ಬೆಳ್ತಂಗಡಿ: ಶಿವಮೊಗ್ಗದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ| ಗಣೇಶಪ್ರಸಾದ್ ಅವರು ಸೇಲಂನ ಡೀಮ್ಡ್ ಯುನಿವರ್ಸಿಟಿಯಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಮೂಲತಃ ಬೆಳ್ತಂಗಡಿಯವರಾದ ಅವರು ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಪದವಿ, ಮಂಗಳೂರು ಕೆಎಂಸಿಯಲ್ಲಿ ಅನಾಟಮಿಯಲ್ಲಿ ಎಂಎಸ್ಸಿ ಪದವಿ, ಕುವೆಂಪು ವಿ.ವಿ.ಯಿಂದ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಎಂ.ಎಸ್. ಪದವಿ ಪಡೆದು ಇದೀಗ ಸೇಲಂ ವಿ.ವಿ.ಯಲ್ಲಿ ಡಾ| ಬಿ. ಸೆಂಥಿಲ್ ಕುಮಾರ್ ಮಾರ್ಗದರ್ಶನದಲ್ಲಿ "Morphological Study of Human Scalp Hair in Relevance to Selected Systemic Diseases" ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕೆ ವಿನಾಯಕ ಮಿಷನ್ಸ್ ರಿಸರ್ಚ್ ಫೌಂಡೇಶನ್‌ನಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.
ಇವರ ತಂದೆ ತಿಮ್ಮಪ್ಪಯ್ಯರವರು ಹಲವಾರು ವರ್ಷ ಧರ್ಮಸ್ಥಳ ಸರಕಾರಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕಾರ್ಯನಿರ್ವಹಿಸಿ ಇದೀಗ ನಿವೃತ್ತರಾಗಿದ್ದಾರೆ. ತಾಯಿ ಅನ್ನಪೂರ್ಣೇಶ್ವರಿ ಗೃಹಿಣಿಯಾಗಿದ್ದು, ಪತ್ನಿ ಭಾಗೀರಥಿ ಆಯನೂರು ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ