ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಸೊಸೈಟಿ ಲಿ. ವಾರ್ಷಿಕ ಮಹಾಸಭೆ; ಶೇ 15 ಡಿವಿಡೆಂಡ್ ಘೋಷಣೆ

Upayuktha
0



ಉಡುಪಿ: ಸೊಸೈಟಿಯ 24 ನೇ ವಾರ್ಷಿಕ ಮಹಾಸಭೆ ಸೆಪ್ಟಂಬರ್ 21 ರಂದು ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಯವರ ಅಧ್ಯಕ್ಷತೆಯಲ್ಲಿ ಜರಗಿತು.


2024-25 ನೇ ಸಾಲಿನ ಅಂತ್ಯಕ್ಕೆ ರೂ 2.10 ಕೋಟಿ ಪಾಲು ಬಂಡವಾಳ, ರೂ 13.91 ನಿಧಿಗಳು, ರೂ 141.29 ಕೋಟಿ ಠೇವಣಿ, ರೂ 104.24 ಕೋಟಿ ಸಾಲ ಹೊರಬಾಕಿಯೊಂದಿಗೆ, ರೂ 2.91 ನಿವ್ವಳ ಲಾಭ ಗಳಿಸಿ ಲೆಕ್ಕಪರಿಶೋಧನೆಯಲ್ಲಿ ’ಏ’ ಶ್ರೇಣಿಯ ಸಹಕಾರ ಸಂಘಎಂದು ವರ್ಗೀಕರಿಸಿರುವರು.


ಸಂಘದ ಲೆಕ್ಕಪತ್ರ, ಆಯವ್ಯಯ, ನಿವ್ವಳ ಲಾಭದ ವಿಂಗಡಣೆ, ಮುಂದಿನ ವರ್ಷದ ಯೋಜನೆಗಳ ವಿವರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನರಸಿಂಗೆ ಮಂಡಿಸಿದರು. ಸಂಘವು 24 ವರ್ಷ ಪೂರೈಸಿ 25 ನೇ ವರ್ಷದಲ್ಲಿದ್ದು ಇದನ್ನು ಬೆಳ್ಳಿಬೆಡಗು ಸಂಭ್ರಮವಾಗಿ ಆಚರಿಸುತ್ತಿದ್ದು ಈ ವರ್ಷ ಪರ್ಕಳ ರಾಷ್ಟ್ರೀಯ ಹೆದ್ದಾರಿ ಪಾರ್ಶ್ವದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಇದು ಆಕ್ಟೋಬರ್ ತಿಂಗಳ 12 ರಂದು ಲೋಕಾರ್ಪಣೆಗೊಳ್ಳಲಿದೆ ಅಲ್ಲದೆ ಬೆಳ್ಳಿಬೆಡಗು ವಿಶೇಷ ಠೇವಣಿ ಯೋಜನೆ ಜಾರಿ ಗೊಳಿಸಿದ್ದು ಶೇ 9.50 ಇತರರಿಗೆ, ಹಿರಿಯ ನಾಗರಿಕರಿಗೆ ಶೇ 10 ಬಡ್ಡಿದರ ನೀಡಿ ಎಲ್ಲರಿಗೂ ಒಳ್ಳೆಯ ಕೊಡುಗೆ ನೀಡಿದೆ ಎಂದು ಅಧ್ಯಕ್ಷರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.


ಮಹಾಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ 80 ಯಾ ಅಧಿಕ ಅಂಕ ಗಳಿಸಿದ ಏ ವರ್ಗದ ಸದಸ್ಯರ 70 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.


ಸಮಾಜದಲ್ಲಿ ವಿಶೇಷ ಸಾಧನೆ ಯೊಂದಿಗೆ, ಸೇವೆ ಗೈಯುತ್ತಿರುವ ಡಾ| ನಿತ್ಯಾನಂದ ನಾಯಕ್ ಬೆಳಂಜಾಲೆ ಡಿಸ್ಟ್ರಿಕ್ಟ್ ಸರ್ಜನ್, ಡಾ| ಸುಮತಿ ರಘುರಾಮ್ ಪ್ರಭು ಅಂಡಾರು ಸಾಹಿತ್ಯ ಕ್ಷೇತ್ರದ ಸಾಧನೆ, ರಾಘವೇಂದ್ರ ಪ್ರಭು ಕರ್ವಾಲು ರಕ್ತದಾನಿ, ಲೇಖಕರು ಮತ್ತು ಅನೇಕ ಪ್ರಶಸ್ತಿ ಗಳಿಸಿ ಸಾಧನೆ ಮಾಡಿರುವ ಗಣ್ಯರನ್ನು ಮಹಾಸಭೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.


ನೂತನ ಕಟ್ಟಡದ ಉದ್ಘಾಟನ ಸಮಾರಂಭದ ಆಮಂತ್ರಣ ಪತ್ರಿಕೆ ರವೀಂದ್ರ ಪ್ರಭು ಕಡಾರಿ ಹಿರಿಯ ಸಹಕಾರಿಗಳು, ಅಧ್ಯಕ್ಷರು ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕಾರ್ಕಳ ಇವರು ಬಿಡುಗಡೆಗೊಳಿಸಿದರು.


ಸಮಾರಂಭದಲ್ಲಿ ಸೊಸೈಟಿಯ ನಿರ್ದೇಶಕರಾದ ರಾಮಕೃಷ್ಣ ನಾಯಕ್ ಪರ್ಕಳ, ಸದಾನಂದ ನಾಯಕ್ ಹೆರ್ಗ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲ್ಬೆಟ್ಟು, ರವೀಂದ್ರ ಪಾಟ್ಕರ್ ಬಂಟಕಲ್, ವಿಜೇತ್ ಕುಮಾರ್ ಬೆಳ್ಳಾರ್ಪಾಡಿ, ಗಣಪತಿ ನಾಯಕ್ ದೇವಿನಗರ, ಶ್ರೀಮತಿ ಜಯಂತಿ ನಾಯಕ್ ಪರ್ಕಳ, ಶ್ರೀಮತಿ ರೂಪ ನಾಯಕ್ ದೇವಿನಗರ ಹಾಜರಿದ್ದು, ಪ್ರಾಂಡುರಂಗ ಕಾಮತ್ ಉಪಾಧ್ಯಕ್ಷರು ಸ್ವಾಗತಿಸಿ, ಶ್ರೀಶ ನಾಯಕ್ ನಿರೂಪಿಸಿ, ನಿರ್ದೇಶಕರಾದ ಗಣಪತಿ ಪ್ರಭು ಕುಕ್ಕೆಹಳ್ಳಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top