ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ ಓಣಂ, ಶಿಕ್ಷಕರ ದಿನಾಚರಣೆ

Chandrashekhara Kulamarva
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಉಜಿರೆಯಲ್ಲಿ ಶನಿವಾರ (ಸೆ.06) ಶಿಕ್ಷಕರ ದಿನಾಚರಣೆಯನ್ನು ಓಣಂ ಹಬ್ಬದ ಆಚರಣೆಯ ಜೊತೆಗೆ ಕಾರ್ಯಕ್ರಮ ನಡೆಸಲಾಯಿತು.


ಮೊದಲಿಗೆ ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಕಾಮತ್ ಹಾಗೂ ಸಿಬ್ಬಂದಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ ನಂತರ ಸರ್ವಪಳ್ಳಿ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.



ಸಂಸ್ಥೆಯ ವಿದ್ಯಾರ್ಥಿನಿಯರು ಶಿಕ್ಷಕರ ದಿನಾಚರಣೆಯ ಮಹತ್ವ ಮತ್ತು ಎಸ್. ರಾಧಾಕೃಷ್ಣನ್ ಇವರ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಕಾಮತ್ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಓಣಂ ಹಬ್ಬದ ಆಚರಣೆಯ ಮಾಹಿತಿಯನ್ನು ನೀಡಿದ ನಂತರ ಶಿಕ್ಷಕರಿಗಾಗಿ ವಿವಿದ ಆಟೋಟ ಸ್ಪರ್ಧೆ ನಡೆಸಿದರು. ಕೊನೆಯದಾಗಿ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top