ರಾಣಿ ಅಬ್ಬಕ್ಕಳ ಸಾಹಸ ಪ್ರಜ್ಞೆ ಯುವಜನರಿಗೆ ಮಾದರಿ: ನಳಿನ್ ಕುಮಾರ್ ಕಟೀಲ್

Upayuktha
0

ಅಬ್ಬಕ್ಕ @500 ಸರಣಿ ಉಪನ್ಯಾಸ- ಎಸಳು 75





ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ಹಾಗೂ ಕೆನರಾ ಕಾಲೇಜು ಸಹಯೋಗದೊಂದಿಗೆ ಅಬ್ಬಕ್ಕ @ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ- ಎಸಳು 75 ಇದನ್ನು ಕೆನರಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 

ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಸ್ತ್ರ, ಶಾಸ್ತ್ರ ಕಲಿಯುವ ಮೂಲಕ ರಾಣಿ ಅಬ್ಬಕ್ಕ ಸ್ವಾಭಿಮಾನ, ಧೈರ್ಯದ ಪ್ರತೀಕವಾಗಿ ಕಾಣಿಸಿಕೊಳ್ಳುತ್ತಾಳೆ. ಅವಳ ಸಾಹಸ ಪ್ರಜ್ಞೆ ಇಂದಿನ ಯುವಜನರಿಗೆ ಮಾದರಿಯಾಗ ಬೇಕಿದೆ. ನೈಜ ಇತಿಹಾಸ ಮಕ್ಕಳಿಗೆ ತಿಳಿಯುವ ಅವಶ್ಯಕತೆಯಿದೆ. ಆದರೆ ಅದು ಅವಜ್ಞೆಗೆ ಗುರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಬ್ಬಕ್ಕಳಂತಹ ದೇಶಪ್ರೇಮಿಯನ್ನು ನೆನಪಿಸುವ ಕಾರ್ಯ ಅಭಿವಂದನೀಯ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇಂತಹ ವಿಚಾರವನ್ನು ಕೈಗೆತ್ತಿಕೊಂಡು ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಅವರು ನುಡಿದರು.


ಕೆನರಾ ಕಾಲೇಜು ಸಂಚಾಲಕ ಸಿಎ ಎಂ ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದು ನಮ್ಮ ನಾಡಿನ ದೇಶದ ಇತಿಹಾಸವನ್ನು ತಿಳಿಸುವುದು ಮಹತ್ವದ ಕೆಲಸ. ಇದು ವಿದ್ಯಾರ್ಥಿಗಳಿಗೆ ತಲುಪಬೇಕಿದೆ ಎಂದು ನುಡಿದರು. ಕೆಆರ್ ಎಂಎಸ್ಎಸ್ ಇದರ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಪ್ರಸ್ತಾವಿಸಿದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.


ಅಷ್ಟಾವಧಾನಿ ಡಾ ಬಾಲಕೃಷ್ಣ ಭಾರದ್ವಾಜ್, ಸಂಘದ ಸಂಘಟನಾ ಕಾರ್ಯದರ್ಶಿ ಡಾ ಸಿ ವಿ ಮರಿದೇವರ ಮಠ, ವ್ಯವಸ್ಥಾಪಕ ಕೆ ಶಿವಾನಂದ ಶಣೈ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ನರೇಶ್ ಶೆಣೈ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕರಾದ ಪ್ರೊ.ಅನಸೂಯಾ ಭಾಗವತ್, ಮೇಘ ರಾವ್, ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು ಎಸ್ ನಿರೂಪಿಸಿದರು. ಶೈಲಜಾ ಪುದುಕೋಳಿ ವಂದಿಸಿದರು. 


ಈ ಸಂದರ್ಭದಲ್ಲಿ ಅಷ್ಟಾವಧಾನಿ ಡಾ ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ರಾಣಿ ಅಬ್ಬಕ್ಕ ಬದುಕು ಆಧಾರಿತ ಕನ್ನಡ ಅಷ್ಟಾವಧಾನ ನಡೆಸಿಕೊಟ್ಟರು. ಕಾರ್ತಿಕ್ ಪಡ್ರೆ, ಶ್ರೀಮತಿ ಯಶೋದ ಭಟ್, ಶ್ರೀಮತಿ ಪವಿತ್ರ ಶೆಣೈ, ಯಶಸ್ ಭಟ್, ವಿಜೇಶ್ ದೇವಾಡಿಗ, ಜಿತೇಂದ್ರ ಕುಂದೇಶ್ವರ, ಶ್ರೀಮತಿ ಪುಷ್ಪಲತಾ ಪ್ರಭು, ಕು. ವಂಶಿ ಜೆ.ಎನ್ ಇವರು ಪೃಚ್ಛಕ ವಿದ್ವಾಂಸರಾಗಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top