ಪಾಪ ಕೂಪದಲ್ಲಿ ಬಿದ್ದು
ತಾಪದಲ್ಲಿ ನೊಂದು ಬೆಂದು
ರೂಪ ಪಡೆದ ಮನುಜ ಕುಲದ ಕಂದನಾಗಿಹೇ
ಕೋಪತಾಪವನ್ನು ತೊರೆದು
ತೋಪು ಸಿಡಿಸುವಂತೆ ಮನಕೆ
ಛಾಪು ತುಂಬಿಯೆನ್ನ ಬಾಳ್ವೆ ಬೆಳಗುಯೆಂದಿಹೇ
ಕಳ್ಳನೆಂದು ಕರೆದರೇನು
ಗೊಲ್ಲನೆಂದು ಜರಿದರೇನು
ನಲ್ಲನಾದೆ ಗೋಪಿಯರಿಗೆ ಸರಿಯೆ ಕೃಷ್ಣನೇ
ಎಲ್ಲ ಬಲ್ಲ ದೇವನೆಂದು
ಸೊಲ್ಲು ಸೊಲ್ಲಿನಲ್ಲಿ ಮೆರೆಸಿ
ಸುಳ್ಳು ಕಪಟವರಿಯದವರ ಪೊರೆಯೊ ವಿಠಲನೇ
ನಾನು ನೀನು ಬೇರೆಯಲ್ಲ
ಜಾನದಿಂದ ನೀನು ಬೆಲ್ಲ
ತಾಣ ಬೇದವಿಲ್ಲದಂಥ ನಿನಗೆ ತಿಳಿಯದೇ
ನೀನೆ ನನ್ನ ಬಾಳ ದೀಪ
ಕಾಣೆನಲ್ಲ ನಿನ್ನ ರೂಪ
ಬೇನೆ ನೀಗಿ ಕರೆದು ಕೊಳ್ಳೊ ಮನಸ ಬೇಡುವೇ
ಇಷ್ಟನಷ್ಟವೇನೆಯಿರಲಿ
ಕಷ್ಟ ಸುಖವ ಮರೆತು ನಿನ್ನ
ಮುಷ್ಠಿಯಲ್ಲಿ ನಲಿದು ಕುಣಿದು ಮುಕ್ತಿ ಪಡೆಯುವೆ
ಶಿಷ್ಟನಾಗಿ ನಿನ್ನ ಪಾದ
ನಿಷ್ಠೆಯಿಂದ ನಂಬಿ ಬರುವೆ
ಶೇಷ್ಠತನವ ನೀಡಿಯೆನ್ನ ಕಾಯೊ ಶ್ರೀಹರೀ
ವೈಲೇಶ.ಪಿ.ಎಸ್. ಕೊಡಗು
8861405738
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


