ಜಿಲ್ಲಾ ಮಟ್ಟದ ಈಜು ಸ್ಪರ್ಧೆ ; ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Upayuktha
0



ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಉತ್ತರವಲಯ ಹಾಗೂ ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆ, ಊರ್ವ ಮಂಗಳೂರು ಇವರ ಸಹಯೋಗದಲ್ಲಿ 2025-26ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ - ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 1 ಚಿನ್ನ, 2 ಬೆಳ್ಳಿ, 5 ಕಂಚಿನ ಪದಕಗಳೊಂದಿಗೆ ಒಟ್ಟು8 ಪದಕಗಳನ್ನು ಗಳಿಸಿದರು. ಈ ಮೂಲಕ ಮುಂದೆ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.  


ಫಲಿತಾಂಶ : ಅಭಿಷೇಕ್ 4೦೦ ಮೀ. ವೈಯಕ್ತಿಕ ಈಜು (ಪ್ರಥಮ ಸ್ಥಾನ), 5೦ ಮೀ. ಬಟರ್ ಪ್ಲೈ (ತೃತೀಯ ಸ್ಥಾನ), 1೦೦ ಮೀ. ಫ್ರೀ ಸ್ಟೈಲ್ (ದ್ವಿತೀಯ ಸ್ಥಾನ), ಅಭಿನವ್ ಕೃಷ್ಣ ಎಚ್ ಆರ್  1೦೦ ಮೀ. ಬ್ಯಾಕ್ ಸ್ಟ್ರೋಕ್ (ದ್ವಿತೀಯ ಸ್ಥಾನ), ವರ್ಚಸ್ವಿ ಎ ಪಿ 5೦ ಮೀ. ಫ್ರೀ ಸ್ಟೈಲ್ (ತೃತೀಯ ಸ್ಥಾನ), 5೦ ಮೀ ಬ್ಯಾಕ್ ಸ್ಟ್ರೋಕ್ (ತೃತೀಯ ಸ್ಥಾನ), ಆಯುಷ್ ಪ್ರವೀಣ್ 1೦೦ ಮೀ. ಬ್ಯಾಕ್ ಸ್ಟ್ರೋಕ್ (ತೃತೀಯ ಸ್ಥಾನ), 1೦೦ ಮೀ. ಫ್ರೀ ಸ್ಟೈಲ್ (ತೃತೀಯ ಸ್ಥಾನ). ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top