ಧರ್ಮಸ್ಥಳ: ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಬಳಿಕ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಪೂಜ್ಯ ಸ್ವಾಮೀಜಿಯವರ ಪಾದಪೂಜೆ ಮಾಡಲಾಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೂಜ್ಯ ಸ್ವಾಮೀಜಿಯವರಿಗೆ ತುಳಸಿ ಮಾಲೆ ಹಾಕಿ ಶಾಲು ಹೊದಿಸಿ ಗೌರವಿಸಿದರು.
ಪೂಜ್ಯ ಪೇಜಾವರ ಸ್ವಾಮೀಜಿಯವರು ಹೆಗ್ಗಡೆಯವರಿಗೆ ಫಲ ಮಂತ್ರಾಕ್ಷತೆಯೊಂದಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಮಠದ ವತಿಯಿಂದ ಶಾಲು ಹೊದಿಸಿ, ಗೌರವಿಸಿದರು.
ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರಿಗೂ ಸ್ವಾಮೀಜಿಯವರು ಪ್ರಸಾದ ನೀಡಿ ಆಶೀರ್ವದಿಸಿದರು. ಬಳಿಕ ಸ್ವಾಮೀಜಿ ದೇವರ ದರ್ಶನ ಮಾಡಿ, ವಿಶೇಷ ಸೇವೆ ಸಲ್ಲಿಸಿ ಉಡುಪಿಗೆ ಪ್ರಯಾಣಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ