ರೋಟರಿ ಕ್ಲಬ್‌ನಿಂದ ಸುರತ್ಕಲ್‌ ಹಿಂದೂ ರುದ್ರಭೂಮಿಗೆ Ash ಟ್ರೇಗಳ ಕೊಡುಗೆ

Upayuktha
0


ಸುರತ್ಕಲ್‌: ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ಮಂಗಳೂರು ಮಹಾ ನಗರ ಪಾಲಿಕೆಯ ಸುರತ್ಕಲ್ ಹಿಂದು ರುದ್ರ ಭೂಮಿಗೆ ಸುರತ್ಕಲ್ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಮತ್ತು ನಿರ್ವಹಣ ಸಮಿತಿಯ ಮನವಿಯಂತೆ ಅತಿ ಅಗತ್ಯವಾಗಿದ್ದ ಆಶ್‌ ಟ್ರೇಗಳ ಕೊಡುಗೆಯ ಹಸ್ತಾಂತರ ನಡೆಯಿತು.


ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಸದಸ್ಯೆ ಸರಿತಾ ಶಶಿಧರ್, ಮಹಾ ನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಶ್ರುತಿ, ಹಿರಿಯ ಸಮಾಜ ಸೇವಕ ಮಹಾಬಲ ಪೂಜಾರಿ ಕಡಬೊಂಡಿ ಕೊಡುಗೆಯನ್ನು ಸ್ವೀಕರಿಸಿದರು.


ಸಮಿತಿಯ ಸದಸ್ಯ ಮಧುಸೂದನ ರಾವ್ ಮಾತನಾಡಿ, ಸುಸಜ್ಜಿತ ರುದ್ರ ಭೂಮಿಯ ಅವಶ್ಯಕತೆ ಇದ್ದು ರೋಟರಿ ಸಂಸ್ಥೆಯ ಕೊಡುಗೆ ಉಪಯುಕ್ತ ವಾಗಿದೆ ಎಂದರು. 


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ ಸಮಾಜದ ಸಮಗ್ರ ಅಭಿವೃದ್ದಿಗೆ ನೆರವು ಆಗುವುದರೊಂದಿಗೆ ರುದ್ರ ಭೂಮಿಯ ಮೂಲಭೂತ ಅವಶ್ಯಕತೆಗಳ ಬೇಡಿಕೆಗಳಿಗೆ ಸೇವಾ ಸಂಸ್ಥೆಗಳು ಸ್ಪಂದಿಸುತ್ತಿವೆ ಎಂದರು.


ರೋಟರಿ ವಲಯ 2ರ ಝೋನಲ್ ಲೆಫ್ಟ್ನೆನೆಂಟ್ ಸಂದೀಪ್ ರಾವ್ ಇಡ್ಯಾ, ಸುರತ್ಕಲ್ ರೋಟರಿ ಕ್ಲಬ್ ನ ಕೋಶಾಧಿಕಾರಿ ಮೋಹನ್ ರಾವ್, ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ್, ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ಪಬ್ಲಿಕ್ ಇಮೇಜ್ ನಿರ್ದೇಶಕ ಡಾ. ಕೆ. ರಾಜ ಮೋಹನ್ ರಾವ್, ಸದಸ್ಯ ವೇಣುಗೋಪಾಲ್, ವಿದುಲ ವಿ.,, ಸಾಮಾಜಿಕ ಕಾರ್ಯಕರ್ತ ದಿನಕರ್ ಇಡ್ಯಾ, ಪುರುಷೋತ್ತಮ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ರಾಮಮೋಹನ್ ವೈ. ವಂದಿಸಿದರು.


إرسال تعليق

0 تعليقات
إرسال تعليق (0)
To Top