ಮಂಗಳೂರು: ಉಕ್ಕು ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಿಂದಾಲ್ (ಇಂಡಿಯಾ) ಲಿಮಿಟೆಡ್, ಮಂಗಳೂರಿನಲ್ಲಿ ತನ್ನ ಪ್ರಮುಖ 'ಮಿಲಾಪ್' ಚಿಲ್ಲರೆ (ಬಿಡಿ ಮಾರಾಟ) ವ್ಯಾಪಾರಿ ಚಿಲ್ಲರೆ ವ್ಯಾಪಾರಿ ಸಭೆ ಆಯೋಜಿಸಿತ್ತು.
ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಸುಮಾರು 120 ಚಿಲ್ಲರೆ ವ್ಯಾಪಾರಿಗಳು ಭಾಗವಹಿಸಿದ್ದರು. ಇದು ಈ ಪ್ರದೇಶದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಸಭೆಯಲ್ಲಿ ಕಂಪನಿಯು, ಸುಧಾರಿತ ಲೇಪಿತ ಉಕ್ಕಿನ ಉತ್ಪನ್ನಗಳ ಸರಣಿಯ ಮೇಲೆ ಬೆಳಕು ಚೆಲ್ಲಿತು. ಪ್ರತಿಯೊಂದು ಉತತ್ಪನ್ನದ ಕಾರ್ಯಕ್ಷಮತೆ ಮತ್ತು ಬಾಳಿಕೆಗೆ ಒತ್ತು ನೀಡುವ ಮೂಲಕ ಉದ್ಯಮ-ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವಂತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹೊಚ್ಚಹೊಸ ಉತ್ಪನ್ನವಾದ ಜಿಂದಾಲ್ ಸಬ್ರಂಗ್, ಹೊರಾಂಗಣ ಸೆಟ್ಟಿಂಗ್‍ಗಳಲ್ಲಿ ಅಸಾಧಾರಣ ತುಕ್ಕು ನಿರೋಧಕತೆ ನೀಡಲು ವಿನ್ಯಾಸಗೊಳಿಸಲಾದ ಬಣ್ಣ-ಲೇಪಿತ ಆಯ್ಕೆಗಳ ರೋಮಾಂಚಕ ಶ್ರೇಣಿಯೊಂದಿಗೆ ಉಕ್ಕಿನ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಸೌಂದರ್ಯದ ಬಹುಮುಖತೆ ಮತ್ತು ದೀರ್ಘಕಾಲೀನ ಕಾರ್ಯಕ್ಷಮತೆಯೊಂದಿಗೆ ಸಂಯೋಜಿಸುವ ಕಂಪನಿಯ ಉತ್ಕøಷ್ಟ ಶ್ರೇಣಿಯ ಲೇಪಿತ ಉಕ್ಕಿನ ಉತ್ಪನ್ನ ನ್ಯೂಕಲರ್+ ಕೂಡಾ ಪರಿಚಯಿಸಲಾಯಿತು. ಇದು ತುಕ್ಕು ಮತ್ತು ಬಣ್ಣ ಮಸುಕಾಗುವಿಕೆಗೆ ಉತ್ತಮ ಪ್ರತಿರೋಧ ಖಾತ್ರಿಪಡಿಸುವ ವಿಶೇಷ ಲೇಪನ ಪ್ರಕ್ರಿಯೆಯನ್ನು ಒಳಗೊಂಡಿದೆ ಎಂದು ಪ್ರಕಟಣೆ ಹೇಳಿದೆ.
'ಮಿಲಾಪ್' ಮೂಲಕ, ನಾವು ನಮ್ಮ ಮೌಲ್ಯಯುತ ಚಿಲ್ಲರೆ ವ್ಯಾಪಾರಿ ಪಾಲುದಾರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುತ್ತಿದ್ದೇವೆ, ಅವರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ ಮತ್ತು ನಮ್ಮ ಇತ್ತೀಚಿನ ಉತ್ಪನ್ನ ಕೊಡುಗೆಗಳನ್ನು ಪ್ರದರ್ಶಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಪರಿಹಾರಗಳೊಂದಿಗೆ ವಿಕಸನಗೊಳ್ಳುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಮ್ಮ ಪಾಲುದಾರರಿಗೆ ಅವಕಾಶ ನೀಡುತ್ತಿದ್ದೇವೆ" ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ