ಪ್ರತಿ ವರ್ಷದ ಮೈಸೂರು ದಸರಾ ಆಚರಣೆ ನೋಡುವಾಗ, ಇದರ ಹಿನ್ನೆಲೆಯಲ್ಲಿ ನವರಾತ್ರಿಯ ದೇವಿ ಪೂಜೆ, ವಿಜಯನಗರ ಸಾಮ್ರಾಜ್ಯದ ದಸರಾ, ಮೈಸೂರಿನ ಒಡೆಯರ್ ರಾಜ ಮನೆತನ, ಮೈಸೂರು ಅರಮನೆ, ಹಿಂದಿನ ಹಾಗೂ ಇಂದಿನ ನವರಾತ್ರಿ ಹಾಗೂ ದಸರಾ ಚಟುವಟಿಕೆಗಳು, ಇವೆಲ್ಲವುಗಳನ್ನೂ ನಾವು ಮೆಲುಕು ಹಾಕಬೇಕಾಗುತ್ತದೆ.
ನವರಾತ್ರಿ ವೈಭವ: ನವರಾತ್ರಾ ಶಬ್ದ ಅಶ್ವಿನಾ, ಶುಕ್ಲ ಪ್ರತಿಪದಮಾರಭ್ಯ ಮಹಾನವಮಿ ಪರ್ಯಂತ, ಕ್ರಿಯಾ ಮನ ಕರ್ಮ ನಾಮಧೇಯಂ. ಅಶ್ವಿನ್ ಮಾಸದ ಮೊದಲರ್ಧದಲ್ಲಿ, ಮೊದಲ ದಿನದಿಂದ 9ನೇ ದಿನದವರೆಗೆ ನಡೆಸುವ ಆಧ್ಯಾತ್ಮಿಕ ಕ್ರಿಯೆಗಳಿಗೆ, ನವರಾತ್ರಿ ಎನ್ನುತ್ತಾರೆ. ನವರಾತ್ರಿಗಳಲ್ಲಿ ವಸಂತ, ಗುಪ್ರ, ಪೌಶ ಹಾಗೂ ಮಾಘ ನವರಾತ್ರಿಗಳಿದ್ದರೂ, ಶರತ್ ನವರಾತ್ರಿಯೇ ಪ್ರಧಾನವಾದುದು. ಆಶ್ವಯುಜ ಮಾಸದ ಪಾಡ್ಯದಿಂದ ದಶಮಿಯವರೆಗೆ ನವರಾತ್ರಿ ಆಚರಣೆ. ಇಡೀ ಸೃಷ್ಠಿಯ ಗರ್ಭವೇ ಶಕ್ತಿ. ಇದೇ ದೈವಿಕ ಮಾತೆ– ದೇವಿ. ನಮ್ಮ ದೇಶದಲ್ಲಿ ಹಿಂದಿನಿAದ ಮಹಿಳಾ ದೇವತೆಗಳನ್ನು ತಾಯಿಯ ರೂಪದಲ್ಲಿ ಪೂಜಿಸುವ ಶಕ್ತಿ ಸಂಪ್ರದಾಯಯವಿದೆ. ಬ್ರಹ್ಮಾಂಡ ಶಕ್ತಿಯ ಸೃಷ್ಟಿ, ನಾಶ, ಹಾಗೂ ಪುನರ್‌ಸೃಷ್ಟಿಯ ಮೂಲವಾಗಿದ್ದಾಳೆ ದೇವಿ. ಕೆಟ್ಟದರ ವಿರುದ್ಧ ಉತ್ಪತ್ತಿಯಾಗುವ ಸಾತ್ವಿಕ ಕೇಂದ್ರದ ಮಹಾಶಕ್ತಿಯಾಗಿದ್ದಾಳೆ ದುರ್ಗಾ.
ಮಾರ್ಕಂಡೇಯ ಪುರಾಣದ ಭಾಗವಾಗಿರುವ, ದುರ್ಗಾ ಸಪ್ತಶತಿ ಅಥವಾ ಚಂಡಿಪಥ 700 ಶ್ಲೋಕಗಳನ್ನು ಒಳಗೊಂಡಿದೆ. ದೇವಿ ಭಾಗವತ ಪುರಾಣದೊಂದಿಗೆ, ದೇವಿ ಉಪನಿಷದ್‌ನಂತಹ ಶಾಕ್ತ ಉಪನಿಷದ್‌ಗಳೂ, ಶಕ್ತಿ ಸಂಪ್ರದಾಯದ ಆಧಾರಗಳಾಗಿವೆ. ದೇವಿಯು ಧನಾತ್ಮಕ ಶಕ್ತಿಯ ಸಂಗ್ರಹ. ಕೆಡುಕಿನ ಮೇಲಿನ ಒಳಿತಿನ ಗೆಲುವು, ಶರತ್ ನವರಾತ್ರಿ ಉತ್ಸವದ ಆಧಾರ.
ಆಚರಣೆ: 9 ದಿನಗಳಲ್ಲಿ ಮೊದÀಲ ಮೂರು ದಿನಗಳು ತಾಮಸಿಕ; ನಂತರ 3 ದಿನಗಳು ರಾಜಸಿಕ; ಕೊನೆಯ 3 ದಿನಗಳು ಸಾತ್ಮಿಕ. ಮೊದಲ 3 ದಿನಗಳಲ್ಲಿ ದೇವಿಯ ಶಕ್ತಿಯನ್ನು ಕುಮಾರಿ ಪಾರ್ವತಿ ಹಾಗೂ ಕಾಳಿಯಾಗಿ ಪೂಜಿಸುತ್ತಾರೆ. ಕುಮಾರಿ ಬಾಲಕಿಯನ್ನೂ, ಪಾರ್ವತಿ ಯುವತಿಯನ್ನೂ, ಕಾಳಿ ಪ್ರೌಢ ಮಹಿಳೆಯನ್ನೂ ಪ್ರತಿನಿಧಿಸುತ್ತಾರೆ. ನವರಾತ್ರಿಯ 9 ರಾತ್ರಿಗಳಲ್ಲಿ, ಮೊದಲ ಮೂರು ದಿನಗಳು ಪಾರ್ವತಿ/ದುರ್ಗಾದೇವಿಯ ಆರಾಧನೆಗೆ ಮೀಸಲು. ದುರ್ಗಾಪೂಜೆಯಿಂದ, ನಮ್ಮಲ್ಲಿ ಹಾಗೂ ಪ್ರಪಂಚದಲ್ಲಿರುವ ಋಣಾತ್ಮಕ ಪ್ರವೃತ್ತಿಗಳನ್ನು ದೂರಮಾಡಿ, ಧನಾತ್ಮಕ ಗುಣಗಳನ್ನು ತುಂಬಿ, ದೈವಿಕ ಸಂಪತ್ತು ಕರುಣಿಸಲು, ಶ್ರೀ ದುರ್ಗಾ ಸಪ್ತ ಶ್ಲೋಕದಲ್ಲಿರುವಂತೆ, ದುರ್ಗೆ ಸ್ಮೃತ ಹರಾಸಿ ಭೀತಂ ಅಶೇಷ ಜಂತೋಹ್ / ಸ್ವಾಸ್ಥೈ ಸ್ಮೃತ ಮತಿಮತಿ ವ ಶಂಭ ದದಾಸಿ /ದಾರಿದ್ರ್ಯ ದುಃಖ, ಭಯಾ ಹರಿಣಿ ಕಾ ತ್ವಥ್ ಅನ್ಯ / ಸರ್ವೋಪಕಾರ ಕಾರಣ್ಯಾ ಸದಾರ್ದ್ರ ಚಿತ್ತ/ ಎಂದು ನಾವು ಬೇಡಿಕೊಳ್ಳುತ್ತೇವೆ.
ಸಂಪತ್ತು, ಸಮೃದ್ಧಿ, ಆವಶ್ಯಕತೆಗಳನ್ನು ಪೂರೈಸಲು, ಮುಂದಿನ ಮೂರು ದಿನ, ದೇವಿಯನ್ನು ಲಕ್ಷಿö್ಮದೇವಿಯ ರೂಪದಲ್ಲಿ ಪೂಜಿಸುತ್ತೇವೆ. ಕೊನೆಯ 3 ದಿನಗಳನ್ನು ಪರಮ ಜ್ಞಾನ ದಯಪಾಲಿಸೆಂದು ಸರಸ್ವತಿ ರೂಪದಲ್ಲಿ ಪೂಜಿಸುತ್ತೇವೆ. ಮಹಾನವಮಿಯಂದು ಕನ್ಯಾ ಪೂಜೆಯ ಅಂಗವಾಗಿ 9 ಬಾಲಕಿಯರಿಗೆ ಕಾಣಿಕೆ, ಆಹಾರ ಕೊಟ್ಟು ಪೂಜಿಸುತ್ತಾರೆ. ನಮ್ಮ ಸಂತತಿ ಹಾಗೂ ವಿಶ್ವದ ಉಳಿಕೆಗಾಗಿ, ಮಹಿಳಾ ತತ್ವ ಹಾಗೂ ಶಕ್ತಿಯನ್ನು ಪೂಜಿಸುತ್ತೇವೆ. ನಮ್ಮ ದೇಶದಲ್ಲಿ 51 ಶಕ್ತಿಪೀಠಗಳು ಹಾಗೂ 18 ಮಹಾಶಕ್ತಿ ಪೀಠಗಳಿವೆ. 8 ಬೆಟ್ಟಗಳಿಂದ ಸುತ್ತಲ್ಪಟ್ಟ ತ್ತಿಮುಟ ಕ್ಷೇತ್ರ ಎಂದು ಕರೆವ ಮೈಸೂರಿನ ಚಾಮುಂಡಿ ಬೆಟ್ಟ ಕ್ರೌಂಚ ಪೀಠವಾಗಿದ್ದು, ಇದೂ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಆದ್ದರಿಂದ ನವರಾತ್ರಿಯನ್ನು ದೇವಿ ಪೂಜೆಯ ದ್ಯೋತಕವಾಗಿ ದುರ್ಗಾ ನವರಾತ್ರಿ ಎಂದೂ ಕರೆಯುತ್ತಾರೆ. ಮಹಿಷ ಮಂಡಲದ ರಾಜ ಮಹಿಷಾಸುರ. ಈತನಿಂದಲೇ ಮಹಿಷೂರು ಎಂಬ ಹೆಸರು ಬಂದು, ಅದೇ ಮುಂದೆ ಮೈಸೂರು ಆಗಿದೆಯಂತೆ. ಮಹಿಷಾಸುರ ಕ್ರೂರ ರಾಕ್ಷಸನಾಗಿ ವರ ಪಡೆದು ಜಗವನ್ನೇ ನಡುಗಿಸಿದ. ಸಿಂಹವೇರಿ ಬಂದ ಚಾಮುಂಡಿ, ಕೋಣನರೂಪದ ಮಹಿಷಾಸುರನನನ್ನು ವಧಿಸಿ ಮಹಿಷಾಪುರ ಮರ್ಧಿನಿಯಾದಳು. ಅಂತೆಯೇ ಹಿಂದೆ ಮೈಸೂರಿನ ರಾಜರಾಗಿದ್ದ ಒಡೆಯರ್ ರಾಜದಂಪತಿಗಳು ಚಾಮುಂಡಿ ಬೆಟ್ಟದಲ್ಲಿ, ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ, ನವರಾತ್ರಿ/ದಸರಾ ಉತ್ಸವಾಚರಣೆ ಆರಂಭವಾಗುತ್ತಿತ್ತು.
ಹಂಪಿ ನೋಡಿ ಬಂದವರು, ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿದವರು ಬಲ್ಲಂತೆ ನವರಾತ್ರಿ ವಿಜಯನಗರದ ರಾಯರ ನಾಡಹಬ್ಬ. ರಾಜ್ಯ ಉತ್ಸವವಾಗಿತ್ತು. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ, ಈ ಹಬ್ಬದಾಚರಣೆ ಉತ್ತುಂಗ ಶಿಖರಕ್ಕೇರಿತು. ಹಂಪಿಯ ವರ್ಣರಂಜಿತ ಉತ್ಸವ ನೋಡಲು ವಿಜಯನಗರದ ರಾಜರು ದಿಬ್ಬ ಹತ್ತಿ ನೋಡುತ್ತಿದ್ದರಂತೆ. ಅದೇ ಈಗ ಮಹಾನವಮಿ ದಿಬ್ಬ ಎಂದು ಹೆಸರಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಕ್ರಿ.ಶ. 1336ರಿಂದ 1565ರವರೆಗೆ ನವರಾತ್ರಿ ನಾಡ ಹಬ್ಬವಾಗಿತ್ತು. ಕ್ರಿ.ಶ. 1399ರಲ್ಲಿ ಮೈಸೂರಿನಲ್ಲಿ ವಿಜಯ ಯದುರಾಯ ಒಡೆಯರ್ ಮನೆತನದ ಆಳ್ವಿಕೆ ಆರಂಭಿಸಿದರು. ಆತನ ನಂತರ ಈ ರಾಜ ಮನೆತನದಲ್ಲಿ 24 ರಾಜರಾದರು. ಮೈಸೂರು ಅರಮನೆಯ ಒಡೆಯರ್ ರಾಜಮನೆತನದ ಲಾಂಛನ ಗಂಡಭೇರುಂಡ. ಯದುರಾಜ ಒಡೆಯರ್ 1399ರಲ್ಲಿ ಆರಂಭಿಸಿದ ಆಳ್ವಿಕೆ ಕಾಲದಲ್ಲಿ ಮೈಸೂರು ಚಿಕ್ಕ ಪಟ್ಟಣವಾಗಿತ್ತು. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಇದು, 1565ರ ವಿಜಯನಗರ ಪತನದ ನಂತರ ಸ್ವತಂತ್ರವಾಯಿತು. ಕ್ರಿ.ಶ.1578ರಿಂದ 1617ರವರೆಗೆ ಆಳಿದ ರಾಜ ಒಡೆಯರ್, 1610ರಲ್ಲಿ ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡರು. 1610ರಲ್ಲಿ, ರಾಜ ಒಡೆಯರ್, ಶ್ರೀರಂಗಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವ ಆಚರಣೆ ಆರಂಭಿಸಿದರು.
1762ರಲ್ಲಿ ಸೈನ್ಯದ ದಳವಾಯಿ ಹೈದರ್‌ಆಲಿ ಆಡಳಿತ. ಹೈದರ್‌ಆಲಿ ಹಾಗೂ ಟಿಪ್ಪು ಆಳ್ವಿಕೆಯಲ್ಲಿ, ಪಟ್ಟದಲ್ಲಿ ನಾಮಕಾವಸ್ತೆ ಒಡೆಯರ್ ರಾಜನನ್ನು ಕೂರಿಸಿ, ದಸರಾ ಆಚರಣೆ ಕ್ರಿ.ಶ.1799ರವರೆಗೆ ಮುಂದುವರೆಸಿದರು. ಈ ಮನೆತನದ 22ನೇ ರಾಜರಾದ 3ನೇ ಕೃಷ್ಣರಾಜ ಒಡೆಯರ್ 1805ರಿಂದ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ವಿಶೇಷ ದರ್ಬಾರ್ ಮಾಡಲು ಸಂಪ್ರದಾಯ ಆರಂಭಿಸಿದರು. ಇವರು. ಪ್ರತೀವರ್ಷ ದಸರಾ ಕೈಗಾರಿಕಾ ಪ್ರದರ್ಶನ ಏರ್ಪಡಿಸಿದರು. ಪ್ರಪಂಚದಾದ್ಯಂತ ಪ್ರವಾಸಿಗರು ದಸರಾ ಸಂದರ್ಭದಲ್ಲಿ ಝಗಝಗಿಸುವ ಮೈಸೂರು ಅರಮನೆ ಕಾಣಲು ಬರುತ್ತಾರೆ. 3ನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ, ನವರಾತ್ರಿ ದಸರಾ, ಎಲ್ಲಾ ಹಬ್ಬಗಳಲ್ಲಿ, ಒಟ್ಟಿನಲ್ಲಿ ಇಡೀ ವರ್ಷ ಸಂಗೀತ, ಕಲೆಗಳೂ ಮರೆಯುವಂತಾಗಿದ್ದವು. 3ನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ, ನವರಾತ್ರಿ ದಸರಾ, ಎಲ್ಲಾ ಹಬ್ಬಗಳಲ್ಲಿ, ಇಡೀ ವರ್ಷ ಸಂಗೀತ, ಕಲೆಗಳೂ ಮರೆಯುವಂತಾಗಿದ್ದವು. ದಸರಾ ಸಂದರ್ಭದಲ್ಲಿ ಮಾತ್ರ ದರ್ಬಾರ್‌ಗಾಗಿ ತೆಗೆದಿರಿಸುವ ಮೈಸೂರು ಅರಮನೆಯ ಅಮೂಲ್ಯ ಸುವರ್ಣ ಸಿಂಹಾಸನ. ಅಂಬಾ ವಿಲಾಸ ಅರಮನೆಯಲ್ಲಿ ಇದೆ.
ಮೈಸೂರಿನ ಎಲ್ಲ ಮಹಾರಾಜರೂ ಅರಮನೆಯಲ್ಲಿ 9 ದಿನ ನವರಾತ್ರಿ ದರ್ಬಾರ್ ನಡೆಸುತ್ತಿದ್ದರು. ಈ ದರ್ಬಾರ್‌ನಲ್ಲಿ ಭಾಗವಹಿಸಲು ಅರಮನೆಗೆ ಸಂಬಂಧಿಸಿದವರು, ಅಧಿಕಾರಿಗಳು ಮೈಸೂರಿನ ಗಣ್ಯ ನಾಗರಿಕರು ಹಾಗೂ ಆಹ್ವಾನಿತರಿಗೆ ವಿಶೇಷ ಆಹ್ವಾನ ಪತ್ರ ಬರುತ್ತಿತ್ತು. ಆದರೆ ದರ್ಬಾರಿಗೆ ಹೋಗುವವರು, ಅಲ್ಲಿಯ ಪ್ರವೇಶಕ್ಕೆ ನಿಗದಿಪಡಿಸಿದ ವಸ್ತ್ರ ಶಿಸ್ತನ್ನು ಪಾಲಿಸಬೇಕಿತ್ತು. ಆಗ ಪ್ರತಿದಿನ ದರ್ಬಾರಿನಲ್ಲಿ ಆಸ್ಥಾನ ಸಂಗೀತ ಕಲಾವಿದರ ಹಾಗೂ ಹೊರಗಿನಿಂದ ಬಂದ ಉತ್ತಮ ಕಲಾವಿದರ ಸಂಗೀತ ಕಾರ್ಯ ಕ್ರಮಗಳನ್ನು, ದರ್ಬಾರಿನಲ್ಲಿ ಎಲ್ಲರೊಂದಿಗೆ ಮಹಾರಾಜರೂ ಆಸ್ವಾದಿಸುತ್ತಿದ್ದರು.
ಈ ದರ್ಬಾರು ಸಂಪ್ರದಾಯ, ಒಡೆಯರ್ ರಾಜಮನೆತನ ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವ ಮೂಲಕ ಮುಂದುವರೆದಿದೆ. 10ನೇ ಚಾಮರಾಜ ಒಡೆಯರ್ 1880ರಿಂದ ಆರಂಭಿಸಿದ ಮೈಸೂರು ದಸರಾ ವಸ್ತು ಪ್ರದರ್ಶನ ಈಗಲೂ ಮುಂದುವರೆದಿದೆ. ಪ್ರಪಂಚದಾದ್ಯಂತ ಪ್ರವಾಸಿಗರು ದಸರಾ ಸಂದರ್ಭದಲ್ಲಿ ಝಗಮಗಿಸುವ ಮೈಸೂರು ಅರಮನೆ ಕಾಣಲು ಬರುತ್ತಾರೆ. ಮೈಸೂರಿನ ಎಲ್ಲ ಮಹಾರಾಜರೂ ಮೈಸೂರು ಅರಮನೆಯಲ್ಲಿ 9 ದಿನ ನವರಾತ್ರಿ ದರ್ಬಾರ್ ನಡೆಸುತ್ತಿದ್ದರು. ಆಗ ಪ್ರತಿದಿನ ದರ್ಬಾರಿನಲ್ಲಿ ಆಸ್ಥಾನ ಸಂಗೀತ ಕಲಾವಿದರ ಹಾಗೂ ಹೊರಗಿನಿಂದ ಬಂದ ಉತ್ತಮ ಕಲಾವಿದರ ಸಂಗೀತ ಕಾರ್ಯ ಕ್ರಮಗಳನ್ನು, ದರ್ಬಾರಿನಲ್ಲಿ ಎಲ್ಲರೊಂದಿಗೆ ಮಹಾರಾಜರೂ ಆಸ್ವಾದಿಸುತ್ತಿದ್ದರು. ಈ ದರ್ಬಾರ್‌ನಲ್ಲಿ ಭಾಗವಹಿಸಲು ಅರಮನೆಗೆ ಸಂಬಂಧಿಸಿದವರು, ಅಧಿಕಾರಿಗಳು ಮೈಸೂರಿನ ಗಣ್ಯ ನಾಗರಿಕರು ಹಾಗೂ ಆಹ್ವಾನಿತರಿಗೆ ವಿಶೇಷ ಆಹ್ವಾನ ಪತ್ರ ಬರುತ್ತಿತ್ತು. ಆದರೆ ದರ್ಬಾರಿಗೆ ಹೋಗುವವರು, ಅಲ್ಲಿಯ ಪ್ರವೇಶಕ್ಕೆ ನಿಗದಿಪಡಿಸಿದ ವಸ್ತ್ರ ಶಿಸ್ತನ್ನು ಪಾಲಿಸಬೇಕಿತ್ತು.
- ಎನ್ ವಿ ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು,
ಆಕಾಶವಾಣಿ.
9845565238
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ