ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಖಂಡಿಕಾ: 6,12,000 ರೂ ಲಾಭ

Upayuktha
0


ಸಾಗರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಖಂಡಿಕಾ ಇದು ಆರು ಗ್ರಾಮಗಳನ್ನು ಹೊಂದಿದ್ದು ಸುಮಾರು 842 ಸದಸ್ಯರನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಮೂರು ಕೋಟಿ ಐವತ್ತು ಲಕ್ಷ ಬ್ಯಾಂಕ್ ಸಾಲ ಹಾಗೂ 25 ಲಕ್ಷ ಸ್ವಂತ ಬಂಡವಾಳದ ಹಾಗೂ ಜಾಮೀನು ಸಾಲವಾಗಿ 65 ಲಕ್ಷ ಸಾಲವನ್ನು ಸದರಿ ಸಾಲಿನಲ್ಲಿ ನೀಡಿರುತ್ತದೆ. ಒಟ್ಟು ನಾಲ್ಕು ಕೋಟಿ ಸಾಲವನ್ನು ನೀಡಿದ್ದು ಸಂಘವು ಒಂದು ಕೋಟಿ 30 ಲಕ್ಷ ಠೇವಣಿಯನ್ನು ಹೊಂದಿದೆ.


ಸಂಘವು ಸದರಿ ಸಾಲಿನಲ್ಲಿ ಯಾವುದೇ ಸುಸ್ತಿ ಸಾಲಗಳನ್ನು ಹೊಂದಿರುವುದಿಲ್ಲ ಹಾಗೆಯೇ ಪ್ರಸಕ್ತ ಸಾಲಿನಲ್ಲಿ ಸಂಘವು 6,12,000 ಲಾಭವನ್ನು ಗಳಿಸಿದ್ದು ಸುಮಾರು ಐದು ವರ್ಷದಿಂದ ಸದಸ್ಯರಿಗೆ ಷೇರು ಡಿವಿಡೆಂಟ್ ನೀಡುತ್ತಾ ಬಂದಿರುತ್ತದೆ. ಸಂಘದಲ್ಲಿ ರೈತರಿಗೆ ಸಹಾಯವಾಗುವಂತಹ ಕೃಷಿ ಉಪಕರಣಗಳು ಸಾವಯವ ಗೊಬ್ಬರ, ಪಶು ಆಹಾರ, ಕೃಷಿ ಸಲಕರಣೆ ವಸ್ತುಗಳು ಹಾಗೂ ಪಡಿತರ ವಿತರಣೆಯನ್ನು ಹೊಂದಿರುತ್ತದೆ.


ಸಂಘವು ಪ್ರಗತಿ ಹೊಂದಲು ವ್ಯಾಪ್ತಿಯ ಸಂಘದ ಸದಸ್ಯರ ಕಾರ್ಯನಿಷ್ಠತೆ ಮತ್ತು ಸಮಯಪ್ರಜ್ಞೆಯೆ ಕಾರಣ. ಈ ಎಲ್ಲಾ ಪ್ರಗತಿಗೆ ಸಂಘದ ಅಧ್ಯಕ್ಷ ಕೆ ಎಂ ರಮೇಶ್ ಹಾಗೂ ಆಡಳಿತ ಮಂಡಳಿಯೆ ಕಾರಣ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪುರುಷೋತ್ತಮ್ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಕೆಲಸವೇ ಕಾರಣವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top