ಪುತ್ತೂರು: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತರುಣವರ್ಗ ವಿಭಾಗದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಸಮಗ್ರ ಪ್ರಶಸ್ತಿಯನ್ನು ಹಾಗೂ ಬಾಲಕಿಯರ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ತರುಣ ವರ್ಗ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ನ್ನು ದ್ವಿತೀಯ ವಿಜ್ಞಾನ ವಿಭಾಗದ ಮಿಲನ್ ಹಾಗೂ ಸಚಿತ್ ಪಡೆದುಕೊಂಡರು. ತರುಣ ವರ್ಗ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ನ್ನು ಪ್ರಥಮ ವಿಜ್ಞಾನ ವಿಭಾಗದ ಡಿಂಪಲ್ ಶೆಟ್ಟಿ ಪಡೆದುಕೊಂಡರು.
ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
ವಿಜೇತರ ವಿವರಗಳು
ಬಾಲಕರ ವಿಭಾಗ
1. ಮಿಲನ್-ದ್ವಿತೀಯ ವಿಜ್ಞಾನ ವಿಭಾಗ - ಡಿಸ್ಕಸ್ ತ್ರೋ, ಶಾಟ್ ಪುಟ್, ಹ್ಯಾಮರ್ ತ್ರೋ - ಪ್ರಥಮ ಸ್ಥಾನ
2. ಸಚಿತ್- ದ್ವಿತೀಯ ವಿಜ್ಞಾನ ವಿಭಾಗ - 400 ಮೀ ಓಟ, 400 ಮೀ ಹರ್ಡಲ್ಸ್, 800 ಮೀ ಓಟ - ಪ್ರಥಮ ಸ್ಥಾನ
3. ಸಾತ್ವಿಕ್ ಆರ್-ದ್ವಿತೀಯ ವಿಜ್ಞಾನ ವಿಭಾಗ- ಟ್ರಿಪಲ್ ಜಂಪ್ ಪ್ರಥಮ ಸ್ಥಾನ, ಉದ್ದ ಜಿಗಿತ ಹಾಗೂ 110 ಮೀ ಹರ್ಡಲ್ಸ್ ದ್ವಿತೀಯ ಸ್ಥಾನ.
4. ಬಾಶ್ಮಿತ್- ಪ್ರಥಮ ವಾಣಿಜ್ಯ ವಿಭಾಗ- 1500 ಮೀ ಹಾಗೂ 3000 ಮೀ ಓಟ - ಪ್ರಥಮ ಸ್ಥಾನ
5. ಚವನ್ ಕುಮಾರ್-ದ್ವಿತೀಯ ವಿಜ್ಞಾನ ವಿಭಾಗ - ಟ್ರಿಪಲ್ ಜಂಪ್ ದ್ವಿತೀಯ ಸ್ಥಾನ
6. ಧನ್ವಿನ್- ಪ್ರಥಮ ವಾಣಿಜ್ಯ ವಿಭಾಗ -400 ಮೀ ಹರ್ಡಲ್ಸ್ ಹಾಗೂ 800 ಮೀ ಓಟ - ದ್ವಿತೀಯ ಸ್ಥಾನ, 400ಮೀ ಓಟ -ತೃತೀಯ
7. ಯಶ್ವಿತ್ - ದ್ವಿತೀಯ ವಾಣಿಜ್ಯ ವಿಭಾಗ - ಎತ್ತರ ಜಿಗಿತ - ಪ್ರಥಮ ಸ್ಥಾನ
8. ಮೋಕ್ಷಿತ್ - ಪ್ರಥಮ ವಿಜ್ಞಾನ ವಿಭಾಗ - ಎತ್ತರ ಜಿಗಿತ - ದ್ವಿತೀಯ ಸ್ಥಾನ
9. ಅಂಕಿತ್ - ಪ್ರಥಮ ವಾಣಿಜ್ಯ ವಿಭಾಗ - ನಡಿಗೆ ಓಟ - ತೃತೀಯ ಸ್ಥಾನ
10. ಚರಣ್ - ದ್ವಿತೀಯ ವಾಣಿಜ್ಯ ವಿಭಾಗ - ಜಾವೆಲಿನ್ ತ್ರೋ - ಪ್ರಥಮ ಸ್ಥಾನ, ಶಾಟ್ ಪುಟ್- ದ್ವಿತೀಯ ಸ್ಥಾನ
11. ಕೌಶಿಕ್ - ದ್ವಿತೀಯ ವಾಣಿಜ್ಯ ವಿಭಾಗ - ಜಾವೆಲಿನ್ ತ್ರೋ ದ್ವಿತೀಯ ಸ್ಥಾನ
ಬಾಲಕಿಯರ ವಿಭಾಗ
1. ಡಿಂಪಲ್ ಶೆಟ್ಟಿ - ಪ್ರಥಮ ವಿಜ್ಞಾನ ವಿಭಾಗ - 100 ಮೀ ಓಟ, 200 ಮೀ, 400 ಮೀ - ಪ್ರಥಮ ಸ್ಥಾನ
2. ಸಮೃದ್ಧಿ ಜೆ ಶೆಟ್ಟಿ - ದ್ವಿತೀಯ ವಿಜ್ಞಾನ ವಿಭಾಗ - 100 ಮೀ ಹರ್ಡಲ್ಸ್ , ಎತ್ತರ ಜಿಗಿತ - ಪ್ರಥಮ ಸ್ಥಾನ
3. ರಿಧಿ ಸಿ ಶೆಟ್ಟಿ - ದ್ವಿತೀಯ ವಾಣಿಜ್ಯ ವಿಭಾಗ - 800 ಮೀ, 400 ಮೀ ಓಟ - ದ್ವಿತೀಯ ಸ್ಥಾನ
4. ತನುಶ್ರೀ ರೈ - ಪ್ರಥಮ ವಿಜ್ಞಾನ ವಿಭಾಗ - ಶಾಟ್ ಪುಟ್ - ಪ್ರಥಮ ಸ್ಥಾನ
ಬಾಲಕರ ರಿಲೇ : 4x400ಮೀ ಚಿನ್ನದ ಪದಕ
4x100ಮೀ ಪ್ರಥಮ ಸ್ಥಾನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ