36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

Upayuktha
0



ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರುನಲ್ಲಿ ಸೆಪ್ಟೆಂಬರ್ 23ರಿಂದ 25ರವರೆಗೆ ನಡೆಯುತ್ತಿರುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29 ಮಂದಿ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದರೆ.


ಒಂದೇ ಸಂಸ್ಥೆಯಿಂದ  29 ಕ್ರೀಡಾಪಟುಗಳು ಸ್ಪರ್ಧೆಗೆ ಅವಕಾಶ ಪಡೆದಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ. ಇವರಲ್ಲಿ 10 ಮಂದಿ ಬಾಲಕಿಯರು ಹಾಗೂ 19 ಮಂದಿ ಬಾಲಕರು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.


ಬಾಲಕಿಯರ ವಿಭಾಗ: ಐಶ್ವರ್ಯ (ಚಕ್ರ ಎಸೆತ, ಗುಂಡು ಎಸೆತ), ಗೀತಾ          (400 ಮೀ., 4*400 ರಿಲೇ), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ         (ಉದ್ದ ಜಿಗಿತ), ಭಾಗೀರಥಿ (3 ಕಿ.ಮೀ ನಡಿಗೆ), ನಂದಾ (ಜಾವಲಿನ್ ಎಸೆತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ (ತ್ರ‍್ರಯಥ್ಲಾನ್ ಸಿ), ಸುಜಾತ ವೈ (ತ್ರಯಥ್ಲಾನ್ ಸಿ).


ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಮಹಮ್ಮದ್ ತಬ್ಶೀರ್ (ತ್ರಿವಿಧ ಜಿಗಿತ), ಗುರು (ಹೆಪ್ಟಾಥ್ಲಾನ್), ಯಶವಂತ (800 ಮೀ., 4 X 400 ರಿಲೇ), ದಯಾನಂದ    (400 ಮೀ., 4 X 400 ರಿಲೇ), ದರ್ಶನ (5 ಕಿ.ಮೀ ನಡಿಗೆ), ರಾಮು (400 ಮೀ., 4 X 400 ರಿಲೇ), ಸರ್ವಜಿತ್ (4 X 100 ರಿಲೇ), ಅಬ್ದುಲ್ ರಜಾಕ್ (ಹ್ಯಾಮರ್ ಎಸೆತ), ಕೇಶವ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಡೈನ್ದೇವ್ (800 ಮೀ. ಹರ್ಡಲ್ಸ್), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್ ಎಸೆತ), ಪ್ರಣವ್ (ತ್ರಯಥ್ಲಾನ್ ಎ), ಆದರ್ಶ್ (ತ್ರಯಥ್ಲಾನ್ ಬಿ), ಸುಭಾಶ್ (ತ್ರಯಥ್ಲಾನ್ ಸಿ).


ಆಯ್ಕೆಯಾದ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top