ಮಂಗಳೂರು: ಇಲ್ಲಿನ ದೇರಳಕಟ್ಟೆಯಲ್ಲಿರುವ ನವಾಝ್ ಕಟ್ಟಡದ ಸಭಾಂಗಣದಲ್ಲಿ ಸೆಪ್ಟೆಂಬರ್ 14 ರಂದು ಇಕ್ಬಾಲ್ ಬಾಳಿಲ ಸಾರಥ್ಯದ ಕರ್ನಾಟಕ ರಾಜ್ಯ ಭಾವೈಕ್ಯತ ಪರಿಷತ್ತು ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿಗಳ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಮುಂಜಾನೆ 9 ರಿಂದ ಇಡೀ ದಿನ ನಡೆಯಿತು.
ಇದರ ಜೊತೆಗೆ ಕವಿಗಳಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿ ಯು. ಟಿ. ಇಫ್ತಿಕರ್ ಅಲಿ, ಕವಿಗೋಷ್ಠಿ ಅಧ್ಯಕ್ಷ ನಾರಾಯಣ ರೈ ಕುಕ್ಕುವಳ್ಳಿ, ಸಾಹಿತಿ ಜ್ಯೋತಿಷಿ ಭೀಮರಾವ್ ವಾಸ್ಟರ್, ಅಬ್ಬುಬೋಕರ್ ಅನಿಲಕಟ್ಟೆ, ಇಕ್ಬಾಲ್ ಕೈರಂಗಳ ಸಹಿತ ಹಲವಾರು ಗಣ್ಯರ ಸಮ್ಮುಖದಲ್ಲಿ ಭೀಮರಾವ್ ವಾಸ್ಟರ್, ಕುಕ್ಕುವಳ್ಳಿ ಸಹಿತ ಇತರ ಹಲವಾರು ರಾಷ್ಟ್ರವ್ಯಾಪೀ ಖ್ಯಾತಿಯ ಸಾಧಕರಿಗೆ ಸಾಧಕ ಸನ್ಮಾನ ಹಾಗೂ ಕವಿಗಳಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಯಿತು
ಇದೇ ವೇಳೆ ಮಂಗಳಾ ಹಾಗೂ ಕಣಚೂರಿನ ಆಯುರ್ವೇದ ಆಸ್ಪತ್ರೆಯಲ್ಲಿನ ಶಸ್ತ್ರ ಚಿಕಿತ್ಸಕ, ಮೂಲವ್ಯಾಧಿ ತಜ್ಞ, ವೈದ್ಯಕೀಯ ನಿರ್ವಾಹಕ ಡಾ. ಸುರೇಶ ನೆಗಳಗುಳಿ ಯವರಿಗೆ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಅವರು ಮಾದಕ ವ್ಯಸನ ಮತ್ತು ಭಾವೈಕ್ಯ ಬಗ್ಗೆ ಚುಟುಕು ಹಾಗೂ ಅವರ ನೂತನ ಮಾದರಿಯ ಧೀರತಮ್ಮನ ಸೊಲ್ಲು ಎಂಬ ರಚನೆ ಯನ್ನು ವಾಚಿಸಿದರು.
ಜಯಾನಂದ ಪೆರಾಜೆ,ಹಾ ಮ ಸತೀಶ, ರತ್ನಾ ಕೆ ಭಟ್, ವಿರಾಜ್ ಅಡೂರ್, ಉಮೇಶ್ ಕಾರಂತ್, ಬಶೀರ್ ಕೆ ಎ, ಅಬ್ದುಲ್ ಅಜಿಜ್ ಪುಣಚ, ಅನರ್ಕಲಿ ಸಲೀಂ, ಅಬ್ದುಲ್ ಸಮದ್ ಭಾವ ಪುತ್ತೂರು, ಶಾಂತಾ ಪುತ್ತೂರು, ಪೆರುಮಾಲ್ ಲಕ್ಷ್ಮಣ್ ಐವರ್ನಾಡ್, ಮಲ್ಲಿಕಾ ಜೆ ರೈ, ವಿಂದ್ಯಾ ಮತ್ತಿತರನ್ನು ಸಹ ಗೌರವಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

 
 
 
 
 
 
 
 
 
 
 

 
