ಪುತ್ತಿಗೆ ಶ್ರೀಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ತಮ್ಮಣ್ಣ ಶೆಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Chandrashekhara Kulamarva
0


ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ವಿರುದ್ಧ ತೀರಾ ಆಕ್ಷೇಪಾರ್ಹವಾಗಿ ನಾಲಗೆ ಹರಿಬಿಟ್ಟಿರುವ ತಮ್ಮಣ್ಣ ಶೆಟ್ಟಿ ಎಂಬವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಜಿ ವಾಸುದೇವ ಭಟ್ ಪೆರಂಪಳ್ಳಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.


ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉಪಸ್ಥಿತರಿದ್ದವ ರೊಬ್ಬರ ಕಾರ್ಯಶೈಲಿಯನ್ನು ಶ್ರೀಗಳು ಬಣ್ಣಿಸಿದ್ದನ್ನು ತಮ್ಮಣ್ಣ ಶೆಟ್ಟಿ ವಿರೋಧಿಸಿದ್ದಾರೆ. ಶ್ರೀಗಳು ಆ ವೇದಿಕೆಯಲ್ಲಿ ಆಡಿದ ಮಾತುಗಳು ಸರಿಯೋ ತಪ್ಪೋ ಅದು ಅವರವರ ಭಾವಕ್ಕೆ ಬಿಡೋಣ.‌ ಆದರೆ ಅದನ್ನು ಖಂಡಿಸುವ ಭರದಲ್ಲಿ ತಮ್ಮಣ್ಣ ಶೆಟ್ಟಿ ಸಭ್ಯತೆಯ ಎಲ್ಲೆ ಮೀರಿದ್ದಾರೆ. ಒಬ್ಬ ಮಠಾಧೀಶರ ವಿರುದ್ಧ ಇಂತಹ ಮಾತುಗಳನ್ನು ಸಹಿಸಲು ಅಸಾಧ್ಯ. ದೇಶ ವಿದೇಶಗಳಲ್ಲಿರುವ ಶ್ರೀಗಳ ಅಸಂಖ್ಯ ಶಿಷ್ಯರು ಅಭಿಮಾನಿಗಳಿಗೆ ಇದರಿಂದ ತೀವ್ರ ಆಘಾತವಾಗಿದೆ. ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಆದ್ದರಿಂದ ಜಿಲ್ಲಾಡಳಿತ ಪೋಲಿಸ್ ಇಲಾಖೆ ತಕ್ಷಣ ತಮ್ಮಣ್ಣ ಶೆಟ್ಟಿಯವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ವಾಸುದೇವ ಭಟ್ ಪೆರಂಪಳ್ಳಿ ಆಗ್ರಹಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top