ತಾಯತೊಟ್ಟಿ ದೇವಸ್ಥಾನದಲ್ಲಿ ಗಡಿನಾಡ ತಂಡದಿಂದ ನೃತ್ಯ ವೈಭವ

Upayuktha
0


ಕಾಸರಗೋಡು: ನವರಾತ್ರಿ ಮಹೋತ್ಸವದ ಪ್ರಯುಕ್ತ ಕಾಸರಗೋಡು ತಾಯತೊಟ್ಟಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ನಡೆದ 125 ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವನ್ನು ಸಹಸ್ರಾರು ಕಲಾಭಿಮಾನಿಗಳು ವೀಕ್ಷಿಸಿ ಯಶಸ್ವೀ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ದೇವಸ್ಥಾನದ ಸ್ವಾಮೀಜಿಯವರು ಶ್ರೀ ದೇವಿಯ ಸಾನಿಧ್ಯದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಹಾಗೂ ಸಂಸ್ಥೆಯ ಎಲ್ಲಾ ಕಲಾವಿದರಿಗೆ ದೇವರ ಪ್ರಸಾದ ನೀಡಿ ಪ್ರಾರ್ಥನೆ ಮಾಡಿ ಹರಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಲಾಪೋಷಕರಾದ ಸತೀಶ್ ಭಟ್, ಶಾಂತಾ ಪಜಿಲ, ಅಚ್ಯುತ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top