ಆಮ್ವೇ ನ್ಯೂಟ್ರಿಲೈಟ್‍ಗೆ ಎನ್‍ಎಫ್‍ಎಸ್‍ಯು ಮನ್ನಣೆ

Chandrashekhara Kulamarva
0


ಮಂಗಳೂರು: ಆಮ್ವೇಯ ಜನಪ್ರಿಯ ಆರೋಗ್ಯ ಮತ್ತು ಯೋಗಕ್ಷೇಮ ಬ್ರ್ಯಾಂಡ್ ನ್ಯೂಟ್ರಿಲೈಟ್ ಪ್ರತಿಷ್ಠಿತ ವಿಶ್ವಾಸಾರ್ಹ ಪ್ರಮಾಣೀಕರಣ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್‍ಎಫ್‍ಎಸ್‍ಯು)ದಿಂದ ಮನ್ನಣೆ ಪಡೆದಿದೆ. ಕ್ರೀಡಾಪಟುಗಳಿಗೆ ಪೌಷ್ಟಿಕಾಂಶ ಪೂರಕ ಪರೀಕ್ಷೆಯ ವಿಶ್ವಾಸಾರ್ಹ ಉತ್ಪನ್ನ ಎಂದು ಪರಿಗಣಿಸಲ್ಪಟ್ಟಿದೆ. ಈ ಮನ್ನಣೆಯು ಅತ್ಯಧಿಕ ಗುಣಮಟ್ಟದ, ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ಬೆಂಬಲಿತ ಪೋಷಣೆಯುಕ್ತ ಉತ್ಪನ್ನಗಳನ್ನು ಒದಗಿಸುವ ಆಮ್ವೇ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಜನೀಶ್ ಚೋಪ್ರಾ ಹೇಳಿದ್ದಾರೆ.


ಗುಜರಾತಿನ ಎನ್‍ಎಫ್‍ಎಸ್‍ಯುನಲ್ಲಿರುವ ಕ್ರೀಡಾ ಪೌಷ್ಠಿಕಾಂಶ ಪೂರಕಗಳನ್ನು ಪರೀಕ್ಷಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಸೌಲಭ್ಯವಾದ ಸೆಂಟರ್ ಆಫ್ ಎಕ್ಸಲೆನ್ಸ್ - ನ್ಯಾಷನಲ್ ಸಪ್ಲಿಮೆಂಟ್ ಟೆಸ್ಟಿಂಗ್ ಫಾರ್ ಸ್ಪೋಟ್ರ್ಸ್‍ಪರ್ಸನ್ಸ್ ಈ ವಿಶ್ವಾಸಾರ್ಹ ಮನ್ನಣೆ ನೀಡಿದೆ.


ಗೃಹ ಸಚಿವಾಲಯ, ಎಫ್‍ಎಸ್‍ಎಸ್‍ಎಐ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ತ್ರಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಸ್ಥಾಪನೆಯಾದ ಇದು ವಾಡಾ ನಿಷೇಧಿತ ವಸ್ತುಗಳ ವಿರುದ್ಧ ಸುಧಾರಿತ ವಿಶ್ಲೇಷಣಾತ್ಮಕ ಮತ್ತು ಬ್ಯಾಚ್-ವಾರು ಪರೀಕ್ಷೆಯನ್ನು ನಡೆಸುತ್ತದೆ.


ಇದು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ನಿಗದಿಪಡಿಸಿದ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತವೆ. ಈ ಉತ್ಪನ್ನ ಶ್ರೇಣಿಯಲ್ಲಿ ನ್ಯೂಟ್ರಿಲೈಟ್ ಆಲ್ ಪ್ಲಾಂಟ್ ಪ್ರೋಟೀನ್, ನ್ಯೂಟ್ರಿಲೈಟ್ ಕ್ಯಾಲ್ ಮ್ಯಾಗ್ ಡಿ ಪ್ಲಸ್ ಕೆ2, ಬೋಸ್ವೆಲಿಯಾ ಜೊತೆ ನ್ಯೂಟ್ರಿಲೈಟ್ ಗ್ಲುಕೋಸಮೈನ್ ಎಚ್‍ಸಿಎಲ್, ನ್ಯೂಟ್ರಿಲೈಟ್ ಸಾಲ್ಮನ್ ಒಮೆಗಾ 3 ಸಾಫ್ಟ್‍ಜೆಲ್‍ಗಳು ಮತ್ತು ನ್ಯೂಟ್ರಿಲೈಟ್ ಡೈಲಿ ಪ್ಲಸ್ ಸೇರಿದೆ ಎಂದು ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top