ಮಂಗಳೂರು: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK), ಸುರತ್ಕಲ್‌ನ ಆಡಳಿತ ಮಂಡಳಿಯು ಕುಲಸಚಿವರ ಕಚೇರಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಕುಮಾರ್ ಜಿ.ಎನ್. ಅವರಿಗೆ ವಹಿಸಿದೆ. ಮುಂದಿನ ಆದೇಶಗಳ ತನಕ ಅವರು ಪ್ರಭಾರಿ ಕುಲಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ.
1964ರ ಕೇಂದ್ರ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಯ ಪ್ರಕ್ರಿಯೆ ನಡೆಯುತ್ತಿರುವಾಗ ಕುಲಸಚಿವರಾದ ರವೀಂದ್ರನಾಥ್ ಕೆ. ಅವರನ್ನು ಅಮಾನತುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, 2015ರಲ್ಲಿ ಕುಲಸಚಿವರ ಹುದ್ದೆಗೆ ರವೀಂದ್ರನಾಥ್ ಕೆ ಅವರನ್ನು ನೇಮಿಸಿದ ಕಾನೂನುಬದ್ಧತೆ ಮತ್ತು ಔಚಿತ್ಯ, ಹಾಗೂ ಐದು ವರ್ಷಗಳ ನಂತರವೂ ಅವರು ಹುದ್ದೆಯಲ್ಲಿ ಮುಂದುವರಿದಿರುವುದು NIT ಕಾಯ್ದೆ ಮತ್ತು ಶಾಸನಗಳಿಗೆ ವಿರುದ್ಧವಾಗಿರುವ ಬಗ್ಗೆ ತನಿಖೆ ನಡೆಸಲು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ)ಗಳ ನಿರ್ದೇಶಕರನ್ನು ಒಳಗೊಂಡ ಉನ್ನತ ಅಧಿಕಾರ ಸಮಿತಿಯನ್ನು NITK ಆಡಳಿತ ಮಂಡಳಿಯು ರಚಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ