ಪೆರಾಜೆ: ಮಂಗಳೂರು ಹೋಬಳಿಯ ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯಾ ಮಂಡಲಗಳ ಸಂಯುಕ್ತ ಸಭೆಯು ಗುರುವಾರ (ಸೆ.11) ಅಪರಾಹ್ನ ಗಂಟೆ 03.30ಕ್ಕೆ ಶ್ರೀರಾಮಚಂದ್ರಾಪುರ ಮಠ ಪೆರಾಜೆ, ಮಾಣಿಯಲ್ಲಿ ನಡೆಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಾಪು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮಹೇಶ ಚಟ್ನಳ್ಳಿ ಪ್ರಸ್ತಾವನೆ ಮಾಡುತ್ತಾ ಸುವರ್ಣ ಪಾದುಕೆಯ ಸಂಚಾರದ ಮುಂದಿನ ಹಂತದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ವೈದ್ಯ ಕೃಷ್ಣಮೂರ್ತಿ ಏತಡ್ಕ ಶಿಷ್ಯಹಿತಮ್ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಸುವರ್ಣ ಪಾದುಕಾ ಸಂಚಾರ ಕುರಿತು ಭಾಸ್ಕರ ರಾಮಚಂದ್ರ ಹೆಗಡೆ ಕೊಡಗಿಬೈಲು ಮಾಹಿತಿ ನೀಡಿದರು. ಮಹಾಮಂಡಲದ ಕೃಷ್ಣಮೂರ್ತಿ ಮಾಡಾವು, ಈಶ್ವರ ಪ್ರಸಾದ ಕನ್ಯಾನ, ಶ್ರೀಮತಿ ದೇವಿಕಾ ಶಾಸ್ತ್ರೀ, ಮಾತೃತ್ವಮ್ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶ್ಯಾಮ ಭಟ್ಟ ಬೇರ್ಕಡವು, ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರೆಕೆರೆ ನಾರಾಯಣ ಭಟ್, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಪೆದಮಲೆ ನಾಗರಾಜ ಭಟ್, ಮಂಡಲಗಳ ಪದಾಧಿಕಾರಿಗಳು, ವಲಯಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ದರ್ಭೆ ಸ್ವಾಗತಿಸಿ ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಶಿವಶಂಕರ ಬೋನಂತಾಯ ಧನ್ಯವಾದವಿತ್ತರು.
ಈ ಬಾರಿಯ ಸ್ವರ್ಣಪಾದುಕಾ ಸಂಚಾರವು ಅ.04 ರಂದು ಮಂಗಳೂರು ಮಂಡಲದಿಂದ ಪ್ರಾರಂಭಿಸಿ ಮುಳ್ಳೇರಿಯ, ಉಪ್ಪಿನಂಗಡಿ ಮಂಡಲದಲ್ಲಿ ಸಂಚಾರ ಮಾಡಿ ನ.10 ರಂದು ಕುಂದಾಪುರದಲ್ಲಿ ಕೊನೆಗೊಳ್ಳಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ