ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆ

Upayuktha
0


ನಿಟ್ಟೆ:
'ಸಮಾಜದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅತಿ ಮಹತ್ವದ್ದು. ಇಂಜಿನಿಯರ್‌ಗಳ ಸೃಜನಶೀಲತೆ ಹಾಗೂ ತಾಂತ್ರಿಕ ಪರಿಣತಿಯು ದೇಶದ ಪ್ರಗತಿಯ ಕೇಂದ್ರೀಯ ಶಕ್ತಿ' ಎಂದು ನೊವಿಗೊ ಸೊಲ್ಯೂಷನ್ಸ್ ಸಂಸ್ಥೆಯ ಸಹ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹಾಗೂ ಇಂಜಿನಿಯರ್ಸ್ ಡೇ ಪ್ರಶಸ್ತಿ ಪುರಸ್ಕೃತ ಪ್ರವೀಣ್ ಕುಮಾರ್ ಕಲ್ಭಾವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ಸೆಪ್ಟೆಂಬರ್ 13ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, 'ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂಜಿನಿಯರ್‌ಗಳು ತಮ್ಮ ಸೃಜನಶೀಲ ಚಿಂತನೆಗಳಿಂದ ಸಮಾಜಕ್ಕೆ ನೂತನತೆ ತರುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಪ್ರಚಲಿತದಲ್ಲಿರುವ ತಂತ್ರಜ್ಞಾನ ಕೌಶಲ್ಯವನ್ನು ಕರಗತಗೊಳಿಸಿಕೊಂಡರಷ್ಟೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಗಲು ಸಾಧ್ಯ' ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಎ. ಯೋಗೀಶ್ ಹೆಗ್ಡೆ ಸನ್ಮಾನಿತ ಶಿಕ್ಷಕರನ್ನು ಅಭಿನಂದಿಸಿ, 'ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶ ಬದುಕು ನಮಗೆ ಸದಾ ಮಾದರಿಯಾಗಬೇಕು. ಪಿಎಚ್.ಡಿ ಪದವಿಯನ್ನು ಗಳಿಸುವ ಮೂಲಕ ನೀವು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ. ನಿಮ್ಮ ಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪೂರಕವಾಗಬೇಕು' ಎಂದರು.


2024–25 ನೇ ಸಾಲಿನಲ್ಲಿ ಪಿಎಚ್.ಡಿ ಪದವಿಯನ್ನು ಪಡೆದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಶಿಕ್ಷಕರಾದ ಡಾ| ಚಿನ್ಮಯಿ ಶೆಟ್ಟಿ, ಡಾ| ಪುನೀತ್ ಆರ್.ಪಿ, ಡಾ| ಮಮತಾ ಕೆ.ಎಂ, ಡಾ| ಪ್ರೀತಿ ಸಾಲಿಯನ್ ಕೆ, ಡಾ| ಪ್ರವೀಣ್ ಎಂ. ನಾಯಕ್, ಡಾ| ದೇವಿದಾಸ್, ಡಾ| ಧನಂಜಯ ಬಿ, ಡಾ| ಅನಂತ ಮೂರ್ತಿ, ಡಾ| ಮಿನು ಪಿ. ಅಬ್ರಹಾಂ, ಡಾ| ನಿಜು ರಾಜನ್, ಡಾ| ರಶ್ಮಿ ನವೀನ್, ಡಾ| ಅಶ್ವಿನ್ ಶೆಣೈ ಆರ್, ಡಾ| ಸುದೇಶ್ ರಾವ್, ಡಾ| ಅಶ್ವಿನಿ ಕೆ, ಡಾ| ಪ್ರವೀಣಾ ಕುಮಾರಿ ಎಂ.ಕೆ ಹಾಗೂ ಡಾ| ಸುನು ರೋಸ್ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ವಿಶ್ವದ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಗುರುತಿಸಲ್ಪಟ್ಟಿರುವ ನಿಟ್ಟೆ ತಾಂತ್ರಿಕ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ| ಸಂತೋಷ್ ಕುಮಾರ್ ತಿವಾರಿ ಅವರನ್ನು ಗೌರವಿಸಲಾಯಿತು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಡಾ| ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಡಾ| ವಾಸುದೇವ ಅತಿಥಿಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಡೀನ್ (ಎಕಾಡೆಮಿಕ್ಸ್) ಡಾ| ಐ ಆರ್ ಮಿತ್ತಂತಾಯ ವಂದಿಸಿದರು. ಡಾ| ನರಸಿಂಹ ಬೈಲ್ಕೇರಿ (ಡೀನ್ - ಸ್ಟೂಡೆಂಟ್ ವೆಲ್ಫೇರ್) ಕಾರ್ಯಕ್ರಮ ಸಂಯೋಜಿಸಿದರು. ಸಹಪ್ರಾಧ್ಯಾಪಕಿಯರಾದ ಡಾ| ಶ್ರೀವಿದ್ಯಾ ಜಿ ಹಾಗೂ ಡಾ| ಪದ್ಮಾವತಿ ಕೆ ಪ್ರಾರ್ಥಿಸಿದರು. ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಶ್ವೇತಾ ಭರತ್ ಮತ್ತು ಕಾರ್ಯಕ್ರಮ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top