ಬಿಳಿಯೂರು ಸರ್ಕಾರಿ ಶಾಲೆಯಲ್ಲಿ ಟೈ ಹಾಗೂ ಐಡಿ ಕಾರ್ಡ್ ವಿತರಣೆ

Upayuktha
0


ಪುತ್ತೂರು:
ಪೆರ್ನೆ ಬಿಳಿಯೂರಿನ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಬಾಲಕೃಷ್ಣ ಮಹಾಬಲ ರೈ ಹಾಗೂ ಪೋಷಕ ವೃಂದದವರ ಸಹಕಾರದೊಂದಿಗೆ  ವಿದ್ಯಾರ್ಥಿಗಳಿಗೆ ಉಚಿತ  ಟೈ ಹಾಗೂ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಶಿಸ್ತು ಅತ್ಯಂತ ಮುಖ್ಯ. ವಿದ್ಯಾರ್ಥಿಗಳ ಜೀವನಕ್ಕೆ ಅದುವೇ ದಾರಿದೀಪ ಎಂದು ತಿಳಿಸಿದರು.


ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾಗಿರುವ ಶೀಲಾ ಡಯಾನ ಮೋರಸ್ ಮಾತನಾಡಿ ಎಸ್.ಡಿ.ಎಂ.ಸಿ., ಪೋಷಕವೃಂದ ಹಾಗೂ ಹಳೆ ವಿದ್ಯಾರ್ಥಿ ಸಹಕಾರದೊಂದಿಗೆ ಶಾಲೆಯಲ್ಲಿ ಉತ್ತಮ ಕಾರ್ಯಗಳು ಆಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಟೈ ಮತ್ತು ಐಡಿ ಕಾರ್ಡ್ ವಿತರಣೆ ನಡೆಯಿತು.


ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು,  ಶಿಕ್ಷಕವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top