ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿ ಉದ್ಘಾಟನೆ

Upayuktha
0


ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಸ್ಥಾಪನಾ ಸಮಾರಂಭವು  ಬುಧವಾರ (ಸೆ.3) ಮಧ್ಯಾಹ್ನ 3.00 ಗಂಟೆಗೆ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರ್ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು. ಯುವಕರು ದೇಶದ ಭವಿಷ್ಯದ ಕಂಬವಾಗಿರುವುದರಿಂದ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 


ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದರು. ಅತಿಥಿ ಗೌರವಾನ್ವಿತರಾಗಿ ಎಂ.ಜಿ.ಎಂ. ಪದವಿ ಕಾಲೇಜು ಉಡುಪಿಯ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಹಾಗೂ ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲರು ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಎಂ. ವಿಶ್ವನಾಥ್ ಪೈ ಮತ್ತು ಬಿಕಾಂ/ಬಿಬಿಎ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು.


2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಸದಸ್ಯರಾದ ಅಧ್ಯಕ್ಷ: ಧೀರಜ್ (ತೃತೀಯ ಬಿಕಾಂ), ಕಾರ್ಯದರ್ಶಿ: ಕ್ಯಾರೆನ್ ಲಿಸಾ ಅರೋನ್ (ತೃತೀಯ ಬಿಸಿಎ), ಉಪಾಧ್ಯಕ್ಷರು: ಪುಣ್ಯ (ತೃತೀಯ ಬಿಸಿಎ), ಪ್ರತೀಕ್ (ತೃತೀಯ ಬಿಸಿಎ), ತೇಜಸ್ವಿ (ದ್ವಿತೀಯ ಬಿಸಿಎ), ಸಹ ಕಾರ್ಯದರ್ಶಿಗಳು: ಧನ್ಯಾ (ತೃತೀಯ ಬಿಸಿಎ), ಅನನ್ಯಾ (ತೃತೀಯ ಬಿಸಿಎ ), ಪ್ರಿಯಾ (ದ್ವಿತೀಯ ಬಿಬಿಎ) ಕ್ರೀಡಾ ಕಾರ್ಯದರ್ಶಿಗಳು: ಛಾಯಾ (ತೃತೀಯ ಬಿಸಿಎ), ರೋಶೆಲ್ (ತೃತೀಯ ಬಿಕಾಂ) ಸಾಂಸ್ಕೃತಿಕ ಕಾರ್ಯದರ್ಶಿ: ಪ್ರಜ್ಞಾ (ತೃತೀಯ ಬಿಸಿಎ) ಸಾಹಿತ್ಯ ಕಾರ್ಯದರ್ಶಿ: ಅನುಪಮಾ (ದ್ವಿತೀಯ ಬಿಕಾಂ) ಇವರೆಲ್ಲರೂ ಪ್ರತಿಜ್ಜಾ ವಿಧಿ ಸ್ವೀಕರಿಸಿದಿರು. ಪ್ರಸಿಜಾ ಹಾಗೂ ತಂಡದವರು ಪ್ರಾರ್ಥನೆ ಮಾಡಿ, ಧೀರಜ್ ಪ್ರವೀಣ್ ಕುಮಾರ್, ತೃತೀಯ ಬಿಕಾಂ ಸ್ವಾಗತಿಸಿ, ಕ್ಯಾರನ್ ಲಿಸಾ, ತೃತೀಯ ಬಿಸಿಎ ವಂದಿಸಿ, ಮಧುರ, ದ್ವಿತೀಯ ಬಿಸಿಎ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top