ಓಣಂ ಆಚರಣೆ- ಸೌಹಾರ್ದಕ್ಕೆ ಮಾದರಿ: ರೇಮಂಡ್ ಡಿಕೂನಾ ತಾಕೊಡೆ

Chandrashekhara Kulamarva
0



ಕಾಸರಗೋಡು: ಸ್ವರ್ಣ ಮಹೋತ್ಸವದ ಹೊಸ್ತಿಲಿನಲ್ಲಿ ಇರುವ ಸಂತೋಷ್ ಆಟ್ಸ್ ಅ್ಯಂಡ್ ಸ್ಪೋರ್ಟ್ಸ್ ಕ್ಲಬ್ ಯಾವುದೇ, ಚರ್ಚ್, ದೇವಸ್ಥಾನ, ಮಸೀದಿ ಇಲ್ಲದೆ ಎಲ್ಲಾ ಧರ್ಮದ ಜನರು ಒಟ್ಟಿಗೆ ಇರಲು ಪ್ರೇರಣೆ ನೀಡಿ ಸೀತಾಂಗೋಳಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ ಆದು ಸೌಹಾರ್ದಕ್ಕೆ ಮಾದರಿಯಾಗಿದೆ ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.


ಅವರು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿಯ ಸೀತಂಗೋಳಿಯ ಸಂತೋಷ್ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ‌ನ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ಮಾಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಒಂದು ಬದಲಾವಣೆ ಅಂದರೆ ಸುಮಾರು ಇಪ್ಪತೈದು ವರ್ಷಗಳ ಕಾಲವಾಗಿದೆ. ಇಲ್ಲಿ ಐವತ್ತು ವರ್ಷಗಳ ಕಾಲದಲ್ಲಿ ಇಡೀ ಪರಿಸರ ಶಾಂತಿ, ಸೌಹಾರ್ದ ಮತ್ತು ಬೆಳವಣಿಗೆ ಎಲ್ಲಾ ಜೊತೆಯಲ್ಲಿ ಸೇರಿಕೊಂಡು ದೊಡ್ಡ ಉದ್ದಿಮೆಗಳು ಬರಲು ಕಾರವಾಗಿದೆ ಎಂದು ಹೊಗಳಿದರು.


ಆತಿಥಿಗಳಾದ ಪಿ ಬಿ ತೌಸಿಫ್‌ ಅಹಮ್ಮದ್ ಚೆಂಡೆಯನ್ನು ಬಡಿದು ಮೆರವಣಿಗೆ ಉದ್ಘಾಟಿಸಿದರು. ಕವಿ,ಚಲನಚಿತ್ರ ನಟ, ನಿರ್ದೇಶಕ ಪ್ರಭಾಕರ ಕಲ್ಲೂರಾಯ ಸೀತಾಂಗೋಳಿ ಸನ್ಮಾನ ಸ್ವೀಕರಿಸಿ ಕವಿತೆ ಸಾದರಪಡಿಸಿ ಮಾತನಾಡಿದರು.


ಮೊದಲಿಗೆ  ಸಂಸ್ಥಾಪಕ ಸದಸ್ಯರಾದ ಥೋಮಸ್ ಡಿಸೋಜ ಸ್ವಾಗತಿಸಿ ಪ್ರಸ್ತಾವನೆ ಮಾಡಿದರು; ಮೂರು ಸಣ್ಣ ಅಂಗಡಿಗಳ ಹಳ್ಳಿ ಈಗ ಬೆಳೆದು ನೂರಾರು ಅಂಗಡಿಗಳು, ಸಾವಿರಾರು ಜನರು ವಾಸಿಸುವ ಪೇಟೆಯಾಗಿ ಬೆಳೆದಿದೆ. ಅದಕ್ಕೆ ಕಾರಣ ಸಂತೋಷ್  ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನೀಡಿದ ದೇಣಿಗೆ ಮತೀಯ ಸೌಹಾರ್ದಕ್ಕೆ ಇದೊಂದು ಸುಂದರ ಉದಾಹರಣೆ ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು.


ಸಂಘ  ಬೆಳೆದು ಬಂದ ದಾರಿಯನ್ನು ವಿವರಣೆ ನೀಡಿದ ಅವರು ಸೀತಾಂಗೋಳಿಯ ಪ್ರತಿಯೊಬ್ಬ ಉದ್ಯಮಿ, ವ್ಯಾಪಾರಸ್ಥರು, ವಾಹನ ಚಾಲಕರು, ಮಾಲಕರು  ಸಂಘಟನೆಯ ಭಾಗವಾಗಿದ್ದು ಪ್ರತಿಯೊಂದು ರೀತಿಯಲ್ಲಿ ಜೊತೆಯಲ್ಲಿ ಇರುತ್ತಾರೆ. ಸಾಂಘಿಕ ಸೌಹಾರ್ದ ಜೀವನದ ಒಂದು ಉದಾಹರಣೆ ಸಂತೋಷ್ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ಎಂದು ಹೇಳಿ ಸ್ವಾಗತ ಕೋರಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಗುರುರಾಜ್ ಮಾಡಿದರು. ರಂಜಿತ್, ಸತೀಶ್ ರಾಜ್ ಮತ್ತು ಎಲ್ಲಾ ಸದಸ್ಯರು ಏಕಪ್ರಕಾರವಾಗಿ ವಸ್ತ್ರಸಂಹಿತೆ ಧರಿಸಿ ಇಡೀ ಕಾರ್ಯಕ್ರಮ ಸಂಯೋಜನೆ ಮಾಡಿದರು. ಸದಸ್ಯರು‌ ಮತ್ತು ಅವರ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಅಪ್ಪಣ್ಣ ಪಾಟಾಳಿ ವಂದಿಸಿದರು.


ಸಾಂಸ್ಕೃತಿಕ ಕಾರ್ಯದರ್ಶಿ ಶೋಭಿತ್ ಸುವ್ಯವಸ್ಥೆ ನೋಡಿದರು. ಮೊದಲಿಗೆ ಕ್ಲಬ್‌ನ ಪೇಟೆಸವಾರಿ ಮೆರವಣಿಗೆಯಲ್ಲಿ ಚೆಂಡೆ ಮತ್ತು ಮಹಾಬಲಿ ಕೊಂಡೊಯ್ದು  ವಿಜೃಂಭಣೆ ನಡೆಸಲಾಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top