ ಮಂಗಳಾದೇವಿ, ವರ್ಕಾಡಿ ಸುಬ್ರಹ್ಮಣ್ಯ ಮಯ್ಯ, ಹರಿಹರ ಪ್ರಸಾದ್ ಐತಾಳ್ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು.
ಉದ್ಯಮಿ ವಿಶ್ವೇಶ್ವರ ಬದೆವಿದೆ, ಕೇಂದ್ರೀಯ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ್, ಮಂಗಳೂರು ಅಂಗ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಸನ್ನ ಇರುವೈಲು, ಗಣೇಶ್ ಪ್ರಸಾದ್ ಎಮ್ಮೆಕೆರೆ, ಸಿ.ಎ ಚಂದ್ರಮೋಹನ್ ಕೆ., ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ರಂಗನಾಥ ಐತಾಳ್, ಪ್ರವೀಣ್ ಮಯ್ಯ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಮೆನೇಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಬಾಲಕೃಷ್ಣ ಐತಾಳ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ಕೋಶಾಧಿಕಾರಿ ಗೌರಿ ಹೊಳ್ಳ, ಶಶಿಪ್ರಭಾ ಐತಾಳ್, ಡಾ. ಸತ್ಯಮೂರ್ತಿ ಐತಾಳ್, ವಿದುಷಿ ಪ್ರತಿಮಾ ಶ್ರೀಧರ್, ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

