ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ನಿಟ್ಟೆ ಕಾಲೇಜಿನಲ್ಲಿ 'ಪ್ರತ್ಯಾಹಾರ್' ಬೀದಿ ನಾಟಕ

Upayuktha
0



ನಿಟ್ಟೆ: ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತಾಲೀಮ್ ತಂಡ ಹಾಗೂ ಸಿಒಪಿಇ-ಆದಿತ್ಯ ಬಿರ್ಲಾ ಗ್ರೂಪ್ ನ ಎಂಪವರ್ ಜಂಟಿಯಾಗಿ 'ಪ್ರತ್ಯಾಹಾರ್' ಎಂಬ 15 ನಿಮಿಷಗಳ ಕಾಲದ ಆತ್ಮಹತ್ಯೆ ತಡೆಗಟ್ಟುವಿಕೆಯ ಬಗೆಗಿನ ಬೀದಿ ನಾಟಕವನ್ನು ಸೆ.10 ರಂದು ಕಾಲೇಜಿನ ಆವರಣದಲ್ಲಿ ಏರ್ಪಡಿಸಿತು. 


ಈ ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು, ಡೀನ್ ಸ್ಟೂಡೆಂಟ್ ವೆಲ್ಫೇರ್ ಡಾ. ನರಸಿಂಹ ಬೈಲ್ಕೇರಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಥಮ ವರ್ಷದ ಸಂಯೋಜಕ ಡಾ. ಜಾಯ್ ಮಾರ್ಟಿಸ್ ಅತಿಥಿಗಳಾಗಿ ಭಾಗವಹಿಸಿದ್ದರು.


ಈವೆಂಟ್ ನ ಉದ್ದೇಶ: ಆತ್ಮಹತ್ಯೆ ತಡೆಗಟ್ಟುವಿಕೆಯ ಬೀದಿ ನಾಟಕವು ಸ್ಪಷ್ಟ ಮತ್ತು ದೃಢವಾದ ಉದ್ದೇಶವನ್ನು ಹೊಂದಿದ್ದು, ಇದು ಶೈಕ್ಷಣಿಕ ಫಲಿತಾಂಶ ಉತ್ತಮವಾಗಿರದೆ, ಪರೀಕ್ಷಾ ಒತ್ತಡ ಮತ್ತು ವೈಯಕ್ತಿಕ ವಿಚಾರವನ್ನು ಇತರರು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಭಯದ ಪರಿಣಾಮದಿಂದ ಮಾಡಿಕೊಳ್ಳುವ ಆತ್ಮಹತ್ಯೆಯನ್ನು ತಡೆಯಲು ಸಹಕಾರಿಯಾಗಲಿದೆ. ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಪೂರ್ವಭಾವಿಯಾಗಿ ಸಮಾಜದ ಮೂಲಕ ಸಹಾಯ-ಹುಡುಕುವ ಮತ್ತು ಬೆಂಬಲಿಸುವ ನಡವಳಿಕೆಗಳನ್ನು ಜನಸಾಮಾನ್ಯರಲ್ಲಿ ಉತ್ತೇಜಿಸುವ ಮೂಲಕ ಆತ್ಮಹತ್ಯೆಯನ್ನು ತಡೆಗಟ್ಟುವುದು ಇದರ ಕೇಂದ್ರ ಉದ್ದೇಶವಾಗಿದೆ.


'ಪ್ರತ್ಯಾಹಾರ್' ತನ್ನ ಚಿತ್ರಣಗಳು ಮತ್ತು ಭಾವನಾತ್ಮಕ ವಿಚಾರಗಳಿಂದ ಪ್ರೇಕ್ಷಕರನ್ನು ಮತ್ತು ಹಾಜರಾದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕಾರ್ಯಕ್ರಮವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಕೌನ್ಸಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಕೌನ್ಸೆಲರ್ ಅಂಕಿತ್ ಕುಮಾರ್ ಸಂಯೋಜಿಸಿದರು.




إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top